ಕರ್ನಾಟಕ

karnataka

ETV Bharat / state

ನ್ಯಾ. ಕುನ್ಹಾ ಅವರಿಗೆ ಏಜೆಂಟ್ ಎಂದು ನಾನು ಕರೆದಿಲ್ಲ: ಇಂಟಿಗ್ರಿಟಿ ಪ್ರಶ್ನೆ ಮಾಡ್ತೀನಿ ಅನ್ನಿಸಿದರೆ ವಿಷಾದಿಸುತ್ತೇನೆ, ಪ್ರಲ್ಹಾದ್ ಜೋಶಿ - PRAHLAD JOSHI

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮೈಕಲ್ ಡಿ. ಕುನ್ಹಾ ಕುರಿತ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಾನು ಅವರಿಗೆ ಏಜೆಂಟ್​ ಅಂತ ಹೇಳಿಲ್ಲ, ಏಜೆಂಟರ ರೀತಿ ನಡೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದೇನೆ ಎಂದಿದ್ದಾರೆ.

union-minister-prahlad-joshi
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (ETV Bharat)

By ETV Bharat Karnataka Team

Published : Nov 11, 2024, 4:06 PM IST

Updated : Nov 11, 2024, 4:12 PM IST

ಹಾವೇರಿ: ''ನಾನು‌ ಕುನ್ಹಾ ಅವರಿಗೆ ಏಜೆಂಟ್ ಅಂತ ಹೇಳಿಲ್ಲ. ಏಜೆಂಟರ ರೀತಿ ನಡೆದುಕೊಳ್ಳಬೇಡಿ ಅಂದಿದ್ದೇನೆ. ಅವರ ಮೇಲೆ ನನಗೆ ವೈಯಕ್ತಿಕ ದ್ವೇಷ, ಅಸೂಯೆ‌ ಇಲ್ಲ ಎಂದು ವಿವಾದಾತ್ಮಕ ಹೇಳಿಕೆ ಆರೋಪದ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಶಿಗ್ಗಾಂವಿಯಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿರುವ ಅವರು, ''ಕಾಂಗ್ರೆಸ್​‌ನವರು ತರಾತುರಿಯಲ್ಲಿ ವರದಿ ಕೊಡಿಸಿದ್ದಾರೆ. ಯಡಿಯೂರಪ್ಪ ಅವರಿಗೆ ನೋಟಿಸ್​ ಬಂದಿಲ್ಲ. ಪ್ರಕ್ರಿಯೆ ಫಾಲೋ‌ ಆಗಿಲ್ಲ. ಈ‌ ರೀತಿ ಮಾಡಬೇಡಿ, ಫೇರ್ ಆಗಿ ತನಿಖೆ‌ ಮಾಡಿ ಅಂದಿದ್ದೇನೆ. ಕುನ್ಹಾ ಅವರಿಗೆ ಇಂಟಿಗ್ರಿಟಿ ಪ್ರಶ್ನೆ ಮಾಡ್ತೀನಿ ಅಂತ ಅನ್ನಿಸಿದರೆ ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ'' ಎಂದಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿದರು (ETV Bharat)

ಯಡಿಯೂರಪ್ಪ ಅಂತಹ ಸೀನಿಯರ್ ವ್ಯಕ್ತಿಗೆ ಆಲ್ ಆಫ್ ಸಡನ್ ಪ್ರಾಸಿಕ್ಯೂಷನ್ ಮಾಡೋದು ಅಂದರೆ ಹೇಗೆ?. ಯಡಿಯೂರಪ್ಪ ಅವರಿಗೆ ಇದು ಗೊತ್ತಿಲ್ಲ. ಮೀಡಿಯಾದಲ್ಲಿ ಬಂದ ಮೇಲೆ ಗೊತ್ತಾಗಿದೆ. ಜಮೀರ್​ ಹಾಗೆ ಭಂಡ ಅಲ್ಲ, ನಾನು ಇನ್ಸ್ಟಿಟ್ಯೂಟಷನ್​ಗೆ ಗೌರವ ವ್ಯಕ್ತಪಡಿಸಬೇಕಾದ ಹಿನ್ನೆಲೆ ವಿಷಾದ ವ್ಯಕ್ತಪಡಿಸುವೆ ಎಂದು ತಿಳಿಸಿದರು.

ರಾಜ್ಯಪಾಲರಿಗೆ ದೂರು :ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಚಿವರಾದ ಕೃಷ್ಣ ಬೈರೇಗೌಡ ಹಾಗೂ ದಿನೇಶ್ ಗುಂಡೂರಾವ್ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ :ನ್ಯಾ.ಡಿ.ಕುನ್ಹಾ ಬಗ್ಗೆ ವಿವಾದಾತ್ಮಕ ಹೇಳಿಕೆ ಆರೋಪ; ಪ್ರಲ್ಹಾದ್ ಜೋಶಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಸಚಿವರು

Last Updated : Nov 11, 2024, 4:12 PM IST

ABOUT THE AUTHOR

...view details