ವಿಜಯಪುರ: ಜಿಲ್ಲೆಯ ಕೊಲ್ಹಾರ ಸಮೀಪ ಹರಿಯುವ ಕೃಷ್ಣಾ ನದಿಯಲ್ಲಿ ಮಂಗಳವಾರ ಸಂಜೆ ತೆಪ್ಪ ಮಗುಚಿ ನೀರು ಪಾಲಾದ 6 ಮಂದಿಗೆ ಇಂದು ಮತ್ತೆ ಶೋಧ ನಡೆಯುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಮುಂದಾಳತ್ವದಲ್ಲಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೀನುಗಾರರು ಕೂಡಾ ಸಾಥ್ ನೀಡಿದ್ದಾರೆ.
ನೀರು ಪಾಲಾಗಿದ್ದ ಆರು ಜನರ ಪೈಕಿ ಇದೀಗ ಮೂವರ ಶವಗಳು ಪತ್ತೆಯಾಗಿವೆ. ನಿನ್ನೆ ಸಂಜೆಯೇ ಇಬ್ಬರ ಮೃತದೇಹ ಸಿಕ್ಕಿತ್ತು. ಇಂದು ಬೆಳಗ್ಗಿನ ಶೋಧ ಕಾರ್ಯದಲ್ಲಿ ಮತ್ತೊಬ್ಬನ ಶವ ದೊರೆತಿದೆ. ಪುಂಡಲೀಕ ಯಂಕಂಚಿ, ತಯ್ಯಬ್ ಚೌಧರಿ ಮತ್ತು ದಶರಥ ಗೌಡರ್ (54) ಎಂಬವರು ಶವವಾಗಿ ಪತ್ತೆಯಾಗಿದ್ದು, ಇನ್ನುಳಿದವರಿಗೆ ಶೋಧ ಮುಂದುವರೆದಿದೆ.
ಇಸ್ಪೀಟ್ ಆಡುತ್ತಿರುವಾಗ ಪೊಲೀಸರು ದಾಳಿಯಿಂದ ತಪ್ಪಿಸಿಕೊಳ್ಳಲು ಎಂಟು ಮಂದಿ ತೆಪ್ಪ ಏರಿದ್ದರು. ಈ ಗುಂಪಿನಲ್ಲಿದ್ದ ಸಚಿನ್ ಮತ್ತು ಫಾರೂಕ್ ಎಂಬಿಬ್ಬರು ಈಜಿ ದಡ ಸೇರಿದ್ದರೆ, ಉಳಿದ ಆರು ಜನ ಕಾಣೆಯಾಗಿದ್ದರು. ಇದೀಗ ರಫೀಕ್, ಮೆಹಬೂಬ್ ಸೇರಿ ಇತರರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ರಕ್ಷಣೆಯಾದವರು:
- ಸಚಿನ್ ಕಟಬರ
- ಫಾರೂಕ್ ಅಹಮದ್
ಇವರ ಶವಗಳು ಪತ್ತೆ:
- ಪುಂಡಲೀಕ ಯಂಕಂಚಿ
- ತಯ್ಯಬ್ ಚೌಧರಿ
- ದಶರಥ ಗೌಡರ್ (54)