ಆನೇಕಲ್ (ಬೆಂಗಳೂರು) : ಆನೇಕಲ್ ಹೆಬ್ಬಗೋಡಿ ಜಿ ಆರ್ ಫಾರ್ಮ್ ಹೌಸ್ನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಬ್ಬಗೋಡಿ ಪೊಲೀಸರಾದ ಬೀಟ್ ಪೊಲೀಸ್ ದೇವರಾಜ್, ಎಎಸ್ಐ ನಾರಾಯಣಸ್ವಾಮಿ ಹಾಗೂ ಹೆಚ್ಸಿ ಗಿರೀಶರನ್ನು ಹೊಣೆ ಮಾಡಿ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸಸ್ಪೆಂಡ್ ಮಾಡಿದ್ದಾರೆ.
ಮೊದಲು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪ್ರಕರಣ ದಾಖಲಾಗಿದ್ದು, ಅನಂತರ ರೇವ್ ಪಾರ್ಟಿ ಹೆಬ್ಬಗೋಡಿ ಠಾಣಾ ವ್ಯಾಪ್ತಿ ಎಂದು ತಿಳಿಯುತ್ತಿದ್ದಂತೆ ಪ್ರಕರಣ ಹೆಬ್ಬಗೋಡಿಗೆ ವರ್ಗಾಯಿಸಲಾಗಿತ್ತು. ಅನಂತರ ಸಿಸಿಬಿ ತನಿಖೆ ಬೆಂಗಳೂರು ಗ್ರಾಮಾಂತರ ಎಸ್ಪಿ ನೇತೃತ್ವದ ಸಹಕಾರದಲ್ಲಿ ನಡೆದಿದ್ದು, ಡಿಜಿ ಆದೇಶದಂತೆ ಮತ್ತೆ ಸಿಸಿಬಿಗೆ ಹೆಬ್ಬಗೋಡಿ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಿ ವರ್ಗಾಯಿಸಿತ್ತು. ಈ ನಡುವೆ ವಾರದಿಂದ ರಜೆಯಲ್ಲಿದ್ದ ಎಸ್ಪಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಚ್ ಸಿ ಗಿರೀಶ್ ಮೇಲೆಯೂ ಹೊಣೆ ಹೊರಿಸಿ ಸಸ್ಪೆಂಡ್ ಮಾಡಲಾಗಿದೆ.