ಬೆಂಗಳೂರು:ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 8 ಮಂದಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನೇಮಿಸಿದೆ.
ಹಾಸನ ಪೆನ್ ಡ್ರೈವ್ ಪ್ರಕರಣ: ಎಸ್ಐಟಿ ತಂಡಕ್ಕೆ ಹೆಚ್ಚುವರಿಯಾಗಿ 8 ಮಂದಿ ನೇಮಕ - Hassan pen drive case - HASSAN PEN DRIVE CASE
ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡಕ್ಕೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 8 ಮಂದಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನೇಮಿಸಿದೆ.

ಹಾಸನ ಪೆನ್ ಡ್ರೈವ್ ಪ್ರಕರಣ: ಎಸ್ಐಟಿ ತಂಡಕ್ಕೆ ಹೆಚ್ಚುವರಿಯಾಗಿ 8 ಮಂದಿ ನೇಮಿಸಿದ ಸರ್ಕಾರ (Etv Bharat)
Published : May 4, 2024, 3:55 PM IST
ಎಸ್‌ಪಿ ಸಿ.ಎ.ಸೈಮನ್. ಪಿಐ ರಾವ್ ಗಣೇಶ್ ಜರ್ನಾಧನ್, ಸಿಪಿಐ ಶ್ರೀಧರ್.ಬಿ.ಎಸ್, ಎಎಸ್ಐ ಅಲ್ಲಾಬಕ್ಷ, ಹೆಡ್ ಕಾನ್ಸ್ಟೇಬಲ್ ಸರಸ್ವತಿ, ಕಾನ್ಸ್ಟೇಬಲ್ಗಳಾದ ಎಸ್ ಎನ್. ಮಮತಾ, ಜಾಫರ್ ಸಾಧಿಕ್ ಹಾಗೂ ಹರೀಶ್ ಬಾಬು ಅವರನ್ನ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ತನಿಖೆ ಮುಖ್ಯಸ್ಥರಾಗಿರುವ ಎಡಿಜಿಪಿ ಬಿ.ಕೆ. ಸಿಂಗ್ ನೇತೃತ್ವದ ತಂಡಕ್ಕೆ ಕಳೆದ ವಾರ 18 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.