ವಿಜಯನಗರ:ವಿಜಯದಶಮಿ ನಿಮಿತ್ತ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಬೆಲ್ಲದ ಬಂಡಿ ಉತ್ಸವದ ವೇಳೆ ಆಯೋಜಿಸಲಾದ ಎತ್ತಿನ ಬಂಡಿ ಓಡಿಸುವ ಸ್ಪರ್ಧೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದ ಬೆಲ್ಲದ ಬಂಡಿ ಉತ್ಸವದಲ್ಲಿ ಎತ್ತಿನ ಬಂಡಿನ ಓಡಿಸುವ ಸ್ಪರ್ಧೆಯೇ ಪ್ರಮುಖ ಆಕರ್ಷಣೆ. ರಭಸದಿಂದ ಓಡುವ ಎತ್ತಿನ ಬಂಡಿಯೊಂದಿಗೆ ಊರಿನ ಜನರೂ ಓಡುವುದು ಸಾಮಾನ್ಯ. ಇದೇ ರೀತಿ ನಿನ್ನೆ ಬಂಡಿಯಿಂದ ಕೆಳಕ್ಕೆ ಬಿದ್ದು ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ.