ರಾಮನಗರ:ಈಜಲು ತೆರಳಿದ್ದ ಮೂವರು ಶಾಲಾ ವಿದ್ಯಾರ್ಥಿಗಳು ನೀರು ಪಾಲಾಗಿರುವ ಘಟನೆ ರಾಮನಗರದ ಅಚಲು ಗ್ರಾಮದ ಬೆಟ್ಟದ ಸಮೀಪ ಸಂಭವಿಸಿದೆ. ಮೃತರನ್ನು ಸಬಾದ್ (14), ಸುಲ್ತಾನ್ (13) ಮತ್ತು ರಿಯಾಜ್ ಖಾನ್ (15) ಎಂದು ಗುರುತಿಸಲಾಗಿದ್ದು, ಇವರು ರಾಮನಗರದ ಮೆಹಬೂಬ್ ನಗರದ ನಿವಾಸಿಗಳಾಗಿದ್ದಾರೆ.
ರಾಮನಗರದಲ್ಲಿ ಬೆಟ್ಟಕ್ಕೆ ತೆರಳಿದ್ದ ಸಹಪಾಠಿಗಳು: ಹೊಂಡಕ್ಕೆ ಇಳಿದು ಪ್ರಾಣ ಕಳೆದುಕೊಂಡ ಮೂವರು ವಿದ್ಯಾರ್ಥಿಗಳು - Student Died - STUDENT DIED
ಈಜಲು ಹೊಂಡಕ್ಕೆ ಇಳಿದಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲಾಗಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ಸಂಭವಿಸಿದೆ.
Published : May 17, 2024, 4:11 PM IST
|Updated : May 17, 2024, 5:25 PM IST
ಶಾಲೆಗೆ ರಜೆ ಇದ್ದ ಕಾರಣ 8 ಮಂದಿ ವಿದ್ಯಾರ್ಥಿಗಳು ಅಚ್ಚಲು ಗ್ರಾಮದ ಬಳಿಯ ಬೆಟ್ಟಕ್ಕೆ ಬಂದಿದ್ದಾರೆ. ಈ ಬೆಟ್ಟದಲ್ಲಿ ಸುಮಾರು 10 ಅಡಿ ಆಳದ ನೀರಿನ ಹೊಂಡ ಇದ್ದು, ಇದರಲ್ಲಿ ಮೂವರು ವಿದ್ಯಾರ್ಥಿಗಳು ಈಜಲು ಇಳಿದಿದ್ದಾರೆ. ಈ ಸಂದರ್ಭದಲ್ಲಿ ಈಜು ಬಾರದೇ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಮೃತರ ಶವವನ್ನು ಅಗ್ನಿಶಾಮಕ ಸಿಬ್ಬಂದಿಗಳು ನೀರಿನಿಂದ ಹೊರಕ್ಕೆ ತೆಗೆದಿದ್ದಾರೆ. ರಾಮನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಓದಿ:ಹುಬ್ಬಳ್ಳಿ ಅಂಜಲಿ ಕೊಲೆ ಆರೋಪಿ ಬಂಧನ: ರೈಲಿನಿಂದ ಬಿದ್ದು, ತಲೆ ಮುಖಕ್ಕೆ ಗಾಯ - Anjali Murder Accused Arrested