ಕರ್ನಾಟಕ

karnataka

ETV Bharat / state

ಸುದೀರ್ಘ ರಜೆ ಹಿನ್ನೆಲೆ ಸಂಚಾರ ದಟ್ಟಣೆ ಸಾಧ್ಯತೆ; ಉದ್ಯೋಗಿಗಳಿಗೆ WFH ನೀಡುವಂತೆ ಟ್ರಾಫಿಕ್ ಜಂಟಿ ಆಯುಕ್ತರ ಪತ್ರ - Traffic Joint Commissioner Letter - TRAFFIC JOINT COMMISSIONER LETTER

ಈ ವಾರ ಸುದೀರ್ಘ ರಜೆ ಇರುವುದರಿಂದ ಸಂಚಾರ ದಟ್ಟಣೆ ಸಾಧ್ಯತೆ ಹಿನ್ನೆಲೆಯಲ್ಲಿ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ನೀಡುವಂತೆ ಟ್ರಾಫಿಕ್ ಜಂಟಿ ಆಯುಕ್ತರು ಪತ್ರದ ಮೂಲಕ ಮನವಿ ಮಾಡಿದ್ದಾರೆ.

traffic
ಬೆಂಗಳೂರು (IANS)

By ETV Bharat Karnataka Team

Published : Aug 14, 2024, 9:27 AM IST

ಬೆಂಗಳೂರು: ಮುಂಬರುವ ದೀರ್ಘ ವಾರಾಂತ್ಯ ಹಾಗೂ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಇಂದು (ಆಗಸ್ಟ್ 14) ಭಾರೀ ಸಂಚಾರ ದಟ್ಟಣೆಯಾಗುವ ಸಾಧ್ಯತೆಯಿರುವುದರಿಂದ, ತಮ್ಮ ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ (WFH) ನೀಡುವಂತೆ ಕೋರಿ ಔಟರ್ ರಿಂಗ್ ರೋಡ್ ಕಂಪನಿಗಳ ಒಕ್ಕೂಟಕ್ಕೆ ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್.ಅನುಚೇತ್ ಪತ್ರ ಬರೆದಿದ್ದಾರೆ.

ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ, 16ರಂದು ವರಮಹಾಲಕ್ಷ್ಮಿ ಹಬ್ಬ, 17 ಹಾಗೂ 18ರಂದು ವಾರಾಂತ್ಯ ಸೇರಿದಂತೆ ಸುದೀರ್ಘ ರಜೆ ಇರುವುದರಿಂದ ತಮ್ಮ ತಮ್ಮ ಊರುಗಳಿಗೆ ಹೋಗುವವರು ಇಂದಿನಿಂದಲೇ ಪ್ರಯಾಣ ಆರಂಭಿಸುವ ಸಾಧ್ಯತೆ ಇದೆ. ಆದ್ದರಿಂದ ವರ್ಕ್ ಫ್ರಮ್ ಹೋಮ್ ನೀಡಿದರೆ, ರಸ್ತೆಯಲ್ಲಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡುವುದಲ್ಲದೆ, ಸುಗಮ ಪ್ರಯಾಣಕ್ಕೆ ಅನುಕೂಲವಾಗಲಿದೆ ಎಂದು ಆಯುಕ್ತರು ಪತ್ರದಲ್ಲಿ ತಿಳಿಸಿದ್ದಾರೆ.

ಜಂಟಿ ಆಯುಕ್ತರ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಬಹುತೇಕ ಕಂಪನಿಗಳು ಇಂದು ತಮ್ಮ ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ (WFH) ಮಾಡಲು ಅವಕಾಶ ನೀಡಿವೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಭೋವಿ ಅಭಿವೃದ್ಧಿ ನಿಗಮ ಅಕ್ರಮ ಪ್ರಕರಣ; ತಡರಾತ್ರಿ ಸಿಐಡಿ ಅಧಿಕಾರಿಗಳಿಂದ ಶೋಧ - CID Raid

ABOUT THE AUTHOR

...view details