ಕರ್ನಾಟಕ

karnataka

ETV Bharat / state

ಉಡುಪಿ: ಮಲ್ಪೆ ಬೀಚ್​ಗಿದ್ದ ಮಳೆಗಾಲದ ನಿಷೇಧ ಇನ್ನೂ ಮುಗಿದಿಲ್ಲ, ಪ್ರವಾಸಿಗರಲ್ಲಿ ನಿರಾಸೆ

ಮಲ್ಪೆ ಬೀಚ್​ಗಿದ್ದ ಮಳೆಗಾಲದ ನಿಷೇಧ ಇನ್ನೂ ಮುಗಿದಿಲ್ಲ. ಹೀಗಾಗಿ ಇಲ್ಲಿಗೆ ಬರುವ ಪ್ರವಾಸಿಗರಿಗೆ ನಿರಾಶೆಯಾಗಿದೆ.

By ETV Bharat Karnataka Team

Published : 6 hours ago

malpe-beach
ಮಲ್ಪೆ ಬೀಚ್ (ETV Bharat)

ಉಡುಪಿ:ಉಡುಪಿಗೆ ರಾಜ್ಯದ ಮೂಲೆಮೂಲೆಗಳಿಂದ ಜನ ಪ್ರವಾಸಕ್ಕಾಗಿ ಬರುತ್ತಾರೆ. ಅದರಲ್ಲೂ ಕೂಡ ಮಲ್ಪೆಗೆ ಹೋಗಬೇಕು, ಸಮುದ್ರಲೆಗಳ ಜೊತೆಗೆ ಸಮಯ ಕಳೆಯಬೇಕೆಂಬ ಪ್ಲಾನ್​ನೊಂದಿಗೆ ಇಲ್ಲಿಗೆ ಬರುವುದು ಸಾಮಾನ್ಯ. ಸದ್ಯ ಇಲ್ಲಿಗೆ ಬರುವ ಪ್ರವಾಸಿಗರು ನಿರಾಸೆಯೊಂದಿಗೆ ಹಿಂತಿರುಗುವಂತಾಗಿದೆ.

ಮಲ್ಪೆ ಬೀಚ್​ಗಿದ್ದ ಮಳೆಗಾಲದ ನಿಷೇಧ ಇನ್ನೂ ಮುಗಿದಿಲ್ಲ. ನಿಯಮದಂತೆ ಸೆಪ್ಟೆಂಬರ್ 15ರ ನಂತರ ಕಡಲ ತೀರದ ಎಲ್ಲ ವಾಟರ್ ಸ್ಪೋರ್ಟ್ಸ್‌ ಸೇರಿದಂತೆ ವಿವಿಧ ಆಟೋಟ ಚಟುವಟಿಕೆಗಳು ಆರಂಭವಾಗಬೇಕಾಗಿತ್ತು. ಆದ್ರೆ ಯಾವುದೇ ಚಟುವಟಿಕೆ ಇನ್ನೂ ಆರಂಭವಾಗಿಲ್ಲ. ಹಾಗಾಗಿ, ಪ್ರವಾಸಿಗರು ಬಂದರೆ ಕಡಲಿಗೆ ಇಳಿಯುವಂತಿಲ್ಲ.

ವಾಟರ್​ ಗೇಮ್ಸ್​ ಮೇಲ್ವಿಚಾರಕರಾದ ಜಗದೀಶ್ ಮಾತನಾಡಿದರು (ETV Bharat)

ಸೇಂಟ್ ಮೇರಿಸ್ ದ್ವೀಪ: ಸೇಂಟ್ ಮೇರಿಸ್ ದ್ವೀಪಕ್ಕೂ ಬೋಟಿನ ವ್ಯವಸ್ಥೆ ಶುರುವಾಗಬೇಕಿತ್ತು. ಆದರೆ ಬೀಚ್​ನಲ್ಲಿ ಸದ್ಯ ಯಾವುದೇ ವ್ಯವಸ್ಥೆಗಳು ಆರಂಭವಾಗಿಲ್ಲ. ತೀರಕ್ಕೆ ಅಳವಡಿಸಿರುವ ಬಲೆ ತೆರವು ಮಾಡಿಲ್ಲ.

"ಸೆಪ್ಟೆಂಬರ್ 15ಕ್ಕೆ ನಿಷೇಧ ಅವಧಿ ಮುಗಿದಿದೆ. ಜಿಲ್ಲಾಡಳಿತ ಪ್ರತಿಕೂಲ ಹವಾಮಾನ ಕಾರಣಕ್ಕೆ ಕಡಲಿಗೆ ನೋ ಎಂಟ್ರಿ ಘೋಷಣೆ ಮಾಡಿದೆ. ಹಾಗಾಗಿಯೇ ಮಲ್ಪೆಗೆ ಬಂದರೆ ಪ್ರವಾಸಿಗರಿಗೆ ನಿರಾಸೆಯಾಗುತ್ತಿದೆ. ಸೈಂಟ್ ಮೇರಿಸ್ ದ್ವೀಪಕ್ಕೂ ಬೋಟ್ ಆರಂಭವಾಗಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬೀಚ್​ನಲ್ಲಿ ನಡೆಯುವ ವಾಟರ್​ ಸ್ಪೋರ್ಟ್ಸ್‌​ಗೆ ಅನುಮತಿ ಕೊಟ್ಟರೆ ಪ್ರವಾಸಿಗರಿಗೆ ಅನುಕೂಲವಾಗುತ್ತದೆ" ಎಂದು ವಾಟರ್ ಗೇಮ್ಸ್ ಮೇಲ್ವಿಚಾರಕರಾದ ಜಗದೀಶ್​ ಹೇಳಿದ್ದಾರೆ.

ಕಡಲು ಪ್ರಕ್ಷ್ಯುಬ್ಧ, ಪ್ರವಾಸಿಗರಿಗೆ ನಿರಾಸೆ : ಉಡುಪಿ ಜಿಲ್ಲೆಯಲ್ಲಿ ಈಗಲೂ ಮಳೆ ಮುಂದುವರೆದಿರುವ ಕಾರಣ ಕಡಲು ಪ್ರಕ್ಷಬ್ಧಗೊಂಡು ಪ್ರತಿಕೂಲ ಹವಮಾನದಿಂದ ಕಡಲಿಗೆ ಇಳಿಯುವುದು ಅಪಾಯ ಎಂಬ ಕಾರಣಕ್ಕೆ ನಿಷೇಧ ಮುಂದುವರೆದಿದೆ.

ಇದನ್ನೂ ಓದಿ:ಉದ್ಘಾಟನೆಯಾಗಿ 2 ದಿನವಷ್ಟೇ.. ಸಮುದ್ರದ ಅಲೆಗಳ ರಭಸಕ್ಕೆ ಕಿತ್ಕೊಂಡ್ಹೋದ ರಾಜ್ಯದ ಪ್ರಥಮ ಫ್ಲೋಟಿಂಗ್ ಬ್ರಿಡ್ಜ್!

ABOUT THE AUTHOR

...view details