ಕರ್ನಾಟಕ

karnataka

ETV Bharat / state

ಅರಮನೆಗೆ ಆಗಮಿಸಿದ ದಸರಾ ಗಜಪಡೆಯ 2ನೇ ತಂಡಕ್ಕೆ ಸರಳ ಸಾಂಪ್ರದಾಯಿಕ ಸ್ವಾಗತ - Traditional welcome to elephant - TRADITIONAL WELCOME TO ELEPHANT

ಅರಮನೆಗೆ ಆಗಮಿಸಿದ ದಸರಾ ಗಜಪಡೆಯ 2ನೇ ತಂಡಕ್ಕೆ ಅರಣ್ಯಾಧಿಕಾರಿಗಳು ಹಾಗೂ ಅರಮನೆ ಆಡಳಿತ ಮಂಡಳಿಯ ಅಧಿಕಾರಿಗಳು ಅರಮನೆ ಮುಂಭಾಗದ ಜಯ ಮಾರ್ತಾಂಡ ದ್ವಾರದಲ್ಲಿ ಸರಳ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು.

traditional-welcome-to-the-2nd-team-of-dasara-gajapade-on-arrival-at-the-palace
ದಸರಾ ಗಜಪಡೆಯ 2ನೇ ತಂಡಕ್ಕೆ ಸರಳ ಸಾಂಪ್ರದಾಯಿಕ ಸ್ವಾಗತ (ETV Bharat)

By ETV Bharat Karnataka Team

Published : Sep 5, 2024, 10:50 PM IST

ಅರಮನೆಗೆ ಆಗಮಿಸಿದ ದಸರಾ ಗಜಪಡೆಯ 2ನೇ ತಂಡಕ್ಕೆ ಸರಳ ಸಾಂಪ್ರದಾಯಿಕ ಸ್ವಾಗತ (ETV Bharat)

ಮೈಸೂರು : ನಾಡಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ದಸರಾ ಗಜಪಡೆಯ 2ನೇ ತಂಡದ ಐದು ಆನೆಗಳು ಅರಮನೆಗೆ ಪ್ರವೇಶ ಮಾಡಿದ್ದು, ಈ ಆನೆಗಳನ್ನ ಸಾಂಪ್ರದಾಯಿಕವಾಗಿ ಸರಳ ರೀತಿ ಸ್ವಾಗತ ಮಾಡಲಾಯಿತು.

ದಸರಾ ಗಜಪಡೆಯ 2ನೇ ತಂಡಕ್ಕೆ ಸರಳ ಸಾಂಪ್ರದಾಯಿಕ ಸ್ವಾಗತ (ETV Bharat)

ನಾಡಹಬ್ಬ ದಸರಾ ಮಹೋತ್ಸವದ ಸಿದ್ಧತೆಗಳು ಈಗಾಗಲೇ ಆರಂಭವಾಗಿದ್ದು, ಅಭಿಮನ್ಯು ನೇತೃತ್ವದ ಮೊದಲ ಗಜಪಡೆಯ 9 ಆನೆಗಳು, ಆಗಸ್ಟ್‌ 21 ರಂದು ಗಜಪಯಣದ ಮೂಲಕ ಈಗಾಗಲೇ ಆಗಮಿಸಿ ತಾಲೀಮಿನಲ್ಲಿ ನಿರತವಾಗಿವೆ. ಈ ನಡುವೆ ದಸರಾ ಗಜಪಡೆಯ 2ನೇ ತಂಡದ ಐದು ಆನೆಗಳು ಇಂದು ವಿವಿಧ ಶಿಬಿರಗಳಿಂದ ವಿಶೇಷ ಲಾರಿಗಳ ಮೂಲಕ ಅರಮನೆ ಆವರಣಕ್ಕೆ ಆಗಮಿಸಿದ್ದು, ಈ ಆನೆಗಳನ್ನ ಅರಣ್ಯಾಧಿಕಾರಿಗಳು ಹಾಗೂ ಅರಮನೆ ಆಡಳಿತ ಮಂಡಳಿಯ ಅಧಿಕಾರಿಗಳು ಅರಮನೆ ಮುಂಭಾಗದ ಜಯ ಮಾರ್ತಾಂಡ ದ್ವಾರದಲ್ಲಿ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು.

ದಸರಾ ಗಜಪಡೆಯ 2ನೇ ತಂಡಕ್ಕೆ ಸಾಂಪ್ರದಾಯಿಕ ಸ್ವಾಗತ (ETV Bharat)

ಅರಮನೆಗೆ ಆಗಮಿಸಿದ 2ನೇ ತಂಡದ ಐದು ಆನೆಗಳ ವಿವರ :

ದೊಡ್ಡ ಹರವೆ ಲಕ್ಷ್ಮಿ ಆನೆ : ದೊಡ್ಡ ಹರವೆ ಆನೆ ಶಿಬಿರದಿಂದ ಈ ಬಾರಿ ದಸರಾಗೆ ಲಕ್ಷ್ಮಿ ಆಗಮಿಸಿದ್ದು, ಕಳೆದ ಎರಡು ವರ್ಷಗಳಿಂದ ದಸರಾದಲ್ಲಿ ಭಾಗವಹಿಸುತ್ತಿರುವ ಹೆಣ್ಣು ಆನೆ (53) ಸೌಮ್ಯ ಸ್ವಭಾವದ ಆನೆಯಾಗಿದೆ.

ಹಿರಣ್ಯ : ರಾಮಪುರ ಆನೆ ಶಿಬಿರದಿಂದ ಆಗಮಿಸಿರುವ ಹಿರಣ್ಯ (47) ಎಂಬ ಹೆಣ್ಣು ಆನೆ ಕಳೆದ ಬಾರಿಯಿಂದಲೇ ದಸರಾಕ್ಕೆ ಆಗಮಿಸುತ್ತಿದ್ದು , ಈ ವರ್ಷ ಇದಕ್ಕೆ ಎರಡನೇ ದಸರಾ ಆಗಿದೆ.

ಪ್ರಶಾಂತ : ದುಬಾರೆ ಆನೆ ಶಿಬಿರದಿಂದ ಆಗಮಿಸಿರುವ ಗಂಡು ಆನೆಯೇ ಈ ಪ್ರಶಾಂತ (51). ಕಳೆದ 14 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದು, ಈ ಆನೆ ಹುಲಿ ಹಾಗೂ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾದ ಅನುಭವ ಹೊಂದಿದೆ.

ಸುಗ್ರೀವಾ :ದುಬಾರೆ ಆನೆ ಶಿಬಿರದಿಂದ ಆಗಮಿಸಿರುವ ಗಂಡು ಆನೆ ಸುಗ್ರೀವ (42) ಕಳೆದ 2 ವರ್ಷಗಳಿಂದ ದಸರಾ ಮಹೋತ್ಸದಲ್ಲಿ ಭಾಗವಹಿಸುತ್ತಿದ್ದು, ಇದು ಮೂರನೇ ದಸರಾವಾಗಿದೆ.

ಮಹೇಂದ್ರ : ಮತ್ತಿಗೋಡು ಆನೆ ಶಿಬಿರದಿಂದ ಆಗಮಿಸಿರುವ ಮಹೇಂದ್ರ ಗಂಡು ಆನೆ, ಕಳೆದ ಎರಡು ವರ್ಷಗಳಿಂದ ಶ್ರೀರಂಗಪಟ್ಟಣ ದಸರಾದಲ್ಲಿ ಭಾಗವಹಿಸಿದ್ದು, ಈ ಬಾರಿಯೂ ಸಹ ದಸರಾ ಮಹೋತ್ಸವದಲ್ಲಿ ಭಾಗವಹಿಸಲಿದೆ.

ಡಿಸಿಎಫ್‌ ಪ್ರಭುಗೌಡ ಹೇಳಿದ್ದೇನು ?: ಎರಡನೇ ಹಂತದ ಐದು ಆನೆಗಳು ಅರಮನೆಗೆ ಆಗಮಿಸಿದ್ದು, ಅವುಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತ ಮಾಡಲಾಗಿದೆ. ಮೊದಲ ಹಂತದ 9 ಆನೆಗಳು ಆರೋಗ್ಯವಾಗಿದ್ದು, ತಾಲೀಮಿನಲ್ಲಿ ಪ್ರತಿನಿತ್ಯ ಭಾಗವಹಿಸುತ್ತವೆ. ಇನ್ನು ಎರಡನೇ ಹಂತದಲ್ಲಿ ಐದು ಆನೆಗಳಾದ ಮಹೇಂದ್ರ, ಸುಗ್ರೀವ, ಪ್ರಶಾಂತ್‌, ದೊಡ್ಡ ಹರವೆಯ ಲಕ್ಷ್ಮಿ ಹಾಗೂ ಹಿರಣ್ಯ ಆನೆಗಳು ಆಗಮಿಸಿದ್ದು, ಶುಕ್ರವಾರ ಬೆಳಗ್ಗೆ ಈ ಐದು ಆನೆಗಳ ತೂಕ ಪರೀಕ್ಷೆಯ ನಂತರ 9 ಆನೆಗಳು ಒಟ್ಟಿಗೆ ಪ್ರತಿನಿತ್ಯ ತಾಲೀಮಿನಲ್ಲಿ ಭಾಗಿಯಾಗಲಿವೆ ಎಂದು ಡಿಸಿಎಫ್​ ಪ್ರಭುಗೌಡ ತಿಳಿಸಿದ್ದಾರೆ.

ಇದನ್ನೂ ಓದಿ :ಕ್ಯಾಪ್ಟನ್ ಅಭಿಮನ್ಯುವಿಗೆ 525 ಕೆ.ಜಿ ಮರಳು ಮೂಟೆ ಹೊರಿಸಿ ತಾಲೀಮು ಆರಂಭ - Mysuru Dasara 2024

ABOUT THE AUTHOR

...view details