ಚಾರ್ಧಾಮ್ ಯಾತ್ರೆಗೆ ತೆರಳಿದವರು (ETV Bharat) ಹಾವೇರಿ: ಚಾರ್ಧಾಮ್ ಯಾತ್ರೆಗಾಗಿ ಉತ್ತರಾಖಂಡ್‌ಗೆ ತೆರಳಿದ್ದ ಜಿಲ್ಲೆಯ ಏಳು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಸ್ಪರ ಸಂಬಂಧಿಕರಾಗಿರುವ ಚಿಕ್ಕೇರೂರು ಹಾಗೂ ತಿಳವಳ್ಳಿ ಗ್ರಾಮಗಳ ಜನರು ಯಾತ್ರೆಗೆ ತೆರಳಿದ್ದರು.
ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಎಂಬ ಗ್ರಾಮದ ಬಳಿ ಭೂಕುಸಿತ ಸಂಭವಿಸಿದೆ. ಬದರಿನಾಥ್ ದರ್ಶನ ಮುಗಿಸಿ ವಾಪಸ್ ಆಗುತ್ತಿದ್ದಾಗ ಭೂ ಕುಸಿತ ಉಂಟಾಗಿದ್ದು, ಈ ತಂಡ ಅಲ್ಲಿಯೇ ಸಿಲುಕಿದೆ.
ಶ್ರೀಧರ್ ಎಂ.ಹೊಳಲ್ಕೇರಿ (62), ಶಾಂತಾ ಎಸ್.ಹೊಳಲ್ಕೇರಿ (57), ಅಶೋಕ್ ಎಸ್.ವಿ.(61), ಭಾರತಿ ಎ.ಎಸ್.(55), ವೆಂಕಟೇಶ್ ಪಂಪನ್ (62), ರಾಜೇಶ್ವರಿ ಪಂಪನ್ (60), ರಾಹುಲ್ ಪಂಪನ್ (35) ಜೂನ್ 29ರಂದು ಯಾತ್ರೆಗೆ ತೆರಳಿದ್ದರು. ಇಂದಿಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದು, ವಾಪಸ್ ಬರಬೇಕಿತ್ತು. ಆದರೆ, ಅಷ್ಟರಲ್ಲಿ ಸಂಭವಿಸಿದ ಭೂಕುಸಿತದಿಂದ ತೊಂದರೆಗೆ ಸಿಲುಕಿದ್ದಾರೆ. ತಮ್ಮನ್ನು ಸುರಕ್ಷಿತವಾಗಿ ವಾಪಸ್ ಕರೆದೊಯ್ಯುವಂತೆ ರಾಜ್ಯ ಸರ್ಕಾರಕ್ಕೆ ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ತಮಿಳುನಾಡಿಗೆ 20 ಟಿಎಂಸಿ ಕಾವೇರಿ ನೀರು ಬಿಡುವ ಒತ್ತಡದಲ್ಲಿ ಕರ್ನಾಟಕ: ಇಂದು ತುರ್ತು ಸಭೆ - Cauvery Emergency Meeting