ಕಾರವಾರ: ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳ ಪೈಕಿ ನಾಲ್ವರು ಬಾಲಕಿಯರು ಮುರುಡೇಶ್ವರದಲ್ಲಿ ಸಮುದ್ರ ಪಾಲಾಗಿರುವ ಘಟನೆ ಇಂದು ನಡೆದಿದೆ. ನಾಲ್ವರ ಪೈಕಿ ಒಬ್ಬರ ಮೃತದೇಹ ಪತ್ತೆಯಾಗಿದೆ. ಶ್ರಾವಂತಿ (15) ಮೃತಪಟ್ಟ ವಿದ್ಯಾರ್ಥಿನಿ. ದೀಕ್ಷಾ, ಲಾವಣ್ಯ ಹಾಗೂ ವಂದನಾ ನಾಪತ್ತೆಯಾಗಿದ್ದಾರೆ.
ಮುರುಡೇಶ್ವರಕ್ಕೆ ಪ್ರವಾಸ ಬಂದಿದ್ದ ಓರ್ವ ವಿದ್ಯಾರ್ಥಿನಿ ಸಮುದ್ರದಲ್ಲಿ ಮುಳುಗಿ ಸಾವು, ಮೂವರು ನಾಪತ್ತೆ - MURDESHWARA BEACH TRAGEDY
ಮುರುಡೇಶ್ವರ ಸಮುದ್ರದಲ್ಲಿ ಅಲೆಗಳ ಸೆಳೆತಕ್ಕೆ ಸಿಲುಕಿ ಓರ್ವ ವಿದ್ಯಾರ್ಥಿನಿ ಮೃತಪಟ್ಟು, ಮೂವರು ನಾಪತ್ತೆಯಾದ ಘಟನೆ ನಡೆದಿದೆ.
Published : Dec 10, 2024, 10:38 PM IST
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ಒಟ್ಟು 54 ವಿದ್ಯಾರ್ಥಿಗಳು ಮುರುಡೇಶ್ವರಕ್ಕೆ ಬಂದಿದ್ದರು. ದೇವರ ದರ್ಶನ ಮುಗಿಸಿ ಬಳಿಕ ಸಮುದ್ರದಲ್ಲಿ ಈಜಲು ತೆರಳಿದ್ದಾರೆ. ಏಳು ವಿದ್ಯಾರ್ಥಿನಿಯರು ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದುದನ್ನು ಗಮನಿಸಿದ ಮೀನುಗಾರರು ಮೂವರನ್ನು ರಕ್ಷಿಸಿದ್ದಾರೆ. ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿದ್ದರೆ, ಮೂವರು ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಶೋಧ ನಡೆಯುತ್ತಿದೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ: ಪೊಲೀಸರಿಂದ ಲಾಠಿ ಪ್ರಹಾರ, ಹಲವರಿಗೆ ಗಾಯ; ಸ್ವಾಮೀಜಿ, ಯತ್ನಾಳ್ ವಶಕ್ಕೆ