ಕರ್ನಾಟಕ

karnataka

ETV Bharat / state

1,800 ಕಿ.ಮೀ ಪ್ರಯಾಣ​: ಬಾಗಲಕೋಟೆಯಿಂದ ಅಯೋಧ್ಯೆಗೆ ಸೈಕಲ್‌ನಲ್ಲೇ ಹೊರಟ ಯುವಕರು - ಸೈಕಲ್​

ಬಾಗಲಕೋಟೆಯ ಇಬ್ಬರು ಯುವಕರು ದೇಶದ ಒಳಿತಿಗೆ ಪ್ರಾರ್ಥಿಸಲು ಸೈಕಲ್​ ಮೂಲಕವೇ ಬಾಗಲಕೋಟೆಯಿಂದ ಅಯೋಧ್ಯೆಗೆ ತೆರಳಿದ್ದಾರೆ.

bagalkote
ಪೃಥ್ವಿರಾಜ ಅಂಬಿಗೇರ ಹಾಗೂ ಅಭಿಷೇಕ್​ ಗಟನೂರ

By ETV Bharat Karnataka Team

Published : Feb 2, 2024, 11:09 AM IST

Updated : Feb 2, 2024, 1:20 PM IST

ಬಾಲರಾಮನ ದರ್ಶನಕ್ಕೆ ಸೈಕಲ್​ನಲ್ಲಿ ಪಯಣ ಬೆಳೆಸಿದ ಯುವಕರು

ಬಾಗಲಕೋಟೆ:ಸೈಕಲ್​​ ಮೂಲಕ ಅಯೋಧ್ಯೆಗೆ ತೆರಳಿ ಶ್ರೀರಾಮಲಲ್ಲಾನ ದರ್ಶನಭಾಗ್ಯ ಪಡೆಯಲು ಜಿಲ್ಲೆಯ ಇಬ್ಬರು ಯುವಕರು ಮುಂದಾಗಿದ್ದಾರೆ. ಶ್ರೀ ಮಾತೃಭೂಮಿ ಯುವಕ ಸಂಘ ಬಾಗಲಕೋಟೆ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯ ಕಾರ್ಯಕರ್ತರಾದ ಪೃಥ್ವಿರಾಜ ಅಂಬಿಗೇರ ಹಾಗೂ ಅಭಿಷೇಕ್​ ಗಟನೂರ ಅಯೋಧ್ಯೆಯವರೆಗೂ ಸೈಕಲ್​​ ಮುಖಾಂತರವೇ ಪ್ರಯಾಣ ಬೆಳೆಸಿದ್ದಾರೆ. ಲಕ್ಷ್ಮೀ ನಗರದ ಲಕ್ಷ್ಮೀ ಗುಡಿ ಆವರಣದಲ್ಲಿ ಭಾರತ ಮಾತೆಗೆ ಪುಷ್ಪಾಂಜಲಿ ಸಲ್ಲಿಸಿ ಭಗವಾಧ್ವಜದ ಮೂಲಕ ಸೈಕಲ್ ಯಾತ್ರೆಗೆ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಚಾಲನೆ ನೀಡಿ ಶುಭ ಹಾರೈಸಿದರು.

1,800 ಕಿ.ಮೀ ಸೈಕಲ್​​ ಪ್ರಯಾಣ:30 ದಿನಗಳಲ್ಲಿ1,800 ಕಿ.ಮೀ ದೂರದ ಅಯೋಧ್ಯೆ ತಲುಪಿ ಶ್ರೀರಾಮನ ದರ್ಶನ ಪಡೆಯಲಿದ್ದೇವೆ. ಪ್ರತಿದಿನ 50ಕ್ಕೂ ಅಧಿಕ ಕಿಲೋ ಮೀಟರ್​ ಸಂಚರಿಸುತ್ತೇವೆ. ರಾತ್ರಿ ದೇವಾಲಯ ಇಲ್ಲವೇ ಛತ್ರಗಳಲ್ಲಿ ವಾಸ್ತವ್ಯ ಪಡೆಯುತ್ತೇವೆ. ದೇಶದಲ್ಲಿ ಶಾಂತಿ‌ ನೆಲೆಸಿ, ಎಲ್ಲರಿಗೂ ಕಲ್ಯಾಣವಾಗಲೆಂದು ಶ್ರೀರಾಮನಲ್ಲಿ ಪ್ರಾರ್ಥಿಸುತ್ತೇವೆ ಎಂದು ಯುವಕರು ತಿಳಿಸಿದ್ದಾರೆ.

ನಗರಸಭೆ ಸದಸ್ಯೆ ಶೀವಲೀಲಾ ಪಟ್ಟಣಶೆಟ್ಟಿ, ಬಸಲಿಂಗಪ್ಪ ನಾವಲಗಿ, ವಿಶ್ವನಾಥ ವೈಜಾಪುರ, ಮಹೇಶ ಸಜ್ಜನ, ಮಾರುತಿ ಅಂಬಿಗೇರ, ಚಂದ್ರು ರಾಮವಾಡಗಿ, ಮುರಗೇಪ್ಪ ಹೂಲಗಬ್ಯಾಳಿ, ಪ್ರಕಾಶ ನಿರಂಜನ, ಕುಮಾರಸ್ವಾಮಿ ಹಿರೇಮಠ, ನಾಗರಾಜ ಬಾರಕೇರ, ಶ್ರೀಧರ ಶಹಾಪುರ, ಈರಯ್ಯ ಕಂಠಿಮಠ, ರಾಮಣ್ಣ ರಾಮವಾಡಗಿ ಮಾತೃಭೂಮಿ ಯುವಕ ಸಂಘ, ಹಿಂದೂ ಮಹಾಗಣಪತಿ ಉತ್ಸವ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ:ಅಯೋಧ್ಯೆ ಶ್ರೀರಾಮನ ದರ್ಶನಕ್ಕೆ ಲಖನೌದಿಂದ 350 ಮುಸ್ಲಿಮರಿಂದ 6 ದಿನಗಳ ಪಾದಯಾತ್ರೆ

Last Updated : Feb 2, 2024, 1:20 PM IST

ABOUT THE AUTHOR

...view details