ಬೆಂಗಳೂರು:ಪತ್ನಿ ಶೀಲ ಶಂಕಿಸಿ ಹತ್ಯೆಗೈದಿದ್ದ ಅಪರಾಧಿಗೆ 71ನೇ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕೊತ್ತನೂರು ಪೊಲೀಸ್ ಠಾಣೆ ಆರೋಪಿಯಾಗಿದ್ದ ಒಡಿಶಾ ಮೂಲದ ಪ್ರಹ್ಲಾದ್ ಓಜಾಗೆ ಜೀವಾವಧಿ ಶಿಕ್ಷೆ ಪ್ರಕಟಿಸಿರುವ ನ್ಯಾಯಾಲಯವು ಹತ್ಯೆಯಾಗಿದ್ದ ಪತ್ನಿ 30 ವರ್ಷದ ಟಕೀನಾ ತಂದೆಗೆ ಕಾನೂನು ಸೇವಾಪ್ರಾಧಿಕಾರದಿಂದ ಐದು ಲಕ್ಷ ಪರಿಹಾರ ನೀಡುವಂತೆ ನ್ಯಾ.ಬಾಲಚಂದ್ರ ಭಟ್ ಅದೇಶ ಹೊರಡಿಸಿದ್ದಾರೆ.
ದಂಪತಿ ಒಡಿಶಾ ಮೂಲದರಾಗಿದ್ದು, ಬೆಂಗಳೂರಿನ ಕೊತ್ತನೂರಿನಲ್ಲಿ ವಾಸವಾಗಿದ್ದರು. ನಿರ್ಮಾಣ ಹಂತದ ಕಟ್ಟಡದವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸಮೀಪದ ಶೆಡ್ನಲ್ಲಿ ಇಬ್ಬರು ನೆಲೆಸಿದ್ದರು. ಪತ್ನಿ ಮೇಲೆ ಶೀಲ ಶಂಕಿಸಿ ಪತಿ ಜಗಳವಾಡುತ್ತಿದ್ದ. ಗಲಾಟೆ ವಿಕೋಪಕ್ಕೆ ಹೋಗಿ 2017 ಏಪ್ರಿಲ್ 26ರಂದು ಮನೆಯಲ್ಲಿದ್ದ ಕಬ್ಬಿಣದ ತವಾ ಹಾಗೂ ರಿಪೀಸ್ ಪಟ್ಟಿಯಿಂದ ಹೊಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮಾರನೇ ದಿನ ಮಹಿಳೆ ಸಾವನ್ನಪ್ಪಿದ್ದಳು.