ಕರ್ನಾಟಕ

karnataka

ETV Bharat / state

ಆರ್ಡರ್​ ಮಾಡದಿದ್ದರೂ ಮನೆಗೆ ಬಂದ ಹೇರ್​​ಡ್ರೈಯರ್​: ಆನ್​ ಮಾಡುತ್ತಿದ್ದಂತೆ ಸ್ಫೋಟ, ಮಹಿಳೆಯ ಎರಡೂ ಮುಂಗೈ ಕಟ್ - HAIR DRYER EXPLODE

ಬಾಗಲಕೋಟೆಯಲ್ಲಿ ಹೇರ್​​ಡ್ರೈಯರ್​ ಸ್ಫೋಟಗೊಂಡು ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಆಯಾಮಾಗಳಿಂದ ತನಿಖೆ ನಡೆಸುತ್ತಿದ್ದಾರೆ.

ಗಾಯಗೊಂಡ ಮಹಿಳೆ
ಗಾಯಗೊಂಡ ಮಹಿಳೆ (ETV Bharat)

By ETV Bharat Karnataka Team

Published : Nov 21, 2024, 2:47 PM IST

Updated : Nov 21, 2024, 2:58 PM IST

ಬಾಗಲಕೋಟೆ: ಹೇರ್​​ಡ್ರೈಯರ್​ ಬ್ಲಾಸ್ಟ್​​​​ ಆಗಿ ಮೃತ ಯೋಧನ ಪತ್ನಿಯ ಎರಡು ಮುಂಗೈ ಕಟ್​ ಆಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ನಡೆದಿದೆ. ಬಸಮ್ಮ ಯರನಾಳ ಗಾಯಗೊಂಡವರು. ಇವರು ಮೃತ ಯೋಧ ಪಾಪಣ್ಣ ಅವರ ಪತ್ನಿ.

ಆರ್ಡರ್​ ಮಾಡದಿದ್ದರೂ ಮನೆಗೆ ಬಂದ ಹೇರ್​​ಡ್ರೈಯರ್​:ಶಶಿಕಲಾ ಎಂಬುವರ ಹೆಸರಿಗೆ ಕೊರಿಯರ್ ಬಂದಿತ್ತು. ಕೊರಿಯರ್​ ಅವರು ಶಶಿಕಲಾ ಅವರಿಗೆ ಕರೆ ಮಾಡಿದ್ದರು. ಶಶಿಕಲಾ ಬೇರೆ ಊರಲ್ಲಿ ಇದ್ದ ಕಾರಣ ಬಸಮ್ಮ ಅವರಿಗೆ ಕೊರಿಯರ್ ಪಡೆದು ಓಪನ್ ಮಾಡಲು ಹೇಳಿದ್ದರು. ಒಪನ್ ಮಾಡಿದಾಗ ಹೇರ್​​ಡ್ರೈಯರ್ ಇತ್ತು. ಬಸಮ್ಮಳಿಗೆ ಪಕ್ಕದ ಮನೆಯವರು ಆನ್ ಮಾಡಿ ತೋರಿಸಿ ನೋಡೋಣ ಅಂತ ಹೇಳಿದ್ದರು. ಹೀಗಾಗಿ ಬಸಮ್ಮ ಸ್ವಿಚ್ಡ್​ ಹಾಕಿ ಆನ್ ಮಾಡಿದ್ದೇ ತಡ ಹೇರ್​​ಡ್ರೈಯರ್​ ಸ್ಫೋಟಗೊಂಡಿದೆ. ಪರಿಣಾಮ ಎರಡು ಕೈಗಳ ಬೆರಳುಗಳು ತುಂಡಾಗಿ ಎರಡೂ ಮುಂಗೈ ಛಿದ್ರಛಿದ್ರಗೊಂಡು ಬಸಮ್ಮ ಗಂಭೀರವಾಗಿ ಗಾಯಗೊಂಡಿದ್ದರು . ತಕ್ಷಣ ಬಸಮ್ಮ ಅವರನ್ನು ಇಳಕಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾಹಿತಿ (ETV Bharat)

ಆದರೆ, ಶಶಿಕಲಾ ಎಂಬುವವರು ಯಾವುದೇ ಹೇರ್​​ಡ್ರೈಯರ್ ಆರ್ಡರ್ ಮಾಡಿದ್ದರಿಲಿಲ್ಲ.ಸದ್ಯಇಳಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಶಿಕಲಾ ಹೆಸರಲ್ಲಿ ಹೇರ್​​ಡ್ರೈಯರ್ ಆರ್ಡರ್​​​ ಮಾಡಿದವರು ಯಾರು?, ಯಾರು ಹಣ ಸಂದಾಯ ಮಾಡಿದವರು?, ಎಂದು ಇಳಕಲ್ ನಗರ ಪೊಲೀಸರಿಂದ ತನಿಖೆ ನಡೆಯುತ್ತಿದೆ.

ಕೆಲ ಮಾಹಿತಿಗಳ ಪ್ರಕಾರ, ಹೇರ್​​ಡ್ರೈಯರ್ ವಿಶಾಖಪಟ್ಟಣದಲ್ಲಿ ಮ್ಯಾನುಫ್ಯಾಕ್ಚರ್​ ಆಗಿದ್ದು, ಕೊರಿಯರ್​ ಬಾಗಲಕೋಟೆಯಿಂದ ಬಂದಿದೆ ಎಂದು ಹೇಳಲಾಗುತ್ತಿದೆ.

ಎಸ್​ಪಿ ಪ್ರತಿಕ್ರಿಯೆ:"ನವೆಂಬರ್​ 15ರಂದು ಬಸವರಾಜೇಶ್ವರಿ ಸ್ನೇಹಿತೆ ಶಶಿಕಲಾ ಅವರು ತನಗೊಂದು ಕೋರಿಯರ್​ ಬಂದಿದೆ ಎಂದು ತಿಳಿಸಿ ತೆಗೆದುಕೊಂಡು ಬರುವಂತೆ ತಿಳಿಸಿದ್ದರು. ಬಳಿಕ ಬಸವರಾಜೇಶ್ವರಿ ಕೊರಿಯರ್​ಅನ್ನು ಮನೆಗೆ ತಂದಿಟ್ಟುಕೊಂಡಿದ್ದರು. ಬಳಿಕ 16ರಂದು ಬಸವರಾಜೇಶ್ವರಿ ಸ್ವಿಚ್ಡ್​ ಹಾಕಿ ಆನ್ ಮಾಡಿದ ತಕ್ಷಣ ಹೇರ್ ​​ಡ್ರೈಯರ್​ ಸ್ಫೋಟಗೊಂಡಿದೆ. ಪರಿಣಾಮ ಎರಡು ಕೈಗಳ ಬೆರಳುಗಳು ತುಂಡಾಗಿ ಎರಡೂ ಮುಂಗೈ ಛಿದ್ರಗೊಂಡು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಕೊಳ್ಳಲಾಗಿದೆ. ಎಲೆಕ್ಟ್ರಾನಿಕ್ ವಸ್ತುವಿನಿಂದ ಸ್ಫೋಟವಾಗಿದ್ದರೂ ಗಂಭೀರವಾಗಿ ಪರಿಗಣಿಸಿ ಎಲ್ಲಾ ಆಯಾಮಾಗಳಿಂದ ತನಿಖೆ ಮಾಡಲಾಗುವುದು. ಎಫ್​ಎಸ್​​ಎಲ್​ ತಂಡವೂ ಕೂಡ ಸ್ಥಳದಲ್ಲಿನ ಸಾಕ್ಷ್ಯಗಳನ್ನು ಕಲೆಕ್ಟ್​​ ಮಾಡಿಕೊಂಡಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ:ವಿಕ್ರಂ ಗೌಡ ಒಬ್ಬ ನಕ್ಸಲ್, ಅದು ನಕಲಿ ಎನ್​ಕೌಂಟರ್ ಅಲ್ಲ: ಗೃಹ ಸಚಿವ ಜಿ. ಪರಮೇಶ್ವರ್

Last Updated : Nov 21, 2024, 2:58 PM IST

ABOUT THE AUTHOR

...view details