ಕರ್ನಾಟಕ

karnataka

ETV Bharat / state

ತನ್ನ ಪ್ರಿಯತಮೆಯನ್ನ ದೂರ ಮಾಡಲು ಈ ಯುವತಿಯೇ ಕಾರಣವೆಂದು ಹತ್ಯೆ: ತನಿಖೆ ಚುರುಕುಗೊಳಿಸಿದ ಪೊಲೀಸರು - Murder case of young woman in PG - MURDER CASE OF YOUNG WOMAN IN PG

ಬೆಂಗಳೂರಿನ ಕೋರಮಂಗಲದ ಪಿಜಿಯೊಂದರಲ್ಲಿ ನಡೆದಿದ್ದ ಯುವತಿ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.

Murder case  Bengaluru Murder case of young woman in PG
ಶಂಕಿತ ಆರೋಪಿ ಅಭಿಷೇಕ್ ಸುಳಿವು ಪತ್ತೆ (ETV Bharat)

By ETV Bharat Karnataka Team

Published : Jul 26, 2024, 8:45 PM IST

ಬೆಂಗಳೂರು:ಕೋರಮಂಗಲದ ಪಿಜಿಯೊಂದರಲ್ಲಿ ನಡೆದಿದ್ದ ಯುವತಿ ಹತ್ಯೆ ಪ್ರಕರಣವನ್ನು ತನಿಖೆ ಚುರುಕುಗೊಳಿಸಲಾಗಿದ್ದು, ಶಂಕಿತ ಆರೋಪಿ ಅಭಿಷೇಕ್ ಸುಳಿವು ಪತ್ತೆಹಚ್ಚಲಾಗಿದ್ದು ಈತನ ಬಂಧನಕ್ಕಾಗಿ ಮೂರು ವಿಶೇಷ ತಂಡ ರಚಿಸಲಾಗಿದೆ.

ಜುಲೈ 23 ರಂದು ಕೋರಮಂಗಲ ಆರನೇ ಹಂತದಲ್ಲಿರುವ ಪಿಜಿಯೊಂದರಲ್ಲಿ ನೆಲೆಸಿದ್ದ ಕೃತಿಕುಮಾರಿಯನ್ನು ಚಾಕುವಿನಿಂದ ತಿವಿದು ಹತ್ಯೆ ಮಾಡಿ ಮಧ್ಯಪ್ರದೇಶಕ್ಕೆ ಎಸ್ಕೇಪ್ ಆಗಿದ್ದು, ಈತನ ಬಂಧನಕ್ಕಾಗಿ ಶೋಧ ಕಾರ್ಯ ಚುರುಕುಗೊಳಿಸಲಾಗಿದೆ. ಮತ್ತೊಂದೆಡೆ ಯುವತಿಯನ್ನ ಹತ್ಯೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಆಭಿಷೇಕ್, ಇತ್ತೀಚೆಗೆ ಕೆಲಸ ತೊರೆದಿದ್ದ. ತನ್ನ ಗೆಳತಿಯನ್ನ ದೂರ ಮಾಡಲು ಕೃತಿಕುಮಾರಿಯೇ ಕಾರಣ ಎಂದು ಭಾವಿಸಿ ಆಕೆ ನೆಲೆಸಿದ್ದ ಪಿಜಿಗೆ ಜುಲೈ 23ರಂದು ಹೋಗಿದ್ದ.

ಕೃತಿ ಕುಮಾರಿ ತಂಗಿದ್ದ ಕೊಠಡಿಯ ಬಾಗಿಲು ತಟ್ಟಿದ್ದಾನೆ.‌ ಕದ ತೆರೆಯುತ್ತಿದ್ದಂತೆ ಆಕೆಯ ಮೇಲೆ ಚಾಕುವಿನಿಂದ ತಿವಿಯಲು ಯತ್ನಿಸಿದ್ದ.‌ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದರೂ ಯುವತಿ ಮೇಲೆ ಮನಬಂದಂತೆ ಚಾಕುವಿನಿಂದ ಹೊಟ್ಟೆ ಹಾಗೂ ಕುತ್ತಿಗೆ ಇರಿದು ಹತ್ಯೆ ಮಾಡಿದ್ದ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದ. ಹತ್ಯೆಯಾದ ಸಂಪೂರ್ಣವಾಗಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಲೆ ಮಾಡಿದ ಬಳಿಕ ಬಟ್ಟೆ ಬದಲಿಸಿಕೊಂಡು ಆರೋಪಿ ಮಧ್ಯಪ್ರದೇಶಕ್ಕೆ ಪರಾರಿಯಾಗಿರುವ ಬಗ್ಗೆ ಮಾಹಿತಿ ದೊರೆತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಧ್ಯಪ್ರದೇಶದ ಭೋಪಾಲ್ ಮೂಲದ ಅಭಿಷೇಕ್, ಯುವತಿಯನ್ನ ಪ್ರೀತಿಸುತ್ತಿದ್ದ. ಇಬ್ಬರು ಖಾಸಗಿ ಕಂಪನಿಯೊಂದರಲ್ಲಿ‌ ಕೆಲಸ ಮಾಡಿ ಒಂದೇ ಪಿಜಿಯೊಂದರಲ್ಲಿ ವಾಸವಾಗಿದ್ದರು. ಅದೇ ಪಿಜಿಗೆ ಆಗಾಗ ಅಭಿಷೇಕ್ ಬಂದು ಹೋಗುತ್ತಿದ್ದ. ಇತ್ತೀಚೆಗೆ ಇಬ್ಬರ ಪ್ರೀತಿಯಲ್ಲಿ ಬಿರುಕು ಮೂಡಿತ್ತು. ಕಂಪನಿ ತೊರೆದಿದ್ದ ಅಭಿಷೇಕ್ ಬೇರೆ ಕೆಲಸ‌ ಮಾಡುತ್ತಿರಲಿಲ್ಲ. ಅಲ್ಲದೇ ಭೂಪಾಲ್​ಗೆ ತೆರಳಿ ಕೆಲಸ ಮಾಡುತ್ತಿರುವುದಾಗಿ ಸುಳ್ಳು ಹೇಳಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಕೆಲಸಕ್ಕೆ ಹೋಗು ಎಂದು ಅಭಿಷೇಕ್​ಗೆ ಯುವತಿ ಹೇಳಿದರೂ ಕೆಲಸಕ್ಕೆ ಹೋಗದೆ ಸುತ್ತಾಡುತ್ತಿದ್ದ‌. ಈ ವಿಷಯ ಅರಿತು ಅಭಿಷೇಕ್​ನ ಅವೈಡ್ ಮಾಡೋದಕ್ಕೆ ಯುವತಿ ಮುಂದಾಗಿದ್ದಳು. ಇದೇ ವಿಷಯವಾಗಿ ಆಗಾಗ ಬಂದು ಪಿಜಿ ಬಳಿ ಗಲಾಟೆ ಮಾಡುತ್ತಿದ್ದ. ಮನನೊಂದಿದ್ದ ಯುವತಿಯು ಗೆಳತಿ ಕೃತಿಕುಮಾರಿಗೆ ತಿಳಿಸಿದ್ದಳು. ಸುರಕ್ಷತೆಗಾಗಿ ಗೆಳತಿಯನ್ನು ಬೇರೆ ಪಿಜಿಗೆ ಸೇರಿಸಿದ್ದಳು. ಮತ್ತೊಂದೆಡೆ ಅಭಿಷೇಕ್, ಯುವತಿಗೆ ಹಲವು ಬಾರಿ ಪೋನ್ ಮಾಡಿದರೂ ಯುವತಿ ರಿಸೀವ್ ಮಾಡಿರಲಿಲ್ಲ. ಇದರಿಂದ ಸಿಟ್ಟಾದ ಅಭಿಷೇಕ್, ಗೆಳತಿಯು ತನ್ನೊಂದಿಗೆ ದೂರವಾಗಲು ಕೃತಿ ಕುಮಾರಿಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಮಾಹಿತಿ:ಕೊಲೆ ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತ ದಯಾನಂದ ಮಾತನಾಡಿ, ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ಪಿಜಿಗೆ ನುಗ್ಗಿ ಕೊಲೆ ಮಾಡಲಾಗಿದೆ. ಆರೋಪಿ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಆರೋಪಿ ಪಿಜಿ ಬಳಿ ಹೋದಾಗ ಅಲ್ಲಿ ಸೆಕ್ಯುರಿಟಿ ಓರ್ವನಿದ್ದ. ಆರೋಪಿಯನ್ನು ಸೆಕ್ಯುರಿಟಿ ವಾಪಸ್ ಕಳುಹಿಸಿದ್ದ. ಆದರೆ, ಆತನ ಕಣ್ಣುತಪ್ಪಿಸಿ ಪಿಜಿಗೆ ನುಗ್ಗಿ ಆರೋಪಿ ಕೊಲೆ ಮಾಡಿದ್ದಾನೆ. ಆರೋಪಿ ಬಂಧಿಸಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಪಿಜಿಯಲ್ಲಿ ಭದ್ರತಾ ಲೋಪ ಕಂಡು ಬಂದಿಲ್ಲ'' ಎಂದಿದ್ದಾರೆ.

''ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ಪಿಜಿಗೆ ನುಗ್ಗಿ ಕೊಲೆ ಮಾಡಲಾಗಿದೆ. ಆರೋಪಿ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಆರೋಪಿ ಪಿಜಿ ಬಳಿ ಹೋದಾಗ ಅಲ್ಲಿ ಸೆಕ್ಯುರಿಟಿ ಓರ್ವನಿದ್ದ. ಆರೋಪಿಯನ್ನು ಸೆಕ್ಯುರಿಟಿ ವಾಪಸ್ ಕಳುಹಿಸಿದ್ದ. ಆದರೆ, ಆತನ ಕಣ್ಣುತಪ್ಪಿಸಿ ಪಿಜಿಗೆ ನುಗ್ಗಿ ಆರೋಪಿ ಕೊಲೆ ಮಾಡಿದ್ದಾನೆ. ಆರೋಪಿ ಬಂಧಿಸಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಪಿಜಿಯಲ್ಲಿ ಭದ್ರತಾ ಲೋಪ ಕಂಡು ಬಂದಿಲ್ಲ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಪ್ರಚಾರದ ಹುಚ್ಚು: ಮೂಕಸನ್ನೆಯನ್ನ ಅವಹೇಳನ ರೀತಿ ವಿಡಿಯೊ ಮಾಡಿದ್ದ ರೆಡಿಯೋ ಜಾಕಿ ಸೇರಿ ಇಬ್ಬರ ಬಂಧನ - radio jockey arrested

ABOUT THE AUTHOR

...view details