ಕರ್ನಾಟಕ

karnataka

ETV Bharat / state

ಅಪರಿಚಿತನ ಬಳಿ ಖಾಸಗಿ ಫೋಟೋಗಳಿವೆ ಎಂದು ಬೆದರಿಸಿ ಸ್ನೇಹಿತನಿಂದ ಲಕ್ಷಾಂತರ ರೂಪಾಯಿ ಪೀಕಿದ ಸಹೋದರರು - Bengaluru

ಅಪರಿಚಿತನ ಬಳಿ ಖಾಸಗಿ ಫೋಟೋಗಳಿವೆ ಎಂದು ಹೆದರಿಸಿ ಸ್ನೇಹಿತನಿಂದಲೇ ಲಕ್ಷಾಂತರ ರೂಪಾಯಿ ಹಣವನ್ನು ಇಬ್ಬರು ಸಹೋದರರು ವಸೂಲಿ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಲಕ್ಷಾಂತರ ರೂಪಾಯಿ ಪೀಕಿದ ಸಹೋದರರು  ಸ್ನೇಹಿತನಗೆ ಹೆದರಿಸಿ ಹಣ ವಂಚನೆ  ಬೆಂಗಳೂರು  Bengaluru  Money fraud case
ಅಪರಿಚಿತನ ಬಳಿ ಖಾಸಗಿ ಫೋಟೋಗಳಿವೆ ಎಂದು ಹೆದರಿಸಿ ಸ್ನೇಹಿತನಿಂದ ಲಕ್ಷಾಂತರ ರೂಪಾಯಿ ಪೀಕಿದ ಸಹೋದರರು

By ETV Bharat Karnataka Team

Published : Feb 5, 2024, 10:55 AM IST

ಬೆಂಗಳೂರು:ಅಪರಿಚಿತ ವ್ಯಕ್ತಿಯೊಬ್ಬನ ಬಳಿ ನಿನ್ನ ಖಾಸಗಿ ಫೋಟೋಗಳಿವೆ ಎಂದು ಬೆದರಿಸಿ ಸ್ನೇಹಿತನಿಂದಲೇ ಲಕ್ಷ ಲಕ್ಷ ಹಣ ಪಡೆದು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸ್ನೇಹಿತನ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡು ಬರೋಬ್ಬರಿ 65 ಲಕ್ಷ ರೂ. ಪಡೆದು ವಂಚನೆ ಮಾಡಿರುವ ಆರೋಪದ ಮೇಲೆ ಅಕ್ಷಯ್ ಕುಮಾರ್ ಹಾಗೂ ಭರತ್ ಎಂಬ ಸಹೋದರರಿಬ್ಬರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಟಿಎಂ ಲೇಔಟ್ ನಿವಾಸಿಗಳಾದ ಅಕ್ಷಯ್ ಕುಮಾರ್ ಹಾಗೂ ಭರತ್, ಸುಮಾರು 18 ವರ್ಷಗಳಿಂದ ಶಿವಮೊಗ್ಗ ಮೂಲದ ಟೆಕ್ಕಿಯೊಬ್ಬನ ಸ್ನೇಹಿತರಾಗಿದ್ದರು. ಸ್ನೇಹಿತ ಒಳ್ಳೆಯ ಕೆಲಸದಲ್ಲಿದ್ದಾನೆ ಆತನಿಂದ ಹಣ ವಸೂಲಿ ಮಾಡಬಹುದು ಎಂದು ಸಂಚು ರೂಪಿಸಿ, ''ಅಪರಿಚಿತ ವ್ಯಕ್ತಿ ಬಳಿ ನಿನ್ನ ಖಾಸಗಿ ಫೋಟೋಗಳಿವೆ. ಅವುಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆ ಎಂದು ಬೆದರಿಸುತ್ತಿದ್ದಾನೆ. ಅವನಿಗೆ 12 ಲಕ್ಷ ಕೊಟ್ಟರೆ ಫೋಟೋಗಳನ್ನು ಹಿಂಪಡೆಯಬಹುದು ಎಂದು ನಂಬಿಸಿದ್ದಾರೆ. ಸ್ನೇಹಿತರ ಮಾತು ನಂಬಿದ ಟೆಕ್ಕಿ ಹಣ ಕೊಟ್ಟಿದ್ದಾನೆ. ಬಳಿಕ ಹಂತ ಹಂತವಾಗಿ ಟೆಕ್ಕಿಯಿಂದ ಹಣ ಪಡೆದುದಲ್ಲದೇ ಆತನ ಸಹೋದರಿಯನ್ನೂ ನಂಬಿಸಿ ಆರೋಪಿಗಳು ಹಣ ಪಡೆದುಕೊಂಡಿದ್ದಾರೆ.

ಸ್ನೇಹಿತರ ಮಾತು ನಂಬಿದ್ದ ಟೆಕ್ಕಿ, ಮನೆಯವರು, ಸ್ನೇಹಿತರು, ಬ್ಯಾಂಕ್‌ನಲ್ಲಿ ಸಾಲ ಮಾಡಿ 65 ಲಕ್ಷ ರೂಪಾಯಿ ನೀಡಿದ್ದಾರೆ. ಇಷ್ಟಾದರೂ ಆರೋಪಿಗಳ ವಂಚನೆ ಮುಂದುವರೆದಾಗ ಅನುಮಾನಗೊಂಡ ಟೆಕ್ಕಿ, ವಿಧಾನಸೌಧ ಪೊಲೀಸ್ ಠಾಣೆಗೆ ದೂರು‌ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ‌ ಸಹೋದರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಇತ್ತೀಚಿನ ಪ್ರಕರಣ, ಮಹಿಳಾ ಉದ್ಯಮಿಗೆ ₹74 ಲಕ್ಷ ವಂಚನೆ: ಪರಿಸರಸ್ನೇಹಿ ಕೈಚೀಲ ತಯಾರಿಸುವ ಯಂತ್ರ ನೀಡುವುದಾಗಿ ಭರವಸೆ ನೀಡಿ, ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ, ಡಬಲ್​ ಹಣ ಸಂಪಾದನೆ ಮಾಡುವುದಾಗಿ ನಂಬಿಸುವ ಮೂಲಕ ವ್ಯಕ್ತಿಯೊಬ್ಬ ಮಹಿಳಾ ಉದ್ಯಮಿಗೆ 74 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಈ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎನ್ವಿ ಗ್ರೀನ್ ಬಯೋಟೆಕ್ ಇಂಡಿಯಾ ಪ್ರೈವೇಟ್ ಲಿಮಿಡೆಟ್ ವ್ಯವಸ್ಥಾಪಕ ನಿರ್ದೇಶಕ ಅಶ್ವಥ್ ಹೆಗ್ಡೆ ವಿರುದ್ಧ ಮಹಿಳಾ ಉದ್ಯಮಿ ನೀಲಿಮಾ ಎಂಬವರು ನೀಡಿದ್ದರು. ಈ ದೂರಿನ ಅನ್ವಯ ವಂಚನೆ ಮಾಡಿರುವ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು.

ಇದನ್ನೂ ಓದಿ:ಮಂಗಳೂರು: ವಿವಿಧ ವ್ಯಕ್ತಿಗಳ ಹೆಸರಿನಲ್ಲಿ 42 ಸಿಮ್‌ ಕಾರ್ಡ್‌ ಖರೀದಿಸಿದ ಅಪ್ರಾಪ್ತ ಸೇರಿ ಐವರ ಬಂಧನ

ABOUT THE AUTHOR

...view details