ಕರ್ನಾಟಕ

karnataka

ದಾವಣಗೆರೆ: ನೆಲಕ್ಕುರಳಿದ ಟ್ಯಾಂಕರ್; ಸ್ಪಿರಿಟ್​ ಸೋರಿಕೆ ಆತಂಕದಿಂದ ವಾಹನ ಸಂಚಾರ ಸ್ಥಗಿತ - Spirit Tanker Overturned

By ETV Bharat Karnataka Team

Published : Aug 10, 2024, 4:08 PM IST

Updated : Aug 10, 2024, 5:35 PM IST

ಡಿವೈಡರ್​ಗೆ ಡಿಕ್ಕಿ ಹೊಡೆದು ಸರ್ವಿಸ್​ ರಸ್ತೆಗೆ ಬಿದ್ದ ಟ್ಯಾಂಕರ್​ನಿಂದ ಸ್ಪಿರಿಟ್​ ಸೋರಿಕೆಯ ಆತಂಕ ಎದುರಾಗಿದೆ. ಅಗ್ನಿಶಾಮಕ ದಳ ಮತ್ತು ಪೊಲೀಸ್​ ಇಲಾಖೆ ಪರಿಸ್ಥಿತಿ ತಿಳಿಗೊಳಿಸಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

TRAFFIC STOP  TANKER OVERTURNED  SPIRIT LEAKAGE  DAVANAGERE
ನೆಲಕ್ಕುರಳಿದ ಟ್ಯಾಂಕರ್​, ಸ್ಪಿರಿಟ್​ ಸೋರಿಕೆ ಆತಂಕ (ETV Bharat)

ನೆಲಕ್ಕುರಳಿದ ಟ್ಯಾಂಕರ್​, ಸ್ಪಿರಿಟ್​ ಸೋರಿಕೆ ಆತಂಕ (ETV Bharat)

ದಾವಣಗೆರೆ:ಸ್ಪಿರಿಟ್ ತುಂಬಿದ ಟ್ಯಾಂಕರ್ ಪಲ್ಟಿಯಾಗಿ ಹೆದ್ದಾರಿ ಅಂಡರ್ ಪಾಸ್ ಸೇತುವೆಯಿಂದ ಕೆಳಗೆ ಬಿದ್ದು ಬಹುದೊಡ್ಡ ಅನಾಹುತ ತಪ್ಪಿದೆ. ಈ ಘಟನೆ ದಾವಣಗೆರೆ ತಾಲೂಕಿನ ಮಲ್ಲಶೆಟ್ಟಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ನಡೆದಿದ್ದು, ಸ್ಪಿರಿಟ್ ಸೋರಿಕೆ ಆಗಿದ್ದರಿಂದ ಹೆದ್ದಾರಿಯಲ್ಲಿ ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು.‌ ಘಟನಾ ಸ್ಥಳಕ್ಕೆ ಅಗ್ನಿ ಶಾಮಕ‌ ದಳದ ಸಿಬ್ಬಂದಿ ಹಾಗೂ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.

ಬೆಂಗಳೂರು ಕಡೆಯಿಂದ ಪುಣೆ ಕಡೆಗೆ ಹೋಗುತ್ತಿದ್ದ ಸ್ಪಿರಿಟ್ ತುಂಬಿದ ಟ್ಯಾಂಕರ್ ಮೊದಲು ಹೆದ್ದಾರಿಯ ಡಿವೈಡರ್​ಗೆ ಗುದ್ದಿದೆ. ಬಳಿಕ ಟ್ಯಾಂಕರ್ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಮೇಲಿಂದ ಕೆಳಗೆ ಬಿದ್ದ ಹಿನ್ನೆಲೆ ಸ್ಪಿರಿಟ್ ಸೋರಿಕೆ ಆಗಿದ್ದು, ಕೆಲ ಕಾಲ ಹೆದ್ದಾರಿ ಸಂಚಾರ ಸ್ಥಗಿತಗೊಳಿಸಲಾಗಿತ್ತು.‌

ಈ ಅಪಘಾತದಲ್ಲಿ ಚಾಲಕ ಹಾಗೂ ಕ್ಲಿನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟ್ಯಾಂಕರ್​ನಿಂದ ಸ್ಪಿರಿಟ್ ಸೋರಿಕೆ ಆಗುತ್ತಿದ್ದಂತೆ ಬೆಂಕಿ ಹೊತ್ತಿಕೊಳ್ಳುವ ಆತಂಕ ಜನರಲ್ಲಿ ಇತ್ತು‌. ಇದನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ದೂರ ಮಾಡಿದ್ದಾರೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಓದಿ:ರೇಣುಕಾಸ್ವಾಮಿ ಕೊಲೆ ಪ್ರಕರಣ: ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ ಹಾಸ್ಯ ನಟ ಚಿಕ್ಕಣ್ಣ - Renuka Swamy Murder Case

Last Updated : Aug 10, 2024, 5:35 PM IST

ABOUT THE AUTHOR

...view details