ಕರ್ನಾಟಕ

karnataka

ETV Bharat / state

ಹಾವೇರಿ: ರೋಡ್​ ರೋಲರ್ ಹರಿದು ಇಬ್ಬರು ಕಾರ್ಮಿಕರು ಸಾವು - Two laborers died

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕು ಮೋಟೆಬೆನ್ನೂರು ಗ್ರಾಮದಲ್ಲಿ ರಸ್ತೆ ಕಾಮಗಾರಿ ಕೆಲಸಕ್ಕೆ ಬಂದಿದ್ದ ಇಬ್ಬರು ಕಾರ್ಮಿಕರ ಮೇಲೆ ರೋಡ್​ ರೋಲರ್​​​ ಹರಿದು ಮೃತಪಟ್ಟಿದ್ದಾರೆ.

two-laborers-died-by-road-roller-in-haveri
ರೋಡ್​ ರೋಲರ್ ಹರಿದು ಇಬ್ಬರು ಕಾರ್ಮಿಕರು ಸಾವು (Haveri)

By ETV Bharat Karnataka Team

Published : Sep 21, 2024, 8:26 PM IST

ಹಾವೇರಿ :ಊಟ ಮಾಡಿ ರಸ್ತೆಯ ಪಕ್ಕದಲ್ಲಿ ಮಲಗಿದ್ದವರ ಮೇಲೆ ರೋಡ್ ರೋಲರ್ ಹರಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕು ಮೋಟೆಬೆನ್ನೂರು ಗ್ರಾಮದಲ್ಲಿ ನಡೆದಿದೆ.

ಮೃತರನ್ನ ಸಿದ್ದು (24) ಪ್ರೀತಮ್ (25) ಎಂದು ಗುರುತಿಸಲಾಗಿದೆ. ಮೋಟೆಬೆನ್ನೂರಿನಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಕೆಲಸಕ್ಕೆ ಈ ಕಾರ್ಮಿಕರು ಆಗಮಿಸಿದ್ದರು.

ರಸ್ತೆ ಕೆಲಸಕ್ಕೆ ಬಂದಿದ್ದ ಕಾರ್ಮಿಕರು ಮಧ್ಯಾಹ್ನದ ವೇಳೆ ಊಟ ಮಾಡಿ ರೋಲರ್ ಪಕ್ಕದಲ್ಲಿ ಮಲಗಿದ್ದರು.
ಈ ಸಂದರ್ಭದಲ್ಲಿ ರೋಲರ್ ಹರಿದು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಬ್ಯಾಡಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅವಘಡ ಸಂಭವಿಸಿದೆ.

ಇದನ್ನೂ ಓದಿ :ಸುಳ್ಯ: ಗುಡ್ಡ ಕುಸಿದು ಗದಗ ಮೂಲದ ಮೂವರು ಕಾರ್ಮಿಕರು ಸಾವು

ABOUT THE AUTHOR

...view details