ಕರ್ನಾಟಕ

karnataka

ETV Bharat / state

ವಾಲ್ಮೀಕಿ ಹಗರಣದ ವಿರುದ್ಧ ಹೋರಾಟ ಮುಂದುವರೆಸುತ್ತೇವೆ: ಆರ್.ಅಶೋಕ್‌ - R Ashok - R ASHOK

ಸದನದಲ್ಲಿ ಮುಡಾ ಹಗರಣ ಸೇರಿ ರಾಜ್ಯದ ಹಲವು ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕಿದೆ ಎಂದು ಪ್ರತಿಪಕ್ಷ ನಾಯಕ ಆರ್​.ಅಶೋಕ್​ ಹೇಳಿದರು.

ಆರ್​.ಅಶೋಕ್​
ಆರ್​.ಅಶೋಕ್​ (ETV Bharat)

By ETV Bharat Karnataka Team

Published : Jul 22, 2024, 1:23 PM IST

ಬೆಂಗಳೂರು: ವಾಲ್ಮೀಕಿ‌ ಅಭಿವೃದ್ಧಿ ನಿಗಮದಲ್ಲಿ ನಡೆದ ಅವ್ಯವಹಾರದ ಕುರಿತಂತೆ ನಮ್ಮ ಹೋರಾಟ ಮುಂದುವರೆಯಲಿದ್ದು, ಪ್ರಸಕ್ತ ಸದನದಲ್ಲಿ ಮುಡಾ ಸೇರಿ ರಾಜ್ಯದ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್‌ ತಿಳಿಸಿದರು.

ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, "ಮಳೆಯಾಗಿ ಪ್ರವಾಹ ಸೃಷ್ಟಿಯಾಗಿದೆ. ಡೆಂಗಿಯಿಂದಾಗಿ ಜನ ಸಾಯುತ್ತಿದ್ದಾರೆ. SCP-TSP ದಲಿತರ ಹಣ ದುರುಪಯೋಗ ಆಗಿದೆ. ಇದರ ಬಗ್ಗೆ ಚರ್ಚೆ ಆಗಬೇಕಿದೆ. ನಾವು ಈ ಹೋರಾಟವನ್ನು ನಿಲ್ಲಿಸಲ್ಲ. ಸದನದಲ್ಲಿ ಮುಡಾ ಹಗರಣ ಸೇರಿ ಬೇರೆ ವಿಚಾರ ಚರ್ಚೆಯಾಗಬೇಕು. ಸ್ಪೀಕರ್ ಮಾತು ಕೇಳಿ ಸದನಕ್ಕೆ ಬಂದಿದ್ದೇವೆ‌. ಯಾವುದೇ ಕಾರಣಕ್ಕೂ ಹೋರಾಟ ಕೈಬಿಡಲ್ಲ" ಎಂದರು.

"ವಾಲ್ಮೀಕಿ ಆಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ ಲಪಟಾಯಿಸಿ ತೆಲಂಗಾಣ ಚುನಾವಣೆಗೆ ಬಳಸಿದ್ದು, ನಮ್ಮ‌ ಹೋರಾಟದ ಪರಿಣಾಮ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ನೀಡಿದ್ದರು. ಇದರಲ್ಲಿ ಸಿದ್ದರಾಮಯ್ಯರ ಪಾತ್ರವೂ ಇದ್ದು ಅವರು ರಾಜೀನಾಮೆ ನೀಡಬೇಕು. ಜಾರಿ ನಿರ್ದೇಶನಾಲಯ (ಇಡಿ) ತನ್ನ ಪತ್ರಿಕಾ ಹೇಳಿಕೆಯಲ್ಲಿ ಚುನಾವಣೆಗೆ ಹಣ ಬಳಕೆಯಾಗಿದೆ ಎಂದು ಹೇಳಿದೆ. ಈ ಬಗ್ಗೆ ಉತ್ತರಿಸುವುದನ್ನು ಬಿಟ್ಟು, ಬಿಜೆಪಿ ಕಾಲದ ಹಗರಣ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅಧಿಕಾರಿಗಳ ಮೇಲೆ ಆರೋಪ ಹೊರಿಸಿ ಶಾಸಕರನ್ನು ಬಚಾವ್ ಮಾಡಿದ್ದಾರೆ" ಎಂದು ಆರೋಪಿಸಿದರು.

ಬಿಜೆಪಿ ರಾಜ್ಯಾಧಕ್ಷ ಬಿ.ವೈ‌.ವಿಜಯೇಂದ್ರ ಮಾತನಾಡಿ, "ನಿನ್ನೆ ಮಳೆ ಪ್ರದೇಶಕ್ಕೆ ಭೇಟಿ ನೀಡಿದ್ದೇನೆ. ಮಳೆಯಿಂದ ಸಾಕಷ್ಟು ಹಾನಿಯಾಗಿ ಸಂತ್ರಸ್ತರು ತಮ್ಮ ಆಸ್ತಿ ಕಳೆದಕೊಂಡಿದ್ದಾರೆ. ಮನೆ ಕಟ್ಟಿಕೊಟ್ಟು ಪರಿಹಾರ ನೀಡಬೇಕು. ಅಲ್ಲದೆ ರಾಜ್ಯದಲ್ಲಿ ಡೆಂಗಿ ಕೂಡ ಹೆಚ್ಚಾಗಿದ್ದು, ಸದನದಲ್ಲಿ‌ ಈ ವಿಚಾರದ ಬಗ್ಗೆಯೂ ಚರ್ಚೆ ಮಾಡುತ್ತೇವೆ" ಎಂದು ತಿಳಿಸಿದರು.

ಇದನ್ನೂ ಓದಿ:ವಾಲ್ಮೀಕಿ ನಿಗಮ ಹಗರಣ; ಮಾಜಿ ಸಚಿವ ನಾಗೇಂದ್ರಗೆ ಆಗಸ್ಟ್ 3ರ ವರೆಗೆ ನ್ಯಾಯಾಂಗ ಬಂಧನ - Nagendra Judicial Custody extended

ABOUT THE AUTHOR

...view details