ಕರ್ನಾಟಕ

karnataka

ETV Bharat / state

ಟಿ.ಬೇಗೂರು ಪಿಡಿಒ ಲೋಕಾಯುಕ್ತ ಬಲೆಗೆ, ಕಚೇರಿಯಲ್ಲಿಯೇ 20 ಸಾವಿರ ಲಂಚ ಪಡೆದ ಪಿಡಿಒ - LOKAYUKTA RAID

ರಮೇಶ್ ಅವರಿಗೆ ಸೇರಿದ ನಿವೇಶನವನ್ನು ಹೆಂಡತಿಯ ಹೆಸರಿಗೆ ಖಾತಾ ವರ್ಗಾವಣೆ ಮಾಡಿಸಲು ಪಿಡಿಒ ಶೋಭಾರಾಣಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.

T Begur PDO caught by Lokayukta
ಟಿ.ಬೇಗೂರು ಪಿಡಿಓ ಲೋಕಾಯುಕ್ತ ಬಲೆಗೆ (ETV Bharat)

By ETV Bharat Karnataka Team

Published : Jan 25, 2025, 5:42 PM IST

ನೆಲಮಂಗಲ: ತಾಲೂಕಿನ ಟಿ.ಬೇಗೂರು ಗ್ರಾಮ ಪಂಚಾಯಿತಿ ಪಿಡಿಒ ಶೋಭಾರಾಣಿ ಕಚೇರಿಯಲ್ಲಿಯೇ 20 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ರೆಂಡ್ ಹ್ಯಾಂಡ್ ಸಿಕ್ಕಿಬಿದ್ದಿದ್ದಾರೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ನೆಲಮಂಗಲ ತಾಲೂಕಿನ ತೊರೆಕೆಂಪೋಹಳ್ಳಿ ಗ್ರಾಮದ ರಮೇಶ್ ಅವರಿಗೆ ಸೇರಿದ ಖಾಲಿ ನಿವೇಶನ ಟಿ.ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿತ್ತು. ಸದರಿ ನಿವೇಶನವನ್ನು ತಮ್ಮ ಹೆಂಡತಿಯ ಹೆಸರಿಗೆ ಖಾತಾ ವರ್ಗಾವಣೆ ಮಾಡಿಸಲು ಅರ್ಜಿ ಸಲ್ಲಿಸಿದ್ದರು. ಖಾತೆ ಮಾಡಿಕೊಡುವ ವಿಚಾರವಾಗಿ ಮಧ್ಯವರ್ತಿ ರುದ್ರಪ್ಪ ಮೂಲಕ ಪಿಡಿಒ 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚದ ಹಣ ಕೊಡುವ ಸಲುವಾಗಿ ರುದ್ರಪ್ಪ ರಮೇಶ್ ಅವರನ್ನು ಪಂಚಾಯಿತಿ ಕಚೇರಿಗೆ ಕರೆದುಕೊಂಡು ಬಂದಿದ್ದರು. ಲಂಚದ ಹಣ ಸ್ವೀಕರಿಸುವಾಗ ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಎಸ್ಪಿ ಪವನ್ ನಲ್ಲೂರು ನೇತೃತ್ವದ ತಂಡ ದಾಳಿ ಮಾಡಿದೆ. ತಕ್ಷಣವೇ ಶೋಭಾರಾಣಿ ಮತ್ತು ಹಣ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಲೋಕಾಯುಕ್ತ ಬಲೆಗೆ ಬೀಳುತ್ತಿದಂತೆ ಪಿಡಿಒ ಆರೋಗ್ಯ ಸರಿಯಿಲ್ಲ ಎಂದು ನಾಟಕವಾಡಿದ್ದಾರೆ. ಸ್ಥಳೀಯ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿದ ಅಧಿಕಾರಿಗಳು ವಿಚಾರಣೆಯನ್ನು ಮುಂದುವರೆಸಿದ್ದಾರೆ.

ಟಿ.ಬೇಗೂರು ಗ್ರಾಮ ಪಂಚಾಯಿತಿ ಪಿಡಿಒ ಶೋಭರಾಣಿ ಈಗಾಗಲೇ 5 ಬಾರಿ ಅಮಾನತಾಗಿ, ಅವರ ಮೇಲೆ ಭ್ರಷ್ಟಚಾರ ಆರೋಪದ ತನಿಖೆ ನಡೆಯುತ್ತಿದೆ. ಅಮಾನತು ಆದೇಶಕ್ಕೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದು ಮತ್ತೆ ಟಿ.ಬೇಗೂರು ಪಂಚಾಯಿತಿಯಲ್ಲಿ ಪಿಡಿಒ ಆಗಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ:ಶಿವಮೊಗ್ಗ: ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕೇಸ್​ ವರ್ಕರ್

ABOUT THE AUTHOR

...view details