ಬೆಂಗಳೂರು :ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ನರೇಂದ್ರ ಮೋದಿ ಗ್ಯಾರಂಟಿ ವಿರುದ್ಧ ಕಾಂಗ್ರೆಸ್ ಗ್ಯಾರಂಟಿಯನ್ನು ಪ್ರಮುಖ ಅಸ್ತ್ರವನ್ನಾಗಿ ಮಾಡಲು ನಿರ್ಧರಿಸಿದೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರ ಜೊತೆ ಸಭೆ ನಡೆಸಿದ ಡಿಸಿಎಂ ಡಿ.ಕೆ ಶಿವಕುಮಾರ್, ರಾಜ್ಯದ ಜನರಿಗೆ ಗ್ಯಾರಂಟಿಗಳ ಬಗ್ಗೆ ಅರಿವು ಮೂಡಿಸಲು ಸಲಹೆ ಸೂಚನೆಗಳನ್ನು ನೀಡಲಾಯಿತು.
ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಈಗಾಗಲೇ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಜೊತೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಇಂದು ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಮನೆ ಮನೆಗೆ ಹೋಗಬೇಕು. ತಂಡ ಮಾಡಿ ಹೋಗಬೇಕು. ವೋಟರ್ ಲಿಸ್ಟ್ ತೆಗೆದುಕೊಂಡು ಮನೆ ಮನೆಗೆ ತೆರಳಬೇಕು. ಮೋದಿ ಗ್ಯಾರಂಟಿ ವಿರುದ್ಧ ನಮ್ಮದು ಕಾಂಗ್ರೆಸ್ ಗ್ಯಾರಂಟಿ ಎಂದು ತಿಳಿಸಿದರು.
ಕಮಲ ಕೆರೆಯಲ್ಲಿ ಚೆಂದ, ತೆನೆ ಹೊಲದಲ್ಲಿ ಇದ್ದರೆ ಈ ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಒಳ್ಳೆಯದು. ಐದು ಗ್ಯಾರಂಟಿ ಶಕ್ತಿಯಿಂದ ಜನ ತೆನೆ ಎತ್ತಿ ಬಿಸಾಕಿದ್ದಾರೆ. ಸ್ವಾಭಿಮಾನ ಬಿಡಬೇಕು. ನಾವು ಮೊದಲು ಕಾರ್ಯಕರ್ತರಾಗಿದ್ದೇವೆ. ಪಂಚಾಯತ್ನಲ್ಲಿ ಲೀಡ್ ಕೊಡಿಸುವ ಕೆಲಸ ಮಾಡಬೇಕು. ಐಡಿ ಕಾರ್ಡ್, ಫೋಟೋ ಅಪ್ಲೋಡ್ ಮಾಡಿ ಐಡಿ ಹಾಕಿ ಮನೆ ಮನೆಗೆ ಹೋಗಿ ಗ್ಯಾರಂಟಿ ಬಗ್ಗೆ ಮನವರಿಕೆ ಮಾಡಿ. ನರೇಂದ್ರ ಮೋದಿ ಗಾಳಿನೂ ಇಲ್ಲ. ರಾಮಂದಿರ ಗಾಳಿನೂ ಇಲ್ಲ. ಅದು ನಮ್ಮ ಸಮೀಕ್ಷೆಯಲ್ಲಿ ಗೊತ್ತಾಗಿದೆ. ರಾಜ್ಯದಲ್ಲಿ 20 ಸೀಟುಗಳನ್ನು ನಾವು ಗೆಲ್ಲಬೇಕು ಎಂದು ಕರೆ ನೀಡಿದರು.