ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಬಂದ ಯುವಕರ ಗುಂಪೊಂದು ಕುಟುಂಬದೊಂದಿಗೆ ಕಾರಿನಲ್ಲಿ ಹೋಗುತ್ತಿದ್ದ ಮಹಿಳೆಯ ಮೇಲೆ ರ‍್ಯಾಗಿಂಗ್ ಮಾಡಿರುವ ಆರೋಪ ಕೇಳಿಬಂದಿದೆ. ನಾಗರಭಾವಿಯ ಹೊರವರ್ತುಲ ರಸ್ತೆಯಲ್ಲಿ ತಡರಾತ್ರಿ 11.40ರ ಸುಮಾರಿಗೆ ಘಟನೆ ನಡೆದಿದ್ದು, ವ್ಹೀಲಿಂಗ್ ಮಾಡಿ ಭಯಪಡಿಸಿದ್ದಲ್ಲದೇ ರ‍್ಯಾಗಿಂಗ್ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು 'ಎಕ್ಸ್' ಆ್ಯಪ್‌ನಲ್ಲಿ ದೂರಿದ್ದಾರೆ.
ಬೆಂಗಳೂರು: ಕುಟುಂಬದ ಜೊತೆ ತೆರಳುತ್ತಿದ್ದವರ ಮೇಲೆ ಯುವಕರ ರ‍್ಯಾಗಿಂಗ್! - Ragging - RAGGING
ಯುವಕರ ತಂಡ ತಮ್ಮ ಮೇಲೆ ರ‍್ಯಾಗಿಂಗ್ ಮಾಡಿದ್ದಲ್ಲದೆ, ಪ್ರಶ್ನಿಸಲು ಬಂದ ವ್ಯಕ್ತಿಯ ವಿರುದ್ಧವೂ ಅವಾಚ್ಯವಾಗಿ ನಿಂದಿಸಿದರು ಎಂದು ಮಹಿಳೆಯೊಬ್ಬರು ದೂರಿದ್ದಾರೆ.
Published : Jul 8, 2024, 10:49 AM IST
ತಡರಾತ್ರಿ ಕುಟುಂಬಸ್ಥರೊಂದಿಗೆ ಕಾರಿನಲ್ಲಿ ಬರುತ್ತಿದ್ದಾಗ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ಯುವಕರು ರ‍್ಯಾಗಿಂಗ್ ಮಾಡಿದ್ದಾರೆ. ಈ ವೇಳೆ ಆರೋಪಿಗಳನ್ನು ಪ್ರಶ್ನಿಸಲು ಬಂದ ಮತ್ತೋರ್ವ ವ್ಯಕ್ತಿಯನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಫೋಟೋ ಕ್ಲಿಕ್ಕಿಸಲು ಮುಂದಾದಾಗ ಮೊಬೈಲ್ ಫೋನ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಫೋಟೋಸಹಿತ ಹಿರಿಯ ಪೊಲೀಸ್ ಅಧಿಕಾರಿಗೆ ದೂರು ನೀಡಲಾಗಿದೆ. ಇದಕ್ಕೆ ಬೆಂಗಳೂರು ನಗರ ಪೊಲೀಸ್ ಇಲಾಖೆಯ ಅಧಿಕೃತ 'ಎಕ್ಸ್' ಖಾತೆಯಿಂದ ಪ್ರತಿಕ್ರಿಯಿಸಲಾಗಿದ್ದು, ವಿವರಣೆ ನೀಡುವಂತೆ ಕೇಳಲಾಗಿದೆ.
ಇದನ್ನೂ ಓದಿ:ಬೆಂಗಳೂರು: ಅಪಾಯಕಾರಿ ವ್ಹೀಲಿಂಗ್ ಮಾಡುತ್ತಿದ್ದ ಮೂವರನ್ನು ವಶಕ್ಕೆ ಪಡೆದ ಪೊಲೀಸರು