ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ನಿರ್ಲಕ್ಷ್ಯದ ಸ್ಕೂಟಿ ಚಾಲನೆ, 3 ಅಡಿ ತೂರಿ ರಸ್ತೆಗೆ ಬಿದ್ದ! - two wheeler accident - TWO WHEELER ACCIDENT

ವೇಗವಾಗಿ ಸಾಗಿಸುತ್ತಿದ್ದ ವೇಳೆ ರಸ್ತೆ ಬಿಟ್ಟು ಬದಿಗೆ ಹೋದ ಸ್ಕೂಟಿ ಅಪಘಾತವಾಗಿ ಬಿದ್ದರೂ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಸ್ಕೂಟಿ ಅಪಘಾತ
ಸ್ಕೂಟಿ ಅಪಘಾತ (ETV Bharat)

By ETV Bharat Karnataka Team

Published : Aug 22, 2024, 11:13 AM IST

Updated : Aug 22, 2024, 11:40 AM IST

ಸ್ಕೂಟಿ 3 ಅಡಿ ಮೇಲೆ ಹಾರಿ ರಸ್ತೆಗೆ ಬಿದ್ದರೂ ಅನಾಯಾಸವಾಗಿ ಎದ್ದು ಹೊರಟ ಧೀರ (ETV Bharat)

ಚಿಕ್ಕಮಗಳೂರು: ದ್ವಿಚಕ್ರ ವಾಹನ ಪಲ್ಟಿ ಹೊಡೆದು ಅಪಘಾತ ಸಂಭವಿಸಿದರೂ ಸವಾರ ಪವಾಡ ಸದೃಶ ರೀತಿಯಲ್ಲಿ ಬದುಕಿ ಬಂದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಚಿಕ್ಕಮಾಗರವಳ್ಳಿಯಲ್ಲಿ ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೆಚ್ಚಿ ಬೀಳುಸುವಂತಿದೆ.

ರಸ್ತೆಯಲ್ಲಿ 2 ದ್ವಿಚಕ್ರವಾಹನಗಳು ಬರುತ್ತಿತ್ತು. ಈ ವೇಳೆ ತಿರುವಿನಲ್ಲಿ ಓರ್ವ ಸವಾರನ ಸ್ಕೂಟಿ ರಸ್ತೆಯಿಂದ ಬದಿಗೆ ಇಳಿದಿದೆ. ಪರಿಣಾಮ ಸವಾರನ ಜೊತೆಗೆ ವಾಹನ ಕೂಡ 3 ಅಡಿ ಎತ್ತರಕ್ಕೆ ಹಾರಿ, ಉರುಳಿ ರಸ್ತೆ ಮೇಲೆ ಬಿದ್ದಿದೆ. ತಕ್ಷಣ ಸವಾರ ಎದ್ದು ನಿಂತಿದ್ದಾನೆ. ಅಪಘಾತದಿಂದ ವಾಹನಕ್ಕೆ ಹಾನಿಯಾಗಿರುವುದು ಬಿಟ್ಟರೆ ಆಲ್ದೂರಿನ ಸಂತೆ ಮೈದಾನದ ಯುವಕನಿಗೆ ಯಾವುದೇ ಗಾಯಗಳಾಗಿಲ್ಲ.

ಘಟನಾ ಸ್ಥಳ ಆಲ್ದೂರು ಸಮೀಪದ ಹಳ್ಳಿಯಾಗಿದ್ದು, ಅಪಘಾತದ ಶಬ್ಧಕ್ಕೆ ರಸ್ತೆ ಬದಿ ಇದ್ದ ಮನೆ ಮಂದಿಯೆಲ್ಲ ಹೊರ ಬಂದು ನೋಡಿದ್ದಾರೆ. ಸವಾರ ಮಾತ್ರ ಏನು ಆಗಿಲ್ಲವೆಂಬಂತೆ ತನ್ನ ಗಾಡಿ ತೆಗೆದುಕೊಂಡು ಮುಂದಕ್ಕೆ ಸಾಗಿದ್ದಾನೆ.

ಇದನ್ನೂ ಓದಿ:ಮಂಗಳೂರಲ್ಲಿ ಕಾಂಗ್ರೆಸ್ ನಾಯಕ ಐವನ್ ಡಿಸೋಜಾ ಮನೆ ಮೇಲೆ ಕಲ್ಲು ತೂರಾಟ - Ivan DSouza house attacked

Last Updated : Aug 22, 2024, 11:40 AM IST

ABOUT THE AUTHOR

...view details