ಶಿವಮೊಗ್ಗ:ನಗರದ ಕ್ಲಾರ್ಕ್ ಪೇಟೆ ಬಡಾವಣೆಯ ನಿವಾಸಿಗಳಾದ ಭುವನೇಶ್ವರಿ (45), ಮಾರುತಿ (40) ಹಾಗೂ ದರ್ಶನ್ (21) ಎಂಬ ಒಂದೇ ಕುಟುಂಬದ ಮೂವರು ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭುವನೇಶ್ವರಿ ಸ್ಥಳೀಯ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರು. ಇವರ ಸಹೋದರ ಮಾರುತಿ ಅನಾರೋಗ್ಯದಿಂದಾಗಿ ಮನೆಯಲ್ಲಿದ್ದರು. ಮಗ ದರ್ಶನ್ ಗುಜರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಭುವನೇಶ್ವರಿ ಹಾಗೂ ದರ್ಶನ್ ಕಳೆದೆರಡು ದಿನಗಳಿಂದ ಕೆಲಸಕ್ಕೆ ಹೋಗಿರಲಿಲ್ಲ. ಭುವನೇಶ್ವರಿ ಸಹೋದರ ಶಿವಕುಮಾರ್ ಅವರ ಮನೆಗೆ ದರ್ಶನ್ ಉಪಹಾರಕ್ಕೆ ಹೋಗಿರಲಿಲ್ಲ. ಇದರಿಂದ ಇಂದು ಶಿವ ಕುಮಾರ್, ಭುವನೇಶ್ವರಿ ಅವರ ಮನೆಗೆ ಬಂದು ನೋಡಿದಾಗ ಮನೆ ಬಾಗಿಲು ಹಾಕಿತ್ತು. ನಂತರ ಕಿಟಕಿ ಮೂಲಕ ನೋಡಿದಾಗ ಎಲ್ಲರೂ ಮಲಗಿದ ಸ್ಥಿತಿಯಲ್ಲಿದ್ದರು. ಶಿವಕುಮಾರ್ ಸಾಕಷ್ಟು ಕೂಗಿದರೂ ಯಾರು ಮೇಲೇಳಲಿಲ್ಲ. ಇದರಿಂದ ಗಾಬರಿಗೊಂಡು ಬಾಗಿಲು ಒಡೆದು ನೋಡಿದಾಗ ಎಲ್ಲರೂ ಸಾವನ್ನಪ್ಪಿದ್ದಿ ಗೊತ್ತಾಗಿದೆ.
ಸ್ಥಳಕ್ಕೆ ದೊಡ್ಡಪೇಟೆ ಪೊಲೀಸರು ಆಗಮಿಸಿ, ಮಹಜರು ಕಾರ್ಯ ಮುಗಿಸಿ ಮೃತದೇಹಗಳನ್ನು ಶವಾಗಾರಕ್ಕೆ ರವಾನಿಸಿದ್ದಾರೆ.
ಭುವನೇಶ್ವರಿ ಅವರಿಗೆ ಓರ್ವ ಸಹೋದರಿ ಹಾಗೂ ಮೂವರು ಸಹೋದರರಿದ್ದಾರೆ. ಪತಿ ಸಾವನ್ನಪ್ಪಿದ್ದಾರೆ. ಮಾರುತಿ ಅನಾರೋಗ್ಯದಿಂದ ಬಳಲುತ್ತಿದ್ದು ಭುವನೇಶ್ವರಿ ತಮ್ಮ ಮನೆಯಲ್ಲಿಯೇ ಸಾಕುತ್ತಿದ್ದರು.
ಈ ಕುರಿತು ಸಹೋದರ ಶಿವಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿ, "ಕಳೆದ ಎರಡು ದಿನದಿಂದ ನಮ್ಮ ಅಕ್ಕ ಹಾಗೂ ಅಳಿಯ ಇಬ್ಬರೂ ಸಹ ಫೋನ್ ರಿಸಿವ್ ಮಾಡಿರಲಿಲ್ಲ. ಹೀಗಾಗಿ ನಾನು ಇಂದು ಬೆಳಗ್ಗೆ ಬಂದು ನೋಡಿದಾಗ ಎಲ್ಲರೂ ಮಲಗಿದ ಸ್ಥಿತಿಯಲ್ಲಿದ್ದರು. ನಂತರ ಬಾಗಿಲು ಒಡೆದು ನೋಡಿದಾಗ ಸಾವನ್ನಪ್ಪಿದ್ದು ಗೊತ್ತಾಯಿತು. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರೆಂದು ತಿಳಿದು ಬಂದಿಲ್ಲ. ನಮ್ಮ ಅಕ್ಕ ಎರಡು ಸಂಘದಲ್ಲಿದ್ದರು. ಸಾಲಕ್ಕೆ ಹೆದರಿ ಅವರು ಸಾವನ್ನಪ್ಪಿರುವ ಸಾಧ್ಯತೆ ಇಲ್ಲ" ಎಂದು ತಿಳಿಸಿದರು.
ಭುವನೇಶ್ವರಿ ಸಹೋದರಿ ಮಾಲಾ ಮಾತನಾಡಿ, "ಭುನವೇಶ್ವರಿ ನಮಗೆ ದೊಡ್ಡಕ್ಕ. ಇವರಿಗೆ ದರ್ಶನ್ ಹಾಗೂ ಇನ್ನೂಬ್ಬಳು 9 ವರ್ಷದ ಮಗಳಿದ್ದಾಳೆ. ಅವರನ್ನು ನಾನು ಸಾಕುತ್ತಿದ್ಧೇನೆ. ಇವರು ಹೀಗೆ ಯಾಕೆ ಮಾಡಿಕೊಂಡರು ಎಂಬುದು ಗೊತ್ತಿಲ್ಲ" ಎಂದರು.
ಇದನ್ನೂ ಓದಿ:ಚಾಮರಾಜನಗರ: ಲಾಠಿ ಹಿಡಿದು ಮಹಿಳಾ ಪಿಎಸ್ಐ ರೌಂಡ್ಸ್, ಅಡ್ಡಾದಿಡ್ಡಿ ಪಾರ್ಕಿಂಗ್ ವಾಹನಗಳ ಏರ್ ಔಟ್ - WOMEN PSI WARN