ವಿಜಯನಗರ:ಎರಡು ದಿನಗಳ ಕಾಲ ಹಂಪಿ ಪ್ರವಾಸ ಕೈಗೊಂಡಿರುವ ಟರ್ಕಿ ದೇಶದ ರಾಯಭಾರಿ ಹೆಚ್. ಇ. ಫಿರಾಟ್ ಸುನೆಲ್ ಮತ್ತು ಹೈದರಾಬಾದ್‌ನ ಕೌನ್ಸೆಲ್ ಜನರಲ್ ಓರ್ಹನ್ ಯಲ್ಮನ್ ಓಕನ್ ಅವರು ಸುರಿಯುತ್ತಿರುವ ಮಳೆಯಲ್ಲೇ ಸ್ಮಾರಕಗಳನ್ನು ವೀಕ್ಷಣೆ ಮಾಡಿ ಕಣ್ತುಂಬಿಕೊಂಡರು.
ಮಂಗಳವಾರ ಬೆಳಗ್ಗೆ ವಿರೂಪಾಕ್ಷೇಶ್ವರ ದೇಗುಲದಲ್ಲಿ ಲಕ್ಷ್ಮಿ ಆನೆಯಿಂದ ಹೂವಿನ ಹಾರ ಹಾಕಿಸಿ ಸ್ವಾಗತ ಕೋರಲಾಯಿತು. ಬಳಿಕ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದರು. ಆ ನಂತರ ಕೆಲ ಹೊತ್ತು ಚಕ್ರತೀರ್ಥದಲ್ಲಿ ದೋಣಿ ವಿಹಾರ ಮಾಡಿದರು. ಅಷ್ಟೊತ್ತಿಗೆ ಜಿಟಿ ಜಿಟಿ ಮಳೆ ಆರಂಭವಾಯಿತು. ನಂತರ ಕಮಲ್ ಮಹಲ್, ರಾಣಿ ಸ್ನಾನಗೃಹ, ಮಹಾನವಮಿ ದಿಬ್ಬ ಸೇರಿದಂತೆ ವಿವಿಧ ಸ್ಮಾರಕಗಳನ್ನು ಮಳೆಯಲ್ಲೇ ವೀಕ್ಷಿಸಿದರು.