ಬೆಳಗಾವಿ : ಹೋಟೆಲ್‌ನಲ್ಲಿ ಕಿರಿಕ್ ಮಾಡಿದ ಯುವಕನಿಗೆ ಬಿಎಸ್ಎಫ್ ಯೋಧ ಚೂರಿ ಇರಿದಿರುವ ಘಟನೆ ಬೆಳಗಾವಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಬೆಳಗಾವಿಯ ಸದಾಶಿವ ನಗರದಲ್ಲಿರುವ ಆಯಿ ಹೋಟೆಲ್‌ನಲ್ಲಿ ಬಿಲ್ ಕೊಡುವ ವಿಚಾರಕ್ಕೆ ಒನರ್ ಹಾಗೂ ಕೆಲ ಯುವಕರ ಮಧ್ಯೆ ಸೆ. 24 ರಂದು ರಾತ್ರಿ 12 ಗಂಟೆ ಸುಮಾರಿಗೆ ಗಲಾಟೆ ನಡೆದಿದೆ. ಪಾರ್ಟಿ ಮಾಡಿ ಊಟಕ್ಕೆ ಎಂದು ಆಯಿ ಹೋಟೆಲ್‌ಗೆ ಇಲ್ಲಿನ ಗ್ಯಾಂಗ್‌ವಾಡಿಯ ನಾಲ್ವರು ಯುವಕರು ಹೋಗಿದ್ದರು. ಮೂವರು ಬಿಲ್ ಕೊಟ್ಟು, ಇನ್ನೋರ್ವ ಯುವಕನ ಬಿಲ್ ಬಾಕಿ ಉಳಿಸಿಕೊಂಡಿದ್ದರು. ಈ ವೇಳೆ, ಹೋಟೆಲ್ ಮಾಲೀಕ ಹಾಗೂ ಗ್ಯಾಂಗ್‌ವಾಡಿ ಯುವಕರ ಮಧ್ಯೆ ಗಲಾಟೆ ಶುರುವಾಗಿದೆ.
ಕೆಲ ಹೊತ್ತಾದರೂ ಹೋಟೆಲ್ ಸಿಬ್ಬಂದಿ ಹಾಗೂ ಯುವಕರ ಮಧ್ಯೆ ವಾಗ್ವಾದ ನಿಂತಿಲ್ಲ. ಯುವಕರ ಕಿರಿಕಿರಿಗೆ ಬೇಸತ್ತು ಊಟಕ್ಕೆಂದು ಬಂದಿದ್ದ ಬಿಎಸ್ಎಫ್ ಯೋಧ ಗಲಾಟೆ ಮಧ್ಯ ಪ್ರವೇಶಿಸಿದ್ದಾರೆ. ಜೇಬಿನಲ್ಲಿದ್ದ ಚೂರಿಯಿಂದ ಯುವಕನ ಹೊಟ್ಟೆಗೆ ಇರಿದಿದ್ದಾರೆ.