Amazon Offers On OnePlus And Samsung Phones:ಹಬ್ಬದ ಸೀಸನ್‌ಗಾಗಿ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟ ಸೆಪ್ಟೆಂಬರ್ 27ರಂದು ಶುರುವಾಗುತ್ತಿದೆ. ಇದರಲ್ಲಿ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, ಟಿವಿ, ಗೃಹೋಪಯೋಗಿ ವಸ್ತುಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್ ಸೇರಿ ಅನೇಕ ರೀತಿಯ ವಸ್ತುಗಳ ಮೇಲೆ ಉತ್ತಮ ಆಫರ್‌ಗಳು ಲಭ್ಯವಾಗಲಿವೆ. ಮಾರಾಟದ ಸಮಯದಲ್ಲಿ ಖರೀದಿದಾರರು ಆಕರ್ಷಕ ಬ್ಯಾಂಕ್ ಕೊಡುಗೆಗಳು, ನೋ ಕಾಸ್ಟ್ EMI ಹಾಗು ವಿನಿಮಯ ಕೊಡುಗೆಗಳನ್ನೂ ಪಡೆಯಬಹುದು.
ಮಾರಾಟ ಪ್ರಾರಂಭವಾಗುವ ಮೊದಲೇ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ OnePlus 11R ಮತ್ತು Samsung Galaxy S21 FEನಂತಹ ಸ್ಮಾರ್ಟ್‌ಫೋನ್‌ಗಳಲ್ಲಿ ಆಕರ್ಷಕ ಕಿಕ್‌ಸ್ಟಾರ್ಟರ್ ಡೀಲ್‌ಗಳನ್ನು ನೀಡಿದೆ. ಈ ಸ್ಮಾರ್ಟ್‌ಫೋನ್‌ಗಳ ಬೆಲೆ ಕಡಿತದ ಹೊರತಾಗಿ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ ಶೇ 10ದಷ್ಟು ತ್ವರಿತ ರಿಯಾಯಿತಿ ನೀಡಲು ಅಮೆಜಾನ್ ಎಸ್‌ಬಿಐ ಜೊತೆ ಪಾಲುದಾರಿಕೆ ಹೊಂದಿದೆ.
OnePlus 11R ಡೀಲ್ ಏನು?:OnePlus 11R ಅನ್ನು ಭಾರತದಲ್ಲಿ 39,999 ರೂ ಬೆಲೆಗೆ ಬಿಡುಗಡೆ ಮಾಡಲಾಗಿದ್ದು, ಈಗ 27,999 ರೂ.ಗೆ ಖರೀದಿಸಬಹುದು. ಬ್ಯಾಂಕ್ ಕೊಡುಗೆಗಳನ್ನು ಬಳಸಿಕೊಂಡು ಖರೀದಿದಾರರು ಈ ಫೋನ್ ಅನ್ನು 26,749 ರೂ.ಗೆ ಖರೀದಿಸಬಹುದಾಗಿದೆ.
ಹ್ಯಾಂಡ್ಸೆಟ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8+ Gen 1 ಚಿಪ್ಸೆಟ್ನಿಂದ ಚಾಲಿತವಾಗಿದೆ. 120Hz ರಿಫ್ರೆಶ್ ರೇಟ್ನೊಂದಿಗೆ 6.7-ಇಂಚಿನ ಸೂಪರ್ ಫ್ಲೂಯಿಡ್ AMOLED ಡಿಸ್ಪ್ಲೇ ಹೊಂದಿದೆ. ಇದು 100W ವೇಗದ ಚಾರ್ಜಿಂಗ್ ಬೆಂಬಲಿಸುವ 5,000mAh ಬ್ಯಾಟರಿ ಹೊಂದಿದೆ.