ಬೆಂಗಳೂರು:ಬೆಳಗಿನ ಜಾವ ನಗರಕ್ಕೆ ಬರುವ ಹಾಲನ್ನು ಗುರಿಯಾಗಿಸಿ ಖದೀಮರು ಕಳ್ಳತನ ಮಾಡಿರುವ ಘಟನೆ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಸಂದ್ರದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕಲ್ಲಸಂದ್ರದಲ್ಲಿ ದಿಲೀಪ್ ಎಂಬುವರ ಅಂಗಡಿಯಲ್ಲಿ ಕ್ರೇಟ್ ಗಟ್ಟಲೇ ಹಾಲು ಕದ್ದಿರುವ ಖದೀಮರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕನಕಪುರ ರಸ್ತೆಯ ಕಲ್ಲಸಂದ್ರದಲ್ಲಿ ಹಲವು ವರ್ಷಗಳಿಂದ ದಿಲೀಪ್ ಅವರು ಹಾಲಿನ ಮಾರಾಟ ಮಾಡುತ್ತಿದ್ದಾರೆ. ಬೆಳಗಿನ ಜಾವ ಹಾಲಿನ ಬೂತ್ಗಳಿಗೆ ಸರಬರಾಜು ಆಗುವ ಕ್ರೇಟ್ನಲ್ಲಿ ಹಾಲನ್ನು ಅನ್ಲೋಡ್ ಮಾಡಲಾಗುತ್ತದೆ. ಲಾರಿಯಲ್ಲಿ ಹಾಲಿನ ಪ್ಯಾಕೆಟ್ಗಳನ್ನು ತಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅಂಗಡಿ ಮುಂದೆ ಇಳಿಸಲಾಗುತ್ತದೆ. ಆದರೆ, ಹಾಲಿನ ಬೂತ್ ಮಾಲೀಕರು ತಡವಾಗಿ ಬಂದು ನಂತರ ವ್ಯಾಪಾರ ಆರಂಭಿಸುತ್ತಾರೆ.
ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಬೆಳ್ಳಂ ಬೆಳಗ್ಗೆ ಹಾಲು ಕದಿಯೋದನ್ನೇ ರೂಢಿಸಿಕೊಂಡಿದ್ದಾರೆ. ಇದೇ ರೀತಿ ಕಳೆದ ತಿಂಗಳು 11 ರಂದು ದಿಲೀಪ್ ಅವರ ಹಾಲಿನ ಬೂತ್ಗೆ ಬಂದು ಕೈ ಚಳಕ ತೋರಿಸಿದ್ದರು. ದ್ವಿಚಕ್ರವಾಹನದಲ್ಲಿ ಮೂವರು ಯುವಕರು ಕ್ರೇಟ್ ಗಟ್ಟಲೆ ಹಾಲನ್ನು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ. ಇದೇ ರೀತಿ ಸುಬ್ರಹ್ಮಣ್ಯಪುರದ ಹಲವು ಹಾಲಿನ ಬೂತ್ನಲ್ಲಿ ಕೈಚಳಕ ತೋರಿರುವುದು ಕಂಡು ಬಂದಿದ್ದರೂ ಪೊಲೀಸರು ದೂರು ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದಿಲೀಪ್ ಆರೋಪಿಸಿದ್ದಾರೆ.
ಇದನ್ನೂ ಓದಿ:ಧಾರವಾಡ: ಮನೆಗೆ ಬಂದು ವ್ಯಕ್ತಿಯನ್ನು ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು: ಆರೋಪಿಗಳಿಗಾಗಿ ತಲಾಶ್