ETV Bharat / entertainment

ಸುತ್ತಲೂ ಸಾವಿರಾರು ಹಾವುಗಳು, ನಡುವೆ ಆರ್ಮುಗ ರವಿಶಂಕರ್ ಪುತ್ರ: 'ಸುಬ್ರಹ್ಮಣ್ಯ' ನಟನ ಭರ್ಜರಿ ಎಂಟ್ರಿ - Subrahmanyaa Glimpse - SUBRAHMANYAA GLIMPSE

ಮಾಲಾಶ್ರೀ ಅಭಿನಯದ 'ದುರ್ಗಿ' ಸಿನಿಮಾಗೆ ಆ್ಯಕ್ಷನ್​ ಕಟ್​​ ಹೇಳಿದ್ದ ರವಿಶಂಕರ್​ ಅವರೀಗ ಮಗನ ಸಿನಿಮಾಗಾಗಿ ಮತ್ತೆ ನಿರ್ದೇಶನಕ್ಕಿಳಿದಿದ್ದಾರೆ. ಅದ್ವೈ ಅಭಿನಯದ ಚೊಚ್ಚಲ ಚಿತ್ರ 'ಸುಬ್ರಹ್ಮಣ್ಯ'ದ ಗ್ಲಿಂಪ್ಸ್ ಅನಾವರಣಗೊಂಡಿದ್ದು, ಸಿನಿಪ್ರಿಯರು ಸಿನಿಮಾ ನೋಡುವ ಕುತೂಹಲ ವ್ಯಕ್ತಪಡಿಸಿದ್ದಾರೆ.

Subrahmanyaa Glimpse release
ಸುಬ್ರಹ್ಮಣ್ಯ ಗ್ಲಿಂಪ್ಸ್ ರಿಲೀಸ್ (Film poster)
author img

By ETV Bharat Karnataka Team

Published : Sep 17, 2024, 2:00 PM IST

ಆರ್ಮುಗ ರವಿಶಂಕರ್ ಅವರು 'ಸುಬ್ರಹ್ಮಣ್ಯ' ಶೀರ್ಷಿಕೆ ಪ್ರೊಜೆಕ್ಟ್​​​ ಮೂಲಕ ಮಗ ಅದ್ವೈ ಅವರನ್ನು ಸಿನಿಪ್ರೇಮಿಗಳಿಗೆ ಪರಿಚಯಿಸಲು ಸಜ್ಜಾಗಿದ್ದಾರೆ. ಈ 'ಸುಬ್ರಹ್ಮಣ್ಯ' ಚಿತ್ರದ ಪ್ರೀ-ಲುಕ್ ಈಗಾಗಲೇ ಗಮನ ಸೆಳೆದಿದ್ದು, ಇದೀಗ ಚಿತ್ರತಂಡ ಫಸ್ಟ್ ಗ್ಲಿಂಪ್ಸ್ ಅನಾವರಣಗೊಳಿಸಿದೆ. ಯೂಟ್ಯೂಬ್​​ನಲ್ಲಿ ಬಿಡುಗಡೆ ಮಾಡೋ ಮುನ್ನ ಇತ್ತೀಚೆಗಷ್ಟೇ ದುಬೈನಲ್ಲಿ ನಡೆದ ಸೌತ್ ಇಂಡಿಯನ್ ಇಂಟರ್​ನ್ಯಾಷನಲ್ ಮೂವೀ ಅವಾರ್ಡ್ಸ್ (SIIMA) ನಲ್ಲಿ 'ಸುಬ್ರಹ್ಮಣ್ಯ'ನ ಮೊದಲ ತುಣುಕನ್ನು ರಿಲೀಸ್ ಮಾಡಲಾಗಿತ್ತು.

ಇದೀಗ ಎಸ್.ಜಿ ಮೂವೀಸ್ ಯೂಟ್ಯೂಬ್​​ನಲ್ಲಿ 'ಸುಬ್ರಹ್ಮಣ್ಯ' ಗ್ಲಿಂಪ್ಸ್ ಬಿಡುಗಡೆ ಆಗಿದೆ. 3 ನಿಮಿಷ 14 ಸೆಕೆಂಡ್ ಇರುವ ಚಿತ್ರದ ಝಲಕ್ ಮೈನವಿರೇಳಿಸುವಂತಿದೆ. ಇದು ಹೀರೋನ ಇಂಟ್ರುಡಕ್ಷನ್​​​ ವಿಶುವಲ್​ ಅಗಿದ್ದು, ಸಿನಿಪ್ರಿಯರ ಕುತೂಹಲ ಹೆಚ್ಚಾಗಿದೆ. ವಿಷಪೂರಿತ ಹಾವುಗಳಿಂದ ತುಂಬಿದ ಬಾವಿಗೆ ನಾಯಕ ನಟ ಅದ್ವೈ ಹಗ್ಗದ ಮೂಲಕ ಎಂಟ್ರಿ ಕೊಡುತ್ತಾರೆ. ಆ ಬಾವಿಯಲ್ಲಿರುವ ಪುರಾತನ ಪುಸ್ತಕವನ್ನು ಹೇಗೋ ಎತ್ತಿಕೊಂಡು ಹೊರ ಬರುತ್ತಾರೆ. ಆದ್ರೆ ಅಲ್ಲಿದ್ದ ಸಾವಿರಾರು ಹಾವುಗಳು ಅವರನ್ನು ಬೆನ್ನಟ್ಟಿದ್ದು, ಅವರು ಓಡಲು ಪ್ರಾರಂಭಿಸುತ್ತಾರೆ. ಅದ್ವೈ ಸ್ಟೈಲಿಶ್​ ಲುಕ್, ಡೇರಿಂಗ್​​​ ನೋಡುಗರಿಗೆ ಹಿಡಿಸಿದೆ. ಕೊನೆಯ ಕೆಲ ಸೆಕೆಂಡುಗಳನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ. ವಿಷುವಲ್ಸ್​, ಗ್ರಾಫಿಕ್ಸ್ ವರ್ಕ್ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ.

'ಸುಬ್ರಹ್ಮಣ್ಯ' ಗ್ಲಿಂಪ್ಸ್​ಗಾಗಿ 60ಕ್ಕೂ ಹೆಚ್ಚು ವಿಎಫ್​​​ಎಕ್ಸ್ ತಂತ್ರಜ್ಞರು ಕಳೆದ ನಾಲ್ಕು ತಿಂಗಳಿನಿಂದ ದುಡಿದಿದ್ದಾರೆ. 'ಸುಬ್ರಹ್ಮಣ್ಯ'ದ ಕ್ರಿಯೇಟಿವ್ ನಿರ್ಮಾಪಕ ಮತ್ತು ವಿಎಫ್‌ಎಕ್ಸ್ ಮೇಲ್ವಿಚಾರಕ ನಿಖಿಲ್ ಕೋಡೂರು ನೇತೃತ್ವದಲ್ಲಿ ಮುಂಬೈ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನ ಪ್ರಸಿದ್ಧ ಸ್ಟುಡಿಯೋಗಳಲ್ಲಿ ವಿಎಫ್​ಎಕ್ಸ್​​ ಕೆಲಸ ನಡೆದಿದೆ. 'ಸುಬ್ರಹ್ಮಣ್ಯ' ಸೋಶಿಯೋ-ಫ್ಯಾಂಟಸಿ ಶೈಲಿಯ ಸಿನಿಮಾ. ಜೊತೆಗೆ ಅಡ್ವೆಂಚರ್ ಎಲಿಮೆಂಟ್ಸ್‌ ಕೂಡ ಈ ಸಿನಿಮಾದಲ್ಲಿದೆ.

ಇದನ್ನೂ ಓದಿ: ಆರ್ಮುಗ ರವಿಶಂಕರ್ ಪುತ್ರನ ಚೊಚ್ಚಲ ಚಿತ್ರಕ್ಕೆ ಸಿಕ್ತು ಹ್ಯಾಟ್ರಿಕ್ ಹೀರೋನ ಸಾಥ್: ಮಗನ ಸಿನಿಮಾಗೆ ಅಪ್ಪ ಡೈರೆಕ್ಷನ್​ - Subrahmanya first look

ಎಸ್.ಜಿ ಮೂವೀ ಮೇಕರ್ಸ್ ಸಂಸ್ಥೆಯ ಮೂಲಕ ತಿರುಮಲ ರೆಡ್ಡಿ ಹಾಗೂ ಅನಿಲ್ ಕಡಿಯಾಲ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪ್ರವೀಣಾ ಕಡಿಯಾಲ ಮತ್ತು ರಮಾ ಲಕ್ಷ್ಮೀ ಪ್ರಸ್ತುತಪಡಿಸುತ್ತಿದ್ದಾರೆ. 'ಕೆಜಿಎಫ್' ಹಾಗೂ 'ಸಲಾರ್' ಸಿನಿಮಾಗೆ ಸಂಗೀತ ನೀಡಿರುವ ರವಿ ಬಸ್ರೂರು ಈ ಚಿತ್ರಕ್ಕೂ ಟ್ಯೂನ್ ಹಾಕುತ್ತಿದ್ದಾರೆ. ವಿಘ್ನೇಶ್ ರಾಜ್ ಕ್ಯಾಮರಾ ವರ್ಕ್ ಇದ್ದರೆ, ವಿಜಯ್ ಎಂ.ಕುಮಾರ್ ಎಡಿಟಿಂಗ್ ಮಾಡುತ್ತಿದ್ದಾರೆ. ಮಾಲಾಶ್ರೀ ಅಭಿನಯದ 'ದುರ್ಗಿ' ಸಿನಿಮಾಗೆ ಆ್ಯಕ್ಷನ್​ ಕಟ್​​ ಹೇಳಿದ್ದ ರವಿಶಂಕರ್​ ಅವರೀಗ ಮಗನ ಸಿನಿಮಾಗಾಗಿ ಮತ್ತೆ ನಿರ್ದೇಶನಕ್ಕಿಳಿದಿದ್ದಾರೆ. ಈ ಮೂಲಕ ಬರೋಬ್ಬರಿ 2 ದಶಕದ ಬಳಿಕ ಅವರು ಡೈರೆಕ್ಟರ್​ ಕ್ಯಾಪ್​ ಧರಿಸಿದ್ದಾರೆ. ಮಗನಿಗಾಗಿ ಡೈರೆಕ್ಟರ್​ ಆಸನ ಅಲಂಕರಿಸಿರುವ ರವಿಶಂಕರ್ ಚಿತ್ರರಂಗಕ್ಕೆ ಹೀರೋ ಮತ್ತು ಪ್ಯಾನ್ ಇಂಡಿಯಾ ಸಿನಿಮಾ ಕೊಡುತ್ತಿದ್ದಾರೆ.

ಇದನ್ನೂ ಓದಿ: ಶಿವಣ್ಣನಿಗೆ ಎದ್ದು ನಿಂತು ಚಪ್ಪಾಳೆ ಹೊಡೆದ ದಕ್ಷಿಣ ಚಿತ್ರರಂಗದ ಗಣ್ಯರು: ವಿಡಿಯೋ ನೋಡಿ - Standing Ovation to Shivarajkumar

ಇತ್ತೀಚೆಗಷ್ಟೇ ಗಣೇಶ ಚತುರ್ಥಿಯಂದು ಕರುನಾಡ ಚಕ್ರವರ್ತಿ ಶಿವರಾಜ್​​ಕುಮಾರ್ 'ಸುಬ್ರಹ್ಮಣ್ಯ' ಫಸ್ಟ್ ಲುಕ್ ರಿವೀಲ್ ಮಾಡಿದ್ದರು. ಈ ಮೂಲಕ ರವಿಶಂಕರ್​ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾಗೆ ಬೆಂಬಲ ಸೂಚಿಸಿ ಇಡೀ ತಂಡಕ್ಕೆ ಶುಭ ಹಾರೈಸಿದ್ದರು. ಅಪ್ಪ ಮಗ ಶಿವಣ್ಣನ ಮನೆಗೆ ಭೇಟಿ ಕೊಟ್ಟಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.