ದಾವಣಗೆರೆ: ಇಲ್ಲಿನ ವಿನೋಬಾ ನಗರದಲ್ಲಿ ನೆಲೆಸಿದ್ದ ಇಡೀ ಕುಟುಂಬ ನಾಪತ್ತೆಯಾಗಿರುವ ಘಟನೆ ನಡೆದಿದೆ. ವಿನೋಬ ನಗರದ ನಿವಾಸಿಗಳಾದ ಪತಿ ಅಂಜನ್ ಬಾಬು (34), ಪತ್ನಿ ನಾಗವೇಣಿ (30) ಮತ್ತು 1 ವರ್ಷದ ಮಗು ನಾಪತ್ತೆಯಾಗಿದ್ದಾರೆ.
ಏಪ್ರಿಲ್ 12ರಿಂದ ಮನೆಯಿಂದ ಹೊರ ಹೋದವರು ಇನ್ನೂ ವಾಪಸ್ ಬಂದಿಲ್ಲ. ಯಾವ ಕಾರಣಕ್ಕೆ ಮನೆ ಬಿಟ್ಟು ಹೋಗಿದ್ದಾರೆ ಎನ್ನುವ ನಿಖರ ಕಾರಣ ತಿಳಿದು ಬಂದಿಲ್ಲ. ಅವರು ಸಂಬಂಧಿಕರಿಗೂ ಯಾವುದೇ ಸೂಚನೆ, ಮಾಹಿತಿ ನೀಡಿಲ್ಲ. ಯಾವುದೇ ಪತ್ರ ಬರೆದಿಟ್ಟಿಲ್ಲ. ಹೀಗಾಗಿ ಇವರು ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣ ಕುತೂಹಲ ಕೆರಳಿಸಿದೆ. ನಾಪತ್ತೆ ಬಗ್ಗೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.