ದಾವಣಗೆರೆ:ಚಿಗಟೇರಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಹಾಗು ಮಕ್ಕಳ 'ಟ್ರಾಮಾ ಕೇರ್ ಸೆಂಟರ್'ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬುಧವಾರ ಚಾಲನೆ ನೀಡಿದರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ದಾವಣಗೆರೆ: ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ, ಟ್ರಾಮಾ ಕೇರ್ ಸೆಂಟರ್ಗೂ ಚಾಲನೆ - HOSPITAL INAUGURATED
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ದಾವಣಗೆರೆಯ ಚಿಗಟೇರಿಯಲ್ಲಿ 30 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಉದ್ಘಾಟಿಸಿದ್ದಾರೆ.
Published : Nov 21, 2024, 8:29 AM IST
30 ಕೋಟಿ ರೂ ವೆಚ್ಚದಲ್ಲಿ ವಿವಿಧ ಸೌಲಭ್ಯಗಳೊಂದಿಗೆ ನಿರ್ಮಿಸಲಾದ ನೂತನ ಆಸ್ಪತ್ರೆಯಲ್ಲಿ 200 ಬೆಡ್‌ಗಳ ವ್ಯವಸ್ಥೆಯಿದೆ. ತಾಯಿ ಹಾಗೂ ನವಜಾತ ಶಿಶುಗಳಿಗೆ ಅವಶ್ಯವಿರುವ ಸಲಕರಣೆಗಳು, ಐಸಿಯು, ಪಿಡಿಯಾಟ್ರಿಕ್ ಐಸಿಯು, ಎಸ್ಹೆಚ್ಎಚ್ಸಿಯು, ಹೈ ಇಂಡಿಪೆಂಡೆನ್ಸ್ ಯುನಿಟ್, ಬ್ಲಡ್ ಬ್ಯಾಂಕ್ ಸೌಲಭ್ಯ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಹಾಲಿನ ಬ್ಯಾಂಕ್ ತೆರೆಯಲು ಚಿಂತನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಹುಬ್ಬಳ್ಳಿ ಹಳೇ ನಿಲ್ದಾಣ ಶೀಘ್ರದಲ್ಲಿಯೇ ಹೊಸ ರೂಪದೊಂದಿಗೆ ಪುನಾರಂಭ: ಮರುಕಳಿಸಲಿದೆ ಗತವೈಭವ: ಏನಿದರ ವೈಶಿಷ್ಟ್ಯ