ಕರ್ನಾಟಕ

karnataka

ಕೋರ್ಟ್ ಆವರಣದಲ್ಲಿ ನಿಲ್ಲಿಸಿದ್ದ ಕಾಮಗಾರಿ ವಾಹನ ಕದ್ದೊಯ್ದಿದ್ದ ಕಳ್ಳರ ಬಂಧನ - Police arrested Thieves

By ETV Bharat Karnataka Team

Published : Jul 20, 2024, 4:03 PM IST

ಇಬ್ಬರು ಕಳ್ಳರನ್ನು ಜಿಗಣಿಯಲ್ಲಿ ಬಂಧಿಸಿರುವ ಹಲಸೂರು ಗೇಟ್ ಠಾಣೆಯ ಪೊಲೀಸರು ಇನ್ನಿಬ್ಬರು ಕಳ್ಳರಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.

Halasuru Gate Police Station
ಹಲಸೂರು ಗೇಟ್ ಪೊಲೀಸ್ ಠಾಣೆ (ETV Bharat)

ಬೆಂಗಳೂರು: ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಕಾಮಗಾರಿಗೆ ಎಂದು ತಂದು ನಿಲ್ಲಿಸಿದ್ದ ಹಿಟ್ಯಾಚಿ ವಾಹನವನ್ನೇ ಕದ್ದೊಯ್ದಿದ್ದ ಇಬ್ಬರು ಆರೋಪಿಗಳನ್ನು ಹಲಸೂರು ಗೇಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಜಿಗಣಿ ಮೂಲದ ಸಚ್ಚಿದಾನಂದ ಹಾಗೂ ಶಕ್ತಿವೇಲು ಬಂಧಿತ ಆರೋಪಿಗಳು.

ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲಿರುವ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಲಿಫ್ಟ್ ನಿರ್ಮಾಣ ಕಾಮಗಾರಿಗಾಗಿ ಹಿಟ್ಯಾಚಿ ವಾಹನ ತಂದು ನಿಲ್ಲಿಸಲಾಗಿತ್ತು. ಬುಧವಾರ ರಾತ್ರಿ 1 ಗಂಟೆ ಸುಮಾರಿಗೆ ಲಾರಿ ಸಮೇತ ಬಂದಿದ್ದ ನಾಲ್ವರು ಕಳ್ಳರನ್ನು ಸೆಕ್ಯೂರಿಟಿ ಗಾರ್ಡ್ ಪ್ರಶ್ನಿಸಿದ್ದರು. ಈ ವೇಳೆ 'ಹಿಟ್ಯಾಚಿ ನಮ್ಮದೇ, ಕಾಮಗಾರಿ ಕೆಲಸ ಮುಗಿದಿದೆ. ತೆಗೆದುಕೊಂಡು ಹೋಗುತ್ತಿದ್ದೇವೆ' ಎಂದು ನಂಬಿಸಿದ್ದರು. ನಂತರ ಹಿಟ್ಯಾಚಿ ವಾಹನವನ್ನು ಲಾರಿಯಲ್ಲಿ ಹಾಕಿಕೊಂಡು ಎಸ್ಕೇಪ್ ಆಗಿದ್ದರು. ಖದೀಮರ ಕೃತ್ಯ ಕೋರ್ಟ್ ಆವರಣದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಈ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು, ಜಿಗಣಿಯಲ್ಲಿ‌ದ್ದ ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಚಿನ್ನಾಭರಣ ಕಳ್ಳತನ, ಪಶ್ಚಿಮ ಬಂಗಾಳದಲ್ಲಿ ಮಾರಾಟ; 6 ಮಂದಿ ಬಂಧನ

ABOUT THE AUTHOR

...view details