ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ: ಅಂಗಡಿಯ ಕ್ಯಾಶ್ ಟೇಬಲ್ ಮುರಿದು 5 ಲಕ್ಷ ರೂಪಾಯಿ ಕಳ್ಳತನ - Chikkaballapur Shop Theft - CHIKKABALLAPUR SHOP THEFT

ಅಂಗಡಿ ಮಾಲೀಕ ಪಕ್ಕದ ಅಂಗಡಿಗೆ ಅಕ್ಕಿ ನೋಡಲು ಹೋಗಿ ಬರುವಷ್ಟರಲ್ಲಿ ಕಳ್ಳರು ಆತನ ಅಂಗಡಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಕದ್ದು ಪರಾರಿಯಾಗಿದ್ದಾರೆ. ಈ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಕಳ್ಳತನ
ಅಂಗಡಿ ಮಾಲೀಕ ಮತ್ತು ಕಳ್ಳರು ಮುರಿದಿರುವ ಕ್ಯಾಶ್​ ಟೇಬಲ್ (ETV Bharat)

By ETV Bharat Karnataka Team

Published : Sep 9, 2024, 10:16 AM IST

ಅಂಗಡಿಯ ಕ್ಯಾಶ್ ಟೇಬಲ್ ಮುರಿದು 5 ಲಕ್ಷ ರೂಪಾಯಿ ಕಳ್ಳತನ (ETV Bharat)

ಚಿಕ್ಕಬಳ್ಳಾಪುರ:ಚಿಂತಾಮಣಿ ನಗರದ ಎಪಿಎಂಸಿ ಮಾರುಕಟ್ಟೆಯ ಅಂಗಡಿಯೊಂದರ ಕ್ಯಾಶ್​ ಟೇಬಲ್ ಮುರಿದ ಕಳ್ಳರು 5 ಲಕ್ಷ ರೂ. ಎಗರಿಸಿದ್ದಾರೆ. ಕೈಲಾಸ್ ಟ್ರೇಡರ್ಸ್ ಎಂಬ​ ಅಂಗಡಿಯಲ್ಲಿ ಘಟನೆ ನಡೆದಿದೆ.

ಸಂತೆ ದಿನವಾದ ಭಾನುವಾರ ಹೆಚ್ಚು ಗ್ರಾಹಕರು ಅಕ್ಕಿ ಖರೀದಿಸಲು ಬಂದಿದ್ದರು. ಹೀಗೆ ಬಂದಿದ್ದ ಗಿರಾಕಿಯೊಬ್ಬರಿಗೆ ಎರಡು ಮೂಟೆ ಅಕ್ಕಿ ಮಾರಾಟ ಮಾಡಲಾಗಿತ್ತು. ತದನಂತರ ಪಕ್ಕದ ಅಂಗಡಿಯಲ್ಲಿ ತಮಗೆ ಬೇಕಾದ ಅಕ್ಕಿ ಖರೀದಿಸಲು ಮಾಲೀಕ ಎಂ.ಎಲ್.ರಾಮಕೃಷ್ಣಪ್ಪ ತೆರಳಿದ್ದರು. ಅಲ್ಲಿಂದ ಬರುವಷ್ಟರಲ್ಲಿ ಕ್ಯಾಷ್ ಟೇಬಲ್‌ ಮುರಿದ ಕಳ್ಳರು ಕೆಲವೇ ಕ್ಷಣಗಳಲ್ಲಿ ಹಣ ದೋಚಿದ್ದಾರೆ.

ಮುರಿದಿರುವ ಕ್ಯಾಶ್​ ಟೇಬಲ್ ಪರೀಶೀಲನೆ ನಡೆಸುತ್ತಿರುವ ಬೆರಳಚ್ಚು ತಜ್ಞರು (ETV Bharat)

ಸಂತೆಯ ದಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತದೆ. ಕೈಲಾಸ್ ಟ್ರೇಡರ್ಸ್​ ಮಾಲೀಕರು ಮಾರಾಟ ಮಾಡಿದ್ದ ಅಕ್ಕಿಯ ಹಣವನ್ನು ಕ್ಯಾಷ್ ಟೇಬಲ್‌ನಲ್ಲಿ ಇಟ್ಟಿರುವುದನ್ನು ಗಮನಿಸಿರುವ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಈ ಕುರಿತು ಎಂ.ಎಲ್.ರಾಮಕೃಷ್ಣ ಚಿಂತಾಮಣಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.

ಕಳ್ಳತನ ನಡೆದ ಕೈಲಾಸ ಟ್ರೇಡರ್ಸ್​ ಅಂಗಡಿಯಲ್ಲಿ ಪೊಲೀಸರಿಂದ ಪರಿಶೀಲನೆ (ETV Bharat)

ನಗರ ಠಾಣೆಯ ಪೊಲೀಸ್​ ಇನ್ಸ್​ಪೆಕ್ಟರ್​ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಮತ್ತು ಶ್ವಾನದಳವರು ಆಗಮಿಸಿ ತಪಾಸಣೆ ನಡೆಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ:ಬೆಳಗಾವಿಯಲ್ಲಿ ಮಹಿಳೆಯರ ಬೆತ್ತಲೆ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್​ಮೇಲ್: ಮೂರು ದೂರು ದಾಖಲು - Blackmailing women

ABOUT THE AUTHOR

...view details