ಧಾರವಾಡ: ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ರೈಲ್ವೆ ನಿಲ್ದಾಣ ಸಮೀಪದ ಲಾಡ್ಜ್ವೊಂದಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಸಿಗೆಹಡ್ಲು ಕಾಮನಕೆರೆ ನಿವಾಸಿ ಚಿನ್ಮಯ್ ಸಾವನ್ನಪ್ಪಿದ ಯುವಕ.
ಚಿನ್ಮಯ್ ಸೆ.04ರಂದು ಲಾಡ್ಜ್ನ ರೂಮ್ ನಂ.212ರಲ್ಲಿ ತಂಗಿದ್ದ. ಸೆ.6ರಂದು ಸಂಜೆ ರೂಮ್ ಕ್ಲೀನ್ ಮಾಡಲು ಲಾಡ್ಜ್ ಸಿಬ್ಬಂದಿ ಹೋಗಿದ್ದ ವೇಳೆ ರೂಮ್ ಒಳಗಿನಿಂದ ಲಾಕ್ ಆಗಿತ್ತು. ಮಾರನೇ ದಿನ(ಸೆ.7) ರಾತ್ರಿ ಲಾಡ್ಜ್ ಸಿಬ್ಬಂದಿ ಮತ್ತೆ ರೂಮ್ ಬಾಗಿಲು ತಟ್ಟಿದ್ದಾರೆ. ಆದರೂ ಚಿನ್ಮಯ್ ಬಾಗಿಲು ತೆರೆಯದ ಕಾರಣ ಅನುಮಾನಗೊಂಡು ಮತ್ತೊಂದು ಬೀಗ ಬಳಸಿ ಲಾಕ್ ತೆರೆದಾಗ ಘಟನೆ ಬೆಳಕಿಗೆ ಬಂದಿದೆ.