ಬೆಂಗಳೂರು:ಆನ್ಲೈನ್ನಲ್ಲಿ ಬೆಟ್ಟಿಂಗ್ ಆಡಿ ಸಾಲದ ಸುಳಿಗೆ ಸಿಲುಕಿದ್ದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರವೀಣ್ (20) ಆತ್ಮಹತ್ಯೆ ಮಾಡಿಕೊಂಡ ಯುವಕ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರವೀಣ್ ಸ್ನೇಹಿತರಾದ ಸೋಮಶೇಖರ್, ಜಯಾ ಹಾಗೂ ಸಲ್ಮಾನ್ ಎಂಬವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಎರಡು ವರ್ಷಗಳಿಂದ ಆನ್ಲೈನ್ ಬೆಟ್ಟಿಂಗ್ ಆಟಕ್ಕೆ ದಾಸನಾಗಿದ್ದ ಪ್ರವೀಣ್, ಮನೆಯವರಿಂದ ಹಣ ಪಡೆದು ಬೆಟ್ಟಿಂಗ್ ಆಡಿ ಹಣ ಕಳೆದುಕೊಂಡಿದ್ದ. ಬೆಟ್ಟಿಂಗ್ ಆಡಲು ಸ್ನೇಹಿತರಿಂದ ಹಣ ಪಡೆದುಕೊಂಡಿದ್ದ. ಹಣ ವಾಪಸ್ ನೀಡದ ಕಾರಣ ಸ್ನೇಹಿತರು ಪ್ರವೀಣ್ ಜೊತೆ ಗಲಾಟೆ ಮಾಡಿದ್ದರು. ಸಾಲಬಾಧೆ ತಾಳಲಾರದೆ ಪ್ರವೀಣ್ ಆತ್ಮಹತ್ಯೆ ಶರಣಾಗಿದ್ದ. ಮಗನ ಸಾವಿಗೆ ಸ್ನೇಹಿತರ ಪ್ರಚೋದನೆಯೇ ಕಾರಣ ಎಂದು ಮೃತ ಯುವಕನ ತಂದೆ ಮುನಿಸ್ವಾಮಿ ದೂರು ನೀಡಿದ್ದರು.