ಮತ ಚಲಾಯಿಸಿದ 75 ವರ್ಷದ ವೃದ್ಧೆ ಚಿತ್ರದುರ್ಗದ: ಜಿಲ್ಲೆಯ ಎಸ್ಸಿ ಮೀಸಲು ಕ್ಷೇತ್ರದ ಜೆಸಿಆರ್ ಬಡಾವಣೆಯ ಮತಗಟ್ಟೆ ಸಂಖ್ಯೆ 191 ರಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. 75 ವರ್ಷದ ವಯೋವೃದ್ಧೆ ಸುಲೋಚನ ಎಂಬುವವರು ಮತಚಲಾಯಿಸಿದ್ದಾರೆ. ಮತಗಟ್ಟೆಗೆ ಆಗಮಿಸಿದ ವೃದ್ಧೆ ತಮ್ಮ ಹಕ್ಕು ಚಲಾಯಿಸಿ ಯುವಕರಿಗೆ ಮಾದರಿಯಾಗಿದ್ದಾರೆ. ಇವರಲ್ಲದೇ ಉಳಿದ ಮತದಾರರು ಬೆಳ್ಳಂಬೆಳಿಗ್ಗೆ ಮತಗಟ್ಟೆಗೆ ಆಗಮಿಸಿದ್ದು ಮತ ಚಲಾಯಿಸಲು ಸರದಿ ಸಾಲಿನಲ್ಲಿ ನಿಂತಿದ್ದಾರೆ.
ಇನ್ನು ಇಂದಿನ ಚುನಾವಣೆಗೆ ಕೋಟೆನಾಡಿನಲ್ಲಿ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಾಗಿದೆ. ನಗರದ ಸರಸ್ವತಿ ಕಾನೂನು ಕಾಲೇಜಿನಲ್ಲಿ ಮಾದರಿ ಮತಗಟ್ಟೆ ಸಿದ್ಧಪಡಿಸಲಾಗಿದೆ. ಕಲ್ಲಿನಕೋಟೆ ಮಾದರಿಯಲ್ಲಿ ಮಾದರಿ ಮತಗಟ್ಟೆಯನ್ನು ಜಿಲ್ಲಾಡಳಿತ ನಿರ್ಮಿಸಿದೆ. ಜಿಲ್ಲಾ ಸ್ವೀಪ್ ಕಮಿಟಿ, ಜಿಲ್ಲಾಡಳಿತ ಮತ್ತು ಚುನಾವಣಾಧಿಕಾರಿಗಳು ವಿನೂತನ ಪ್ಲಾನ್ ಮೂಲಕ ಮತದಾರರನ್ನು ಮತಗಟ್ಟೆಗಳತ್ತ ಸೆಳೆಯಲು ಈ ಮತಗಟ್ಟೆ ನಿರ್ಮಿಸಿದ್ದಾರೆ.
ಊರುಗೋಲು ಹಿಡಿದು ಮತ ಚಲಾಯಿಸಿದ ವೃದ್ಧೆ 'ಮತದಾನ ಹೆಚ್ಚಳ ಮಾಡುವ ದೃಷ್ಟಿಯಿಂದ ವಿಷಯಾಧಾರಿತ ಮತಗಟ್ಟೆ ಸಿದ್ಧಪಡಿಸಲಾಗಿದೆ. ನಗರದಲ್ಲಿ ಐದು ಮತಗಟ್ಟೆಗಳನ್ನು ನಿರ್ಮಿಸಲಾಗಿದೆ' ಎಂದು ಸ್ವೀಪ್ ಕಮಿಟಿ ಸದಸ್ಯರು, ನಗರಸಭೆ ಪೌರಾಯುಕ್ತೆ ರೇಣುಕಾ ಮಾಹಿತಿ ನೀಡಿದ್ದಾರೆ.
ಮಹಿಳಾ ಮತದಾರರ ಆಕರ್ಷಣೆಗಾಗಿ ಪಿಂಕ್ ಬೂತ್:ಮಹಿಳಾ ಮತದಾರರ ಆಕರ್ಷಣೆಗಾಗಿ ಪಿಂಕ್ ಬೂತ್ (ಸಖಿ ಮತಗಟ್ಟೆ)ನ್ನು ಸಜ್ಜುಗೊಳಿಸಲಾಗಿದೆ. ಮಧುವಣಗಿತ್ತಿಯಂತೆ ಸಿಂಗಾರಗೊಂಡ ಪಿಂಕ್ ಬೂತ್ ನಲ್ಲಿ ಪಿಂಕ್ ಶಾಮಿಯಾನ, ಪಿಂಕ್ ಬಲೂನ್ಗಳು ಮನ ಸೆಳೆಯುತ್ತಿದೆ. ಮತಗಟ್ಟೆಯಲ್ಲಿ ಪಿಂಕ್ ಸೀರೆ ಉಟ್ಟು ಮತದಾರರನ್ನು ಸ್ವಾಗತಿಸಲು ಸಿಬ್ಬಂದಿಗಳಿದ್ದಾರೆ. ಚಿತ್ರದುರ್ಗ ನಗರದ ಸೆಂಟ್ ಜೋಸೇಫ್ ಕಾನ್ವೆಂಟ್ನಲ್ಲಿ ನಿರ್ಮಾಣವಾಗಿರುವ ಮತಗಟ್ಟೆ ಸಂಖ್ಯೆ 220ರ ಪಿಂಕ್ ಬೂತಲ್ಲಿ ಮತದಾನ ಆರಂಭವಾಗಿದೆ.
ನಿನ್ನೆಯೆ ಮತದಾನಕ್ಕೆ ಸಿಬ್ಬಂದಿಗಳು ಎವಿಎಂ ಮಷಿನ್ಗಳನ್ನು ಸಿದ್ಧಪಡಿಸಿಕೊಂಡಿದ್ದು, ಮತಗಟ್ಟೆ ಸಿಬ್ಬಂದಿಗಳಿಂದ ಅಂತಿಮ ಸಿದ್ಧತೆ ಕೂಡ ನಡೆದಿದೆ. ಮೊದಲಿಗೆ ಇವಿಎಂ ಮಿಷನ್ ಹಾಗೂ ವಿವಿ ಪ್ಯಾಡ್ಗಳ ಪರಿಶೀಲನೆ ನಡೆಸಿದ್ದಾರೆ. ಮತದಾನ ಆರಂಭದ ವೇಳೆ ಮತಯಂತ್ರ ಸಮಸ್ಯೆ ಬರದಂತೆ ಮುಂಜಾಗ್ರತೆ ವಹಿಸಲಾಗಿದೆ. ಇದಲ್ಲದೆ ಜಿಲ್ಲೆಯಾದಂತ್ಯ ಯುವ ಮತಗಟ್ಟೆ, ಪಿಡಬ್ಲೂಡಿ ಮತಗಟ್ಟೆ , ಕೋಟೆ ಮಾದರಿ ಮತಗಟ್ಟೆ, ಸಖಿ ಮತಗಟ್ಟೆ ಹೀಗೇ ನಾನ ಮಾದರಿಯ ಮತಗಟ್ಟೆಗಳನ್ನು ಜಿಲ್ಲಾ ಸ್ವೀಪ್ ಕಮಿಟಿ ಸಿದ್ದಮಾಡಿದೆ.
ಇದನ್ನೂ ಓದಿ:LIVE Update: ರಾಜ್ಯದ 14 ಲೋಕಸಭಾ ಸ್ಥಾನಗಳಿಗೆ ಮತದಾನ ಶುರು - second phase Election Begin