ಚಾಮರಾಜನಗರ : ವಾಹನಗಳ ಸಂಚಾರವಿದ್ದರೂ ರಸ್ತೆಬದಿಯಲ್ಲಿ ಜೋಡಿ ಜಿಂಕೆಗಳು ನಾನಾ - ನೀನಾ ಎಂಬಂತೆ ಕುಸ್ತಿ ಮಾಡಿದ ಪ್ರಸಂಗ ಮೈಸೂರು - ಊಟಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಬಂಡೀಪುರದ ರಸ್ತೆಯಲ್ಲಿ ನಡೆದಿದೆ.
ಹತ್ತಾರು ಜಿಂಕೆಗಳು ಮೇಯುತ್ತಿದ್ದರೆ, ಎರಡು ಜಿಂಕೆಗಳು ಮಾತ್ರ ನಾನಾ-ನೀನಾ ಎಂದು ಕಾಳಗಕ್ಕೆ ಇಳಿದಿದ್ದವು. ಇದನ್ನು, ರಸ್ತೆಯಲ್ಲಿ ಸಂಚರಿಸುತ್ತಿದ್ದವರು ಸೆರೆಹಿಡಿದಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಿಕ, ವಾಹನಗಳ ಹಾರ್ನ್ ಸದ್ದಿನಿಂದ ಜಿಂಕೆ ಹಿಂಡು ಚದುರಿದಾಗ ಕಾಳಗಕ್ಕೆ ಇಳಿದಿದ್ದ ಜಿಂಕೆಗಳು ಕಾಡಿಗೆ ಕಾಲ್ಕಿತ್ತಿವೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗುವಾಗ ಪ್ರವಾಸಿಗರು, ಪ್ರಯಾಣಿಕರು ನೂರಾರು ಜಿಂಕೆಗಳನ್ನು ನಿತ್ಯ ಕಣ್ತುಂಬಿಕೊಳ್ಳುತ್ತಾರೆ. ಆದರೆ, ಜಿಂಕೆ ಕಾಳಗ ಕಾಣುವುದು ಅಪರೂಪ.
ನಾಯಿಗಳ ದಾಳಿಗೆ ಹೆದರಿ ಸೇತುವೆ ಕೆಳಗೆ ಅವಿತ ಕತ್ತೆ ಕಿರುಬ :ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಪರೂಪವಾಗಿ ಕಾಣಸಿಗುವ ಕತ್ತೆಕಿರುಬ ನಾಯಿಗಳ ದಾಳಿಯಿಂದ ಬಚಾವಾದ ಘಟನೆ ಗುಂಡ್ಲುಪೇಟೆ ತಾಲೂಕಿನ ಚೆನ್ನಿಕಟ್ಟೆ ಹಾಡಿಯಲ್ಲಿ ನಡೆದಿದೆ.