ಬೆಳಗಾವಿ:ಹಾವಿನೊಂದಿಗೆ ಚಿಕಿತ್ಸೆಗೆ ಆಗಮಿಸಿದ ಯುವಕನನ್ನು ನೋಡಿ ಆಸ್ಪತ್ರೆ ಸಿಬ್ಬಂದಿ ಕಕ್ಕಾಬಿಕ್ಕಿಯಾದ ಘಟನೆ ಸೋಮವಾರ ನಡೆದಿದೆ. ಬೆಳಗಾವಿ ತಾಲೂಕಿನ ಹುಂಚಾನಟ್ಟಿ ಗ್ರಾಮದ ಶಾಹಿದ್ ಎಂಬಾತನಿಗೆ ಹಾವು ಕಚ್ಚಿದೆ. ತನಗೆ ಕಚ್ಚಿದ ಹಾವಿನೊಂದಿಗೆ ಆತ ಬೀಮ್ಸ್ ಆಸ್ಪತ್ರೆಗೆ ಬಂದಿದ್ದಾನೆ. ಇದನ್ನು ನೋಡಿದ ಜನ ಮತ್ತು ಆಸ್ಪತ್ರೆ ಸಿಬ್ಬಂದಿ ಅರೆಕ್ಷಣ ಹೌಹಾರಿದರು.
ಮನೆ ಮುಂದೆ ಕಾಣಿಸಿಕೊಂಡ ಹಾವನ್ನು ಹಿಡಿದ ಶಾಹಿದ್ ಅದನ್ನು ಬೆಟ್ಟಕ್ಕೆ ಬಿಡಲು ಸ್ನೇಹಿತರೊಂದಿಗೆ ತೆರಳಿದ್ದಾನೆ. ಈ ಸಂದರ್ಭದಲ್ಲಿ ಆತನಿಗೆ ಕಚ್ಚಿದೆ ಎಂದು ತಿಳಿದುಬಂದಿದೆ.