ನವದೆಹಲಿ:2023 ರ ಡಿಸೆಂಬರ್ ತ್ರೈಮಾಸಿಕದಲ್ಲಿ ಆ್ಯಪಲ್ ತನ್ನ ಐಫೋನ್ಗಳ ಮಾರಾಟದಿಂದ 69.7 ಬಿಲಿಯನ್ ಡಾಲರ್ ಆದಾಯ ದಾಖಲಿಸಿದೆ. ಕಂಪನಿಯು ಲ್ಯಾಟಿನ್ ಅಮೆರಿಕ, ಪಶ್ಚಿಮ ಯುರೋಪ್, ಮಧ್ಯಪ್ರಾಚ್ಯ ಮತ್ತು ಕೊರಿಯಾ ಸೇರಿದಂತೆ ಹಲವಾರು ದೇಶಗಳು ಮತ್ತು ಪ್ರದೇಶಗಳಲ್ಲಿ ಸಾರ್ವಕಾಲಿಕ ದಾಖಲೆಗಳನ್ನು ನಿರ್ಮಿಸಿದೆ. ಜೊತೆಗೆ ಭಾರತ ಮತ್ತು ಇಂಡೋನೇಷ್ಯಾದಲ್ಲಿ ಡಿಸೆಂಬರ್ ತ್ರೈಮಾಸಿಕ ಮಾರಾಟದಲ್ಲಿ ದಾಖಲೆಗಳನ್ನು ಬರೆದಿದೆ.
"ಐಫೋನ್ ಸಕ್ರಿಯ ಬಳಕೆದಾರರ ಸಂಖ್ಯೆ ಹೊಸ ಸಾರ್ವಕಾಲಿಕ ಎತ್ತರಕ್ಕೆ ಬೆಳೆದಿದೆ ಮತ್ತು ತ್ರೈಮಾಸಿಕದಲ್ಲಿ ನಾವು ಸಾರ್ವಕಾಲಿಕ ದಾಖಲೆ ಸಂಖ್ಯೆಯ ಐಫೋನ್ ಅಪ್ ಗ್ರೇಡ್ಗಳನ್ನು ನೀಡಿದ್ದೇವೆ" ಎಂದು ಆಪಲ್ ಸಿಎಫ್ಒ ಲುಕಾ ಮೇಸ್ಟ್ರಿ ಹೇಳಿದರು. ಕಾಂಟಾರ್ ನ ಸಮೀಕ್ಷೆಯ ಪ್ರಕಾರ, ಯುಎಸ್ ಮತ್ತು ಜಪಾನ್ನ ಅಗ್ರ ಐದು ಮಾಡೆಲ್ಗಳಲ್ಲಿ ನಾಲ್ಕು, ಚೀನಾ ಮತ್ತು ಯುಕೆಯ ಅಗ್ರ ಆರು ಮಾಡೆಲ್ಗಳಲ್ಲಿ ನಾಲ್ಕು ಮತ್ತು ಆಸ್ಟ್ರೇಲಿಯಾದ ಎಲ್ಲಾ ಅಗ್ರ ಐದು ಮಾಡೆಲ್ಗಳು ಐಫೋನ್ಗಳೇ ಆಗಿವೆ.
ಆ್ಯಪಲ್ ಸರ್ವಿಸಸ್ ಆದಾಯವು ಸಾರ್ವಕಾಲಿಕ ದಾಖಲೆಯ 23.1 ಬಿಲಿಯನ್ ಡಾಲರ್ ಆಗಿದ್ದು, ವರ್ಷದಿಂದ ವರ್ಷಕ್ಕೆ ಶೇಕಡಾ 11 ರಷ್ಟು ಹೆಚ್ಚಾಗಿದೆ. ಈ ವರ್ಷ ಒಂದು ವಾರ ಮಾರಾಟ ನಿಲ್ಲಿಸಿದ ಹೊರತಾಗಿಯೂ ಮ್ಯಾಕ್ $ 7.8 ಬಿಲಿಯನ್ ಆದಾಯ ಗಳಿಸಿದೆ.