ಕರ್ನಾಟಕ

karnataka

ETV Bharat / state

ವಿಜಯಪುರ: ವರ್ಷದ ಹಿಂದೆ ನಡೆದ ಜೋಡಿ ಕೊಲೆ ಕೇಸ್ ಭೇದಿಸಿದ ಪೊಲೀಸರು, ಪ್ರಿಯಕರ ಸೆರೆ - Vijayapura Double Murder Case

ಕಳೆದ ವರ್ಷ ವಿಜಯಪುರದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ವರ್ಷದ ಹಿಂದೆ ನಡೆದಿದ್ದ ಜೋಡಿ ಕೊಲೆ; ಪ್ರಕರಣ ಭೇದಿಸಿದ ಪೊಲೀಸರು, ಪ್ರಿಯಕರನ ಬಂಧನ
ವರ್ಷದ ಹಿಂದೆ ನಡೆದಿದ್ದ ಜೋಡಿ ಕೊಲೆ; ಪ್ರಕರಣ ಭೇದಿಸಿದ ಪೊಲೀಸರು, ಪ್ರಿಯಕರನ ಬಂಧನ

By ETV Bharat Karnataka Team

Published : Mar 25, 2024, 11:26 AM IST

ವಿಜಯಪುರ: ವರ್ಷದ ಹಿಂದೆ ಜಿಲ್ಲೆಯಲ್ಲಿ ನಡೆದ ಭೀಕರ ಜೋಡಿ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ವಿಜಯಪುರ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.

ಪ್ರಕರಣದ ವಿವರ:ಇದು ತಾಯಿ ಮಗನ ಕೊಲೆ ಪ್ರಕರಣ. ಮೈಸೂರು ಮೂಲದ ಶೃತಿ ಹಾಗೂ ಆಕೆಯ 13 ವರ್ಷದ ಮಗ ರೋಹನ್ ಹತ್ಯೆಯಾಗಿದ್ದರು. ವಿಜಯಪುರದ ಸಾಗರ್ ನಾಯಕ್ ಎಂಬಾತ ಇಬ್ಬರನ್ನು ಕೊಲೆಗೈದಿದ್ದ. ಆರೋಪಿ ಅತ್ಯಂತ ಕ್ರೂರವಾಗಿ ಇಬ್ಬರನ್ನು ಕೊಂದು ಶವಗಳನ್ನು ಬ್ಯಾಗ್‌ವೊಂದರಲ್ಲಿ ತುಂಬಿ ಮಹಾರಾಷ್ಟ್ರ ಗಡಿಯ ಸಿದ್ದಾಪುರ ಗ್ರಾಮದ ಹೊರವಲಯದ ಬಾವಿಗೆ ಎಸೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಮಾರ್ಚ್ 13ರಂದು ಘಟನೆ ನಡೆದಿತ್ತು.

ಸಾಗರ್ ನಾಯಕ್‌ ಮೈಸೂರಿನಲ್ಲಿದ್ದಾಗ ಫೇಸ್ಬುಕ್ ಮೂಲಕ ಶೃತಿ ಪರಿಚಯವಾಗಿತ್ತು. ಇಬ್ಬರ ಪರಿಚಯ ಪ್ರೀತಿಗೆ ತಿರುಗಿದೆ. ಕೆಲವು ದಿನಗಳ ಬಳಿಕ ಶೃತಿ ನಡತೆ ಬಗ್ಗೆ ಸಂಶಯಗೊಂಡ ಆರೋಪಿ ಆಕೆಯನ್ನು ಬಿಟ್ಟು ವಿಜಯಪುರಕ್ಕೆ ಬಂದಿದ್ದಾನೆ. ನಂತರ ಸಾಗರ್ ನಾಯಕನನ್ನು ಹುಡುಕಿಕೊಂಡು ಮಾರ್ಚ್ 13 ರಂದು ಮಗ ರೋಹಿತ್ ಜೊತೆಗೆ ಸರಕು ಸಮೇತ ಶೃತಿ ವಿಜಯಪುರಕ್ಕೆ ಬಂದಿದ್ದರು.

ಸಿಂದಗಿ ರಸ್ತೆಯ ಪೋರ್ ವೇ ಲಾಡ್ಜ್‌ವೊಂದರಲ್ಲಿ ಶೃತಿ ಹಾಗೂ ಆಕೆಯ ಮಗನಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದ ಸಾಗರ್, ಲಾಡ್ಜ್‌ನಲ್ಲಿ ಗಲಾಟೆ ಮಾಡಿಕೊಂಡು ಶೃತಿಯನ್ನು ಕುತ್ತಿಗೆ ಹಿಸುಕಿ ಕೊಂದು ಹಾಕಿದ್ದ. ಕೊಲೆಗೆ ಸಾಕ್ಷಿಯಾಗ್ತಾನೆ ಎಂದು ಬಾಲಕ ರೋಹಿತ್‌ನನ್ನೂ ಕೊಲೆ ಮಾಡಿದ್ದಾನೆ. ಶೃತಿ ಮೈಸೂರಿನಿಂದ ತಂದಿದ್ದ ಲಗೇಜ್‌ನಲ್ಲಿಯೇ ಅವರ ಹೆಣಗಳನ್ನು ಪ್ಯಾಕ್ ಮಾಡಿ ಸಿದ್ದಾಪುರ ಬಾವಿಗೆಸೆದಿದ್ದ. ವಾರದ ಬಳಿಕ ಬಾವಿಯಲ್ಲಿ ಬ್ಯಾಗುಗಳು ತೇಲಿ ಬಂದಿವೆ. ತಿಕೋಟ ಪೊಲೀಸರು ಪರಿಶೀಲನೆ ಮಾಡಿದಾಗ ತಾಯಿ, ಮಗನ ಶವ ಪತ್ತೆಯಾಗಿತ್ತು. ಆದರೆ ಕೊಳೆತ ಶವಗಳ ಗುರುತು ಪತ್ತೆಯಾಗಿರಲಿಲ್ಲ. ಹೆಚ್ಚಿನ ಸಾಕ್ಷಿ ಲಭ್ಯವಾಗದ ಕಾರಣ ಪ್ರಕರಣ ಹಾಗೇ ಉಳಿದಿತ್ತು. ಕಳೆದ ಫೆಬ್ರವರಿಯಲ್ಲಿ ಶೃತಿ ಸಂಬಂಧಿಕರು ಮೈಸೂರಿನಲ್ಲಿ ಮಿಸ್ಸಿಂಗ್ ಕೇಸ್ ದಾಖಲು ಮಾಡಿದ್ದರು.

ಮೈಸೂರು ಮಿಸ್ಸಿಂಗ್ ಕೇಸ್ ಹಾಗೂ ವಿಜಯಪುರದಲ್ಲಿ ನಡೆದ ಡಬಲ್ ಮರ್ಡರ್ ಕೇಸ್‌ನಲ್ಲಿ ಸಿಕ್ಕ ವಸ್ತುಗಳಿಗೆ ಸಾಮ್ಯತೆ ಕಂಡುಬಂದ ಬಳಿಕ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಆಕೆಯ ಪ್ರಿಯಕರ ಸಾಗರ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಆಟೋ ಪಾರ್ಕಿಂಗ್​​ಗಾಗಿ ಎರಡು ಕುಟುಂಬಸ್ಥರ ಗಲಾಟೆ, ಮನೆಗೆ ನುಗ್ಗಿ ಹಲ್ಲೆ ಆರೋಪ - Clash Over Auto Parking

ABOUT THE AUTHOR

...view details