ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ: ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ಯುವಕನಿಂದ 65ರ ವೃದ್ಧೆ ಮೇಲೆ ಅತ್ಯಾಚಾರ! - RAPE ON OLD WOMAN - RAPE ON OLD WOMAN

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಧ್ಯರಾತ್ರಿ 1 ಗಂಟೆಗೆ ವಾಪಸ್​ ಹೋಗುತ್ತಿದ್ದ ಯುವಕ ಅಲ್ಲೇ ಶೆಡ್​ನಲ್ಲಿ ಮಲಗಿದ್ದ ವೃದ್ಧೆಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ.

Chikkaballapur govt Hospital
ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆ (ETV Bharat)

By ETV Bharat Karnataka Team

Published : Aug 22, 2024, 12:42 PM IST

ಚಿಕ್ಕಬಳ್ಳಾಪುರ: ಆಸ್ಪತ್ರೆ ಆವರಣದ ಶೆಡ್​ನಲ್ಲಿ‌ ಮಲಗಿದ್ದ 65 ವರ್ಷದ ವೃದ್ಧೆ ಮೇಲೆ 25 ವರ್ಷದ ಯುವಕನೋರ್ವ ಅತ್ಯಾಚಾರ ಎಸಗಿರುವ ಘಟನೆ ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆ ಬಳಿ ನಡೆದಿದೆ. ಅತ್ಯಾಚಾರ ಮಾಡಿದ ಆರೋಪಿಯನ್ನು ನಗರದ ಇರ್ಫಾನ್ ಎಂದು ಗುರುತಿಸಲಾಗಿದೆ.

ಇರ್ಪಾನ್​ ರಾತ್ರಿ 11.30ರ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ಸಲುವಾಗಿ ಚಿಂತಾಮಣಿ ನಗರದ ಸಾರ್ವಜನಿಕ‌ ಆಸ್ಪತ್ರೆಗೆ ಭೇಟಿ ನೀಡಿದ್ದ. ಚಿಕಿತ್ಸೆ ಪಡೆದ ಬಳಿಕ 1 ಗಂಟೆ ಸಮಯದಲ್ಲಿ ಆಸ್ಪತ್ರೆಯಿಂದ ಹೊರ ಬಂದಿದ್ದಾನೆ. ಅದೇ ವೇಳೆ ಆಸ್ಪತ್ರೆಯ ಆವರಣದ ಶೆಡ್​ನಲ್ಲಿ‌ ಮಲಗಿದ್ದ 65 ವರ್ಷದ ವೃದ್ಧೆ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯನ್ನು ಆಸ್ಪತ್ರೆಯ ಸಿಬ್ಬಂದಿ ಗಮನಿಸಿ ಕರ್ತವ್ಯನಿರತ ವೈದ್ಯರಿಗೆ ಮಾಹಿತಿ‌ ನೀಡಿದ್ದಾರೆ. ಅದರಂತೆ ವೃದ್ಧೆಯನ್ನು ಮಹಿಳಾ ವಾರ್ಡ್​ಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ನಂತರ ಚಿಂತಾಮಣಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:100ಕ್ಕೂ ಹೆಚ್ಚು ಬಾಲಕಿಯರ ಮೇಲೆ ಅತ್ಯಾಚಾರ-ಬ್ಲ್ಯಾಕ್​ಮೇಲ್​ ಪ್ರಕರಣ: ಉಳಿದ ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದ ಕೋರ್ಟ್​ - 100 Girls Rape Victims

ABOUT THE AUTHOR

...view details