ಕರ್ನಾಟಕ

karnataka

ETV Bharat / state

'ನೀವು ನನ್ನ ಹೃದಯದಲ್ಲಿದ್ದೀರಿ': ಅಭಿಮಾನಿಗಳಿಗೆ ಸಿಗ್ನಲ್​ ಕೊಟ್ಟ ದರ್ಶನ್​​: ನಟನನ್ನು​​ ಭೇಟಿಯಾದ ಹರಿಕೃಷ್ಣ, ಶೈಲಜಾನಾಗ್ - DARSHAN SIGNAL TO FANS

ಇಂದು ಬಳ್ಳಾರಿ ಜೈಲಿನಲ್ಲಿ ಕೊಲೆ ಪ್ರಕರಣದ ಆರೋಪಿ ದರ್ಶನ್​​ನ್ನು ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ನಿರ್ಮಾಪಕಿ ಶೈಲಜಾ ನಾಗ್​ ಭೇಟಿ ಆಗಿದ್ದಾರೆ. ಅಭಿಮಾನಿಗಳನ್ನು ಕಂಡ ನಟ, 'ನೀವು ನನ್ನ ಹೃದಯದಲ್ಲಿದ್ದೀರಿ' ಎಂದು ಕೈಸನ್ನೆ ಮಾಡಿದರು.

Darshan Signal To Fans
ಅಭಿಮಾನಿಗಳಿಗೆ ಸಿಗ್ನಲ್​ ಕೊಟ್ಟ ದರ್ಶನ್​​ (Photo source: ETV Bharat)

By ETV Bharat Karnataka Team

Published : Oct 10, 2024, 3:53 PM IST

Updated : Oct 10, 2024, 6:09 PM IST

ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಬಂಧನಕ್ಕೊಳಗಾಗಿರುವ ಎ2 ಆರೋಪಿ ದರ್ಶನ್ ಅವರನ್ನು ಇಂದು ಬಳ್ಳಾರಿ ಸೆಂಟ್ರಲ್​ ಜೈಲಿನಲ್ಲಿ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಮತ್ತು ನಿರ್ಮಾಪಕಿ ಶೈಲಜಾ ನಾಗ್​ ಭೇಟಿ ಆಗಿದ್ದರು. ಚಿತ್ರರಂಗದ ಸ್ನೇಹಿತರ ಭೇಟಿಗಾಗಿ ಹೈ ಸೆಕ್ಯೂರಿಟಿ ಸೆಲ್​ಗೆ ತೆರಳುವ ವೇಳೆ ''ಡಿ ಬಾಸ್'' ಅಂತಾ ಜೈಲಿನ ಹೊರಗೆ ಜಮಾಯಿಸಿದ್ದ ಅಭಿಮಾನಿಗಳಿಂದ ಘೋಷಣೆ ಕೂಗಿದರು. ಆ ಸಂದರ್ಭ ನಟ ಎದೆ ಮುಟ್ಟಿ, ಸ್ಮೈಲ್ ​ಕೊಟ್ಟರು.

ಹರಿಕೃಷ್ಣ, ಶೈಲಜಾ ನಾಗ್, ರಾಹುಲ್ ಸೇರಿ ಒಟ್ಟು ಐವರು ದರ್ಶನ್ ಭೇಟಿಗಾಗಿ ಇಂದು ಬಳ್ಳಾರಿ ಜೈಲಿಗೆ ಭೇಟಿ ಕೊಟ್ಟಿದ್ದಾರೆ. ಸಂಗೀತ ನಿರ್ದೇಶಕರು ದರ್ಶನ್​​ಗಾಗಿ ಡ್ರೈ ಫ್ರೂಟ್ಸ್, ಬೇಕರಿ ತಿನಿಸು, ಬಟ್ಟೆ ತಂದಿದ್ದರು. ಜೈಲು ಸಿಬ್ಬಂದಿ ಬ್ಯಾಗ್ ಚೆಕ್ ಮಾಡಿ ಬಳಿಕ ಒಳಗೆ ಬಿಟ್ಟ ನಂತರ, ಹೈ ಸೆಕ್ಯೂರಿಟಿ ಸೆಲ್​ನಿಂದ ವಿಸಿಟರ್​ ಕೊಠಡಿಗೆ ದರ್ಶನ್ ಆಗಮಿಸಿ, ಈ ಐವರನ್ನು ಭೇಟಿ ಮಾಡಿದರು.

ಅಭಿಮಾನಿಗಳಿಗೆ ಸಿಗ್ನಲ್​ ಕೊಟ್ಟ ದರ್ಶನ್​​ (Video source: ETV Bharat)

ಹೈ ಸೆಕ್ಯುರಿಟಿ ಸೆಲ್​ನಿಂದ ಸಂದರ್ಶಕರ ಕೊಠಡಿಗೆ ಬರುವಾಗ 'ಡಿ ಬಾಸ್', 'ಡಿ ಬಾಸ್' ಅಂತಾ ಅಭಿಮಾನಿಗಳು ಕೂಗತೊಡಗಿದರು. ಅಭಿಮಾನಿಗಳ ಜೈಕಾರಕ್ಕೆ ಸ್ಮೈಲ್ ಕೊಟ್ಟ ದರ್ಶನ್ ನಾನು ನಿಮ್ಮೊಂದಿಗೆ ಇದ್ದೇನೆ, ನೀವು ನನ್ನ ಹೃದಯದಲ್ಲಿದ್ದೀರಿ ಎಂದು ಎದೆ ಮುಟ್ಟಿ ಸಿಗ್ನಲ್​ ಕೊಟ್ಟರು. ಈ ದೃಶ್ಯಗಳು ವ್ಯಾಪಕವಾಗಿ ವೈರಲ್​ ಆಗಿವೆ.

ಇದನ್ನೂ ಓದಿ:ರತನ್​ ಟಾಟಾ ನಿಧನ: ಶಿವಣ್ಣ, ರಿಷಬ್​​​ ಶೆಟ್ಟಿ, ಉಪ್ಪಿ ಸೇರಿದಂತೆ ಸಿನಿಗಣ್ಯರಿಂದ ಸಂತಾಪ

ದರ್ಶನ್ ಭೇಟಿ ಬಳಿಕ ಜೈಲಿನಿಂದ ಮೊದಲು ಹರಿಕೃಷ್ಣ ಮತ್ತು ಶೈಲಜಾನಾಗ್ ಹೊರಬಂದರು. ನಂತರ ಸ್ನೇಹಿತರಾದ ಅರವಿಂದ್, ಆಕಾಶ್, ಫ್ರಭು ಜೊತೆ ಮಾತುಕತೆ ನಡೆಸಿದರು.

ದರ್ಶನ್​​ ಭೇಟಿಯಾದ ಹರಿಕೃಷ್ಣ, ಶೈಲಜಾನಾಗ್ (Video source: ETV Bharat)

ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್, ಪವಿತ್ರಾ ಗೌಡಗೆ ಇಂದೂ ಸಿಗಲಿಲ್ಲ ಜಾಮೀನು


Last Updated : Oct 10, 2024, 6:09 PM IST

ABOUT THE AUTHOR

...view details