ಕರ್ನಾಟಕ

karnataka

ETV Bharat / state

ಮಗಳ ಕೊಂದ ಯುವಕನನ್ನು ಸಿಮೆಂಟ್‌ ಇಟ್ಟಿಗೆಯಿಂದ ಹೊಡೆದು ಸಾಯಿಸಿದ ಮಹಿಳೆ! - Double Murder - DOUBLE MURDER

ರಾಜಧಾನಿ ಬೆಂಗಳೂರಿನಲ್ಲಿ ಜೋಡಿ ಕೊಲೆ ನಡೆದಿದ್ದು ಪ್ರಕರಣ ಸಂಬಂಧ ಓರ್ವ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಜಧಾನಿಯಲ್ಲಿ ಜೋಡಿ ಕೊಲೆ: ಆರೋಪಿತೆ ಪೊಲೀಸ್​ ವಶಕ್ಕೆ
ರಾಜಧಾನಿಯಲ್ಲಿ ಜೋಡಿ ಕೊಲೆ: ಆರೋಪಿತೆ ಪೊಲೀಸ್​ ವಶಕ್ಕೆ

By ETV Bharat Karnataka Team

Published : Apr 18, 2024, 10:40 PM IST

Updated : Apr 18, 2024, 11:08 PM IST

ಮಗಳ ಕೊಂದ ಯುವಕನನ್ನು ಸಿಮೆಂಟ್‌ ಇಟ್ಟಿಗೆಯಿಂದ ಹೊಡೆದು ಸಾಯಿಸಿದ ಮಹಿಳೆ!

ಬೆಂಗಳೂರು: ಜೆ.ಪಿ.ನಗರದ ಸಾರಕ್ಕಿ ಪಾರ್ಕ್‌ನಲ್ಲಿ ಇಂದು ಇಬ್ಬರು ಕೊಲೆಯಾಗಿದ್ದಾರೆ. ಜೆ.ಪಿ.ನಗರ ಸಮೀಪದ ಶಾಕಾಂಬರಿನಗರ ನಿವಾಸಿ ಅನುಷಾ (25) ಮತ್ತು ಗೊರಗುಂಟೆ ಪಾಳ್ಯ ನಿವಾಸಿ ಸುರೇಶ್ (45) ಕೊಲೆಯಾದವರೆಂದು ಗುರುತಿಸಲಾಗಿದೆ.

ಘಟನೆಯ ವಿವರ: ಇಂದು ಸಂಜೆ ಪರಿಚಿತ ಯುವತಿ ಅನುಷಾ ಎಂಬಾಕೆಯನ್ನು ಸುರೇಶ್ ಚಾಕುವಿನಿಂದ ಇರಿದು ಕೊಂದಿದ್ದಾನೆ. ಅನುಷಾಳ ತಾಯಿ ಗೀತಾ ಸಿಮೆಂಟ್ ಇಟ್ಟಿಗೆಯಿಂದ ಸುರೇಶ್ ತಲೆಗೆ ಹೊಡೆದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅನುಷಾ ಮತ್ತು ಸುರೇಶ್ ಕೆಲಸ ಮಾಡುವಾಗ ಪರಿಚಯವಾಗಿದ್ದು, ಕಳೆದ ಐದು ವರ್ಷದಿಂದ ಸಲುಗೆಯಿಂದ ಇದ್ದರು ಎಂದು ತಿಳಿದುಬಂದಿದೆ. ಅನುಷಾ ವೃದ್ಧರ ಆರೈಕೆ ಮಾಡುವ ಕೆಲಸ ಮಾಡಿಕೊಂಡಿದ್ದರು. ಸುರೇಶ್ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಸುರೇಶ್‌ಗೆ ಮದುವೆಯಾಗಿ ಮಕ್ಕಳಿದ್ದಾರೆ. ಅನುಷಾ ತನ್ನ ಕೈ ತಪ್ಪಿ ಹೋಗುತ್ತಾಳೆ ಎಂದು ಕೋಪಗೊಂಡಿದ್ದ ಸುರೇಶ್ ಆಕೆಗೆ ಚಾಕುವಿನಿಂದ ಇರಿದಿದ್ದಾನೆ. ಸುರೇಶ್ ಚಾಕು ಹಾಕುತ್ತಿದ್ದಾಗ ಅನುಷಾ ತಾಯಿ ಗೀತಾ ತಡೆಯಲು ಯತ್ನಿಸಿದರು. ಇದನ್ನು ಲೆಕ್ಕಿಸದೆ ಚಾಕು ಇರಿದಿದ್ದಾನೆ. ಇದರಿಂದ ಕೋಪಗೊಂಡ ಅವರು ಅಲ್ಲಿಯೇ ಇದ್ದ ಸಿಮೆಂಟ್ ಇಟ್ಟಿಗೆಯನ್ನು ಸುರೇಶ್ ತಲೆಮೇಲೆ ಹಾಕಿದ್ದರು. ಚಾಕು ಇರಿತಕ್ಕೊಳಗಾಗಿದ್ದ ಅನುಷಾ ಮತ್ತು ಗಂಭೀರವಾಗಿ ಗಾಯಗೊಂಡಿದ್ದ ಸುರೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಜೆ.ಪಿ.ನಗರ ಪೊಲೀಸರು ಪರಿಶೀಲನೆ ನಡೆಸಿ ಅನುಷಾ ತಾಯಿ ಗೀತಾರನ್ನು ವಶಕ್ಕೆ ಪಡೆದು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿಯ ಕಾಲೇಜು ಕ್ಯಾಂಪಸ್​ನಲ್ಲಿ ಯುವತಿಯ ಭೀಕರ ಕೊಲೆ; ಯುವಕನ ಬಂಧನ - Corporator Daughter Murder

Last Updated : Apr 18, 2024, 11:08 PM IST

ABOUT THE AUTHOR

...view details