ಬೆಂಗಳೂರು: ನಗರದಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರಿದೆ. ಪ್ರತಿ ಬಡಾವಣೆಯಲ್ಲಿಯೂ ನಾಯಿಗಳು ಬೈಕ್ ಸವಾರರು ಸೇರಿದಂತೆ ಸಂಚರಿಸುವವರಿಗೆ ಸಮಸ್ಯೆೆಯಾಗಿ ಪರಿಣಮಿಸಿವೆ. ಹಲವು ಭಾಗಗಳಲ್ಲಿ ಬೀದಿ ನಾಯಿಗಳು ಗುಂಪುಗಳಲ್ಲಿ ಕಂಡು ಬರುತ್ತಿರುವುದರಿಂದ ಸಾರ್ವಜನಿಕರು ಸಂಚರಿಸಲು ಆತಂಕಪಡುವ ಸ್ಥಿತಿ ನಿರ್ಮಾಣವಾಗಿದೆ.
ನಗರದ ಪ್ರಮುಖ ಶಾಪಿಂಗ್ ಸೆಂಟರ್ ಆಗಿರುವ ಗಾಂಧಿ ಬಜಾರ್, ಲಾಲ್‌ಬಾಗ್, ಸಂಪಂಗಿರಾಮನಗರ, ಬಸವನಗುಡಿ ಸೇರಿದಂತೆ ಹಲವು ಕಡೆಗಳಲ್ಲಿ ಬೀದಿ ನಾಯಿಗಳು ಗುಂಪು ಗುಂಪಾಗಿ ಕಂಡು ಬರುತ್ತಿದ್ದು, ಸಾರ್ವಜನಿಕರು ಸಂಚರಿಸಲು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಸಂಜೆಯ ವೇಳೆಗೆ ಕೆಲವು ನಾಯಿಗಳ ಗುಂಪು ಸಾರ್ವಜನಿಕರಿಗೆ ಕಾಟ ಕೊಡುತ್ತಿದ್ದು, ಯಾವ ವಾಹನಗಳು ಆಗಮಿಸಿದರೂ ಅಟ್ಟಿಸಿಕೊಂಡು ಹೋಗುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿದ್ದು, ಸಂಚರಿಸಲೂ ಆಗದೇ ಜನರು ಹೈರಾಣಾಗಿ ಹೋಗಿದ್ದಾರೆ. ಬೀದಿ ನಾಯಿಗಳ ಈ ಪರಿ ಕಾಟಕ್ಕೆೆ ಬೇಸತ್ತಿರುವ ಸಾರ್ವಜನಿಕರು ಪಾಲಿಕೆಗೆ, ಬೀದಿ ನಾಯಿಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಬೀದಿನಾಯಿಗಳ ಸಂತಾನ ಶಕ್ತಿ ಹರಣ ಪ್ರಯತ್ನದ ನಡುವೆಯೂ ಸಮಸ್ಯೆೆಗಳು ಗಣನೀಯವಾಗಿ ಹೆಚ್ಚಾಗುತ್ತಿದ್ದು, ಜನವರಿಯಿಂದ ಈವರೆಗೆ 11,450 ಬೀದಿ ನಾಯಿ ಕಡಿತ ಪ್ರಕರಣ ದಾಖಲಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ವರದಿಯಾದ ಪ್ರಕರಣಗಳ ಸಂಖ್ಯೆೆ ಕಡಿಮೆಯಾಗಿದೆ.
ನಗರದ ಕುರುಬರಹಳ್ಳಿ, ಲಗ್ಗೆೆರೆ, ರಾಜಾಜಿನಗರ, ಬಸವೇಶ್ವರನಗರ ಸೇರಿದಂತೆ ಹಲವು ಕಡೆಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಪ್ರತಿ ಪ್ರದೇಶಗಳಲ್ಲಿಯೂ 10 ರಿಂದ 12 ನಾಯಿಗಳು ರಾತ್ರಿ ವೇಳೆ ಬೈಕ್ ಸವಾರರಿಗೆ, ದಾರಿ ಹೋಕರಿಗೆ ಗುಂಪು ಗುಂಪಾಗಿ ಬಂದು ಸಮಸ್ಯೆೆಯನ್ನುಂಟು ಮಾಡುತ್ತಿವೆ. ಇದರಿಂದಾಗಿ ವೃದ್ಧರು ಮಕ್ಕಳಾದಿಯಾಗಿ ಎಲ್ಲರೂ ಮನೆಯಿಂದ ಹೊರ ಹೋಗಲು ಆತಂಕ ಪಡುವಂತಾಗಿದೆ.
2019-2020ರಲ್ಲಿ 42,818 ಬೀದಿನಾಯಿ ಕಡಿತದ ಪ್ರಕರಣಗಳಿದ್ದವು. ಆದರೆ, ಈ ವರ್ಷ 16,888 ಮಾತ್ರ ವರದಿಯಾಗಿದ್ದು, ಇದರಲ್ಲಿ ಸಾಕು ನಾಯಿ ಕಚ್ಚಿದ ಪ್ರಕರಣಗಳೂ ಸೇರಿವೆ. ಜನವರಿಯಿಂದ ಪ್ರತಿದಿನ 30 ರಿಂದ 40 ಪ್ರಕರಣಗಳು ದಾಖಲಾಗಿವೆ. 2019ರಲ್ಲಿ 3.10 ಲಕ್ಷ ಬೀದಿ ನಾಯಿಗಳು ಇದ್ದವು. ನಿರಂತರ ಸಂತಾನಶಕ್ತಿ ಹರಣ ನಿಯಂತ್ರಣ (ಎಬಿಸಿ) ಕಾರ್ಯಕ್ರಮಗಳೊಂದಿಗೆ, 2023ರಲ್ಲಿ ಸಮೀಕ್ಷೆಯ ಪ್ರಕಾರ ಸಂಖ್ಯೆೆ 2.7 ಲಕ್ಷಕ್ಕೆೆ ಕಡಿಮೆಯಾಗಿದೆ.
ನಗರದಲ್ಲಿ 2,79,335 ಬೀದಿ ನಾಯಿಗಳಿದ್ದು, 1,65,341 ಗಂಡು ನಾಯಿಗಳಾದರೆ 82,757 ಹೆಣ್ಣು ನಾಯಿಗಳಾಗಿವೆ. 37,394 ಬೀದಿ ನಾಯಿಗಳಿಗೆ ಲಸಿಕೆ ಹಾಕಲಾಗಿದೆ. ರಾಜ್ಯದಲ್ಲಿ ಪ್ರತಿವರ್ಷ 25ಕ್ಕೂ ಅಧಿಕ ಜನರು ಮೃತಪಟ್ಟಿದ್ದು, 2022ರಲ್ಲಿ 32 ಜನರು ಹಾಗೂ ಈ ವರ್ಷ 12ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದಾರೆ. ಶೇ. 40 ರಷ್ಟು ಸಾಕು ನಾಯಿಗಳು ದಾಳಿ ಮಾಡಿವೆ. ಬಿಬಿಎಂಪಿ ಪೂರ್ವ - ಪಶ್ಚಿಮ ವಲಯದಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿದೆ.
'ಪಾಲಿಕೆಯು ಬೀದಿನಾಯಿಗಳ ಹಾವಳಿ ತಡೆಯಲು ಕ್ರಮ ಕೈಗೊಳ್ಳುತ್ತಿದೆ. ನಗರದ ಪ್ರಮುಖ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಹೆಚ್ಚಿನ ಬೀದಿನಾಯಿಗಳ ಸಂತತಿಯು ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ ಮತ್ತು ಮಹದೇವಪುರದಂತಹ ಹೊರಪ್ರದೇಶಗಳಲ್ಲಿ ಕಂಡುಬರುತ್ತಿದೆ. ಶೇ. 72ರಷ್ಟು ಬೀದಿನಾಯಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ' ಎಂದು ಬಿಬಿಎಂಪಿ ಅಧಿಕಾರಿ ರವಿಕುಮಾರ್ ಮಾಹಿತಿ ನೀಡಿದ್ದಾರೆ.
ಬೀದಿ ನಾಯಿಗಳ ದಾಳಿಯ ಸಂಖ್ಯೆ:
ಬೊಮ್ಮನಹಳ್ಳಿ: 782
ದಾಸರಹಳ್ಳಿ: 475
ಪೂರ್ವ: 2107
ಮಹದೇವಪುರ: 1359
ಆರ್‌ಆರ್ ನಗರ: 1328
ದಕ್ಷಿಣ ವಲಯ: 1258
ಪಶ್ಚಿಮ ವಲಯ: 3479
ಯಲಹಂಕ ವಲಯ: 660
ಒಟ್ಟು: 11448
ಇದನ್ನೂ ಓದಿ :ಗುಂಡ್ಲುಪೇಟೆ ಠಾಣೆ ಆವರಣದಲ್ಲಿ ಪೊಲೀಸರು ಸಾಕಿದ್ದ ನಾಯಿಯಿಂದ ಮೂವರಿಗೆ ಕಡಿತ - dog bite