ಚಾಮರಾಜನಗರ:ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಚಾಮರಾಜನಗರ ಲೋಕ ಅಖಾಡದಲ್ಲಿ ಯಾವುದೇ ಅಕ್ರಮ ನಡೆಯಬಾರದು ಎಂದು ಅಬಕಾರಿ ಇಲಾಖೆ ಕಟ್ಟೆಚ್ಚರ ವಹಿಸಿದೆ. ಇದೇ ಮೊದಲ ಬಾರಿ ಅಬಕಾರಿ ಇಲಾಖೆ ಮದ್ಯದಂಗಡಿಗಳಲ್ಲಿ ಮತದಾನ ಜಾಗೃತಿ ಮೂಡಿಸುತ್ತಿದೆ. ಚಾಮರಾಜನಗರದ ಮದ್ಯಗಂಡಿಗಳಲ್ಲಿ ಭಿತ್ತಿಪತ್ರ ಅಂಟಿಸಿ ಮದ್ಯಪ್ರಿಯರು ಮತದಾನದಿಂದ ದೂರ ಉಳಿಯದಂತೆ ಅರಿವು ಮೂಡಿಸುತ್ತಿದೆ.
ಗಡಿಜಿಲ್ಲೆಯಲ್ಲಿ 145ಕ್ಕೂ ಅಧಿಕ ಔಟ್ಲೆಟ್ಗಳಿದ್ದು ಎಲ್ಲೆಡೆ ಮತದಾನ ಜಾಗೃತಿ ಭಿತ್ತಿಚಿತ್ರ ಅಂಟಿಸಲಾಗಿದೆ. ಮದ್ಯದಂಗಡಿಗೆ ಹೋಗುವ ಮುನ್ನ, ಮದ್ಯ ಸೇವಿಸುವಾಗ ಜನರಿಗೆ ಕಾಣುವಂತೆ ಹಾಗೂ ಹೊರಹೋಗುವ ಸ್ಥಳಗಳಲ್ಲಿ ಈ ಭಿತ್ತಿಪತ್ರ ಅಂಟಿಸಲಾಗಿದ್ದು, ಮತದಾನ ಜಾಗೃತಿ ವ್ಯಾಪ್ತಿಗೆ ಇದೇ ಮೊದಲ ಬಾರಿಗೆ ಮದ್ಯಪ್ರಿಯರನ್ನೂ ಸೇರಿಸಲಾಗಿದೆ. ಚಾಮರಾಜನಗರದಲ್ಲಿ 18 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಮದ್ಯಪ್ರಿಯರ ಸಂಖ್ಯೆ 5 ಲಕ್ಷ ದಷ್ಟಿದೆ. ಈ ಹಿನ್ನೆಲೆಯಲ್ಲಿ, ಅಬಕಾರಿ ಇಲಾಖೆಯು ಮದ್ಯಪ್ರಿಯರು ಮತದಾನದಿಂದ ದೂರ ಉಳಿಯದಂತೆ ಮಾಡಲು ಜಾಗೃತಿ ಮೂಡಿಸಲಾಗುತ್ತಿದೆ.