ಹುಬ್ಬಳ್ಳಿ:ನಾನು ಮುಖ್ಯಮಂತ್ರಿ ಆಗಬೇಕೆಂದಿದ್ದೇನೆ. ಆದರೆ ಅವಕಾಶ ಸಿಗಬೇಕಲ್ವೇ..? ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆದ್ದಿದೆ. ಎಲ್ಲ ಶಾಸಕರನ್ನು ಮಂತ್ರಿ ಮಾಡೋಕೆ ಆಗುತ್ತದೆಯಾ?, ಸಿಎಂ ಮಾಡೋಕೆ ಆಗಲ್ಲ. ಹಿರಿತನದ ಆಧಾರದ ಮೇಲೆ ನನ್ನನ್ನು ವಾಯವ್ಯ ಸಾರಿಗೆ ನಿಗಮದ ಅಧ್ಯಕ್ಷನನ್ನಾಗಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಹಾಗೂ ಎನ್ಡಬ್ಲ್ಯುಕೆಆರ್ಟಿಸಿ ಅಧ್ಯಕ್ಷ ರಾಜು ಕಾಗೆ ಹೇಳಿದರು.
ವಾಯವ್ಯ ಸಾರಿಗೆ:ನಗರದಲ್ಲಿ ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಯವ್ಯ ಸಾರಿಗೆ ನಷ್ಟದಲ್ಲಿದ್ದು, ಬೇರೆ ನಿಗಮ ಕೊಡಿ ಅನ್ನೋದು ತಪ್ಪಾಗುತ್ತೆ. ಎಲ್ಲದಕ್ಕೂ ಅಸಮಾಧಾನ ತೋರಬಾರದು. ಲಾಭದಾಯಕವಾದದ್ದನ್ನು ಕೊಡಿ ಅನ್ನಬಾರದು. ಎಲ್ಲರೂ ನನಗೆ ಮಂತ್ರಿ ಮಾಡಿ ಅಂತ ಕೇಳೋದು ತಪ್ಪು. ಮಂತ್ರಿ ಆಗಲು, ಮುಖ್ಯಮಂತ್ರಿ ಆಗಲು ಅವಕಾಶ ಸಿಗಬೇಕಲ್ವೇ.. ನಾಲ್ಕೈದು ಬಾರಿ ಶಾಸಕರಾದವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಎರಡು ಲಕ್ಷ ಜನ ನನಗೆ ಮತಹಾಕಿ ಎಂಎಲ್ಎ ಮಾಡಿದ್ದಾರೆ:ಮೊದಲುನಮ್ಮ ಮತಕ್ಷೇತ್ರದ ಹಿತಾಸಕ್ತಿಗೆ ಹೆಚ್ಚು ಮಹತ್ವ ಕೊಡಬೇಕು. ಎರಡು ಲಕ್ಷ ಜನ ನನಗೆ ಮತಹಾಕಿ ಎಂಎಲ್ ಸ್ಥಾನ ಕೊಟ್ಟಿದ್ದಾರೆ. ಅದಕ್ಕಿಂತ ಹೆಚ್ಚಿನದು ನಮಗೆ ಏನೂ ಬೇಕು, ಎರಡು ಲಕ್ಷ ಜನರ ಪ್ರತಿನಿಧಿ ನಾವು, ಎರಡು ಲಕ್ಷ ಜನರ ಬಗ್ಗೆ ಚಿಂತನೆ ಮಾಡಬೇಕು. ಅದನ್ನೂ ಬಿಟ್ಟು ಬೇರೆ ಬೇರೆ ಅಧಿಕಾರಕ್ಕೆ ಹೋಗಬೇಕು ಅನ್ನೋದು ತಪ್ಪು.