ಕರ್ನಾಟಕ

karnataka

ETV Bharat / state

ಚಾಮರಾಜನಗರ: ಜಡಿ ಮಳೆಗೆ ಎರಡು ಮನೆಗಳ ಗೋಡೆ ಕುಸಿತ; ಜನಜೀವನ ಅಸ್ತವ್ಯಸ್ತ

ಚಾಮರಾಜನಗರ ಜಿಲ್ಲೆಯ ಹಲವೆಡೆ ನಿರಂತರ ಮಳೆಯಾಗುತ್ತಿದ್ದು, ದೈನಂದಿನ ಜನಜೀವನ ಅಸ್ತವ್ಯಸ್ತವಾಗಿದೆ.

By ETV Bharat Karnataka Team

Published : 5 hours ago

Updated : 4 hours ago

two-house-walls-collapsed
ಮಳೆಗೆ ಮನೆಗಳ ಗೋಡೆ ಕುಸಿತ (ETV Bharat)

ಚಾಮರಾಜನಗರ: ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ತಾಲೂಕಿನ ತೆಳ್ಳನೂರು, ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮಗಳಲ್ಲಿ ಮನೆಗಳ ಗೋಡೆ ಕುಸಿದಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ. ತೆಳ್ಳನೂರು ಗ್ರಾಮದ ಸುಬ್ಬಮ್ಮ, ಬೇಗೂರಿನ ರತ್ಮಮ್ಮ ಎಂಬವರ ಮನೆ ಗೋಡೆ ಮಳೆಗೆ ನೆಲಕ್ಕುರುಳಿವೆ.

2ನೇ ಸಲ ಕೋಡಿ ಬಿದ್ದ ಕಮರಹಳ್ಳಿ ಕೆರೆ: ಮುಂಗಾರು ಆರ್ಭಟಕ್ಕೆ ಕೆಲ ತಿಂಗಳ‌ ಹಿಂದೆ ಕೋಡಿ ಬಿದ್ದಿದ್ದ ಕಮರಹಳ್ಳಿ‌ ಕೆರೆ, ಈಗ ಮತ್ತೊಮ್ಮೆ ಕೋಡಿ ಬಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ‌.

ಜಡಿ ಮಳೆಗೆ ಎರಡು ಮನೆಗಳ ಗೋಡೆ ಕುಸಿತ (ETV Bharat)

ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಕಮರಹಳ್ಳಿ ಕೆರೆ ನಿರಂತರ ಮಳೆಗೆ ವರ್ಷಗಳ ಬಳಿಕ ಕಳೆದ ತಿಂಗಳು ಕೋಡಿ ಬಿದ್ದಿತ್ತು. ಕೆರೆ ತುಂಬಿ ಕೋಡಿ ಬಿದ್ದಿರುವ ಕಾರಣ ಸುತ್ತಮುತ್ತಲ ಪಂಪ್‌ಸೆಟ್‍ಗಳಲ್ಲಿ ನೀರು ಅಧಿಕವಾಗಿ ಬರತೊಡಗಿದೆ. ಇದು ರೈತರ ವ್ಯವಸಾಯಕ್ಕೆ ಪೂರಕವಾಗಿದೆ.

ಕುಸಿದು ಬಿದ್ದ ಮನೆಗೋಡೆ (ETV Bharat)

ಇದನ್ನೂ ಓದಿ:ಮೈಸೂರು : ಮಳೆಗೆ ಮನೆ ಗೋಡೆ ಕುಸಿತ, ಕೂದಲೆಳೆ ಅಂತರದಲ್ಲಿ ಉಳಿಯಿತು 7 ಜನರ ಜೀವ

Last Updated : 4 hours ago

ABOUT THE AUTHOR

...view details