ಚಿಕ್ಕಮಗಳೂರು:ಆಲ್ದೂರಿನ ತುಡುಕೂರು ಗ್ರಾಮದ ಕಾಫಿ ತೋಟದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಬೀಟಮ್ಮ ಗ್ಯಾಂಗ್ನ ಆನೆಯೊಂದು ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಚಿಕ್ಕಮಗಳೂರು: ವಿದ್ಯುತ್ ತಂತಿ ಸ್ಪರ್ಶಿಸಿ ಬೀಟಮ್ಮ ಗ್ಯಾಂಗ್ನ ಆನೆ ಸಾವು - WILD ELEPHANT DIES
ವಿದ್ಯುತ್ ತಂತಿ ಸ್ಪರ್ಶಿಸಿ ಬೀಟಮ್ಮ ಗ್ಯಾಂಗ್ನ ಆನೆಯೊಂದು ಮೃತಪಟ್ಟಿರುವ ಘಟನೆ ಆಲ್ದೂರಿನ ತುಡುಕೂರು ಗ್ರಾಮದಲ್ಲಿ ನಡೆದಿದೆ.
Published : Nov 10, 2024, 4:58 PM IST
ಕಳೆದ 3 ದಿನಗಳಿಂದ ಆಲ್ದೂರು ಸುತ್ತಮುತ್ತ 17 ಕಾಡಾನೆಗಳು ಆನೆಗಳು ಬೀಡು ಬಿಟ್ಟಿವೆ. ತುಡುಕೂರು ಸುತ್ತಮುತ್ತ ಬೆಳೆ ನಾಶ ಮಾಡಿರುವ ಆನೆಗಳು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿವೆ. ಮುಂಜಾಗ್ರತಾ ಕ್ರಮವಾಗಿ ಅರಣ್ಯ ಇಲಾಖೆ ಆಲ್ದೂರು ಹೋಬಳಿಯ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಮೈಕ್ ಮೂಲಕ ಅನೌನ್ಸ್ ಮಾಡಿ ಎಚ್ಚರಿಕೆ ನೀಡಿದೆ. ವಾಹನ ಸವಾರರು, ಕಾರ್ಮಿಕರು, ಶಾಲಾ ಕಾಲೇಜಿಗೆ ಹೋಗುವ ಮಕ್ಕಳು ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದೆ.
ಇದನ್ನೂ ಓದಿ:ಶಿವಮೊಗ್ಗ: ಟ್ರಂಚ್ಗೆ ಬಿದ್ದು ಕಾಡಾನೆ ಸಾವು - ಕಳ್ಳ ಸಾಗಣೆದಾರನಿಂದ ಚಿರತೆಯ 16 ಉಗುರು, 3 ಹಲ್ಲು ವಶಕ್ಕೆ