ದಾವಣಗೆರೆ:ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಕಳೆದ ಬಾರಿ 15 ಸ್ಥಾನದಲ್ಲಿದ್ದ ದಾವಣಗೆರೆ ಜಿಲ್ಲೆ ಈ ಬಾರಿ ಎಸ್ಎಸ್ಎಲ್ಸಿ ಯಲ್ಲಿ 23 ಸ್ಥಾನಕ್ಕೆ ಇಳಿಕೆ ಕಂಡಿದೆ. ದಾವಣಗೆರೆ ನಗರದ ಸಿದ್ದಗಂಗಾ ಶಾಲೆಯ ಗಾನವಿ ಹೆಚ್ ಜಿ ಎಂಬ ವಿದ್ಯಾರ್ಥಿನಿ 625 ಕ್ಕೆ 620 ಅಂಕ ಪಡೆದು ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯ ಮಟ್ಟದಲ್ಲಿ 6ನೇ ಸ್ಥಾನ ಗಳಿಸಿದ್ದಾಳೆ.
ದಾವಣಗೆರೆ ನಗರದ ಗಿರೀಶ್ ಹೆಚ್ ಎನ್, ಜ್ಯೋತಿ ಡಿ.ಎಸ್. ಅವರ ಪುತ್ರಿ ಗಾನವಿ ಕಷ್ಟ ಪಟ್ಟು ತಮ್ಮ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಗಾನವಿ ಹೆಚ್.ಜಿ. ಅವರು ಕನ್ನಡ ಭಾಷೆಯಲ್ಲಿ 124, ಇಂಗ್ಲಿಷ್ 98, ಹಿಂದಿ 100, ಗಣಿತ 100, ವಿಜ್ಞಾನ 98, ಸಮಾಜ 100, 99.20% ಶೇ. ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ.
ದಾವಣಗೆರೆ ನಗರದ ಸಿದ್ದಗಂಗಾ ಶಾಲೆಯ ವರುಣ್ ಆರ್ 611, ಸನಾ ಅಜೀಂ 610, ಉಮ್ಮೆ ಹಫ್ಸಾ 607, ಚಂದನ್ ಎಂ.ಡಿ. ಮತ್ತು ಚೇತನ ಎಂ. 606, ದೀಪಾ ಬಿ.ಜೆ., ಸನತ್ ಟಿ., ಸಿಂಚನ ಕೆ., ಸಿರಿ ಆರ್.ಎಂ.ಯಜ್ಞಶ್ರೀ 604 ಅಂಕಗಳನ್ನು ಗಳಿಸಿದ್ದಾರೆ. 11 ಮಕ್ಕಳು 600ಕ್ಕಿಂತ ಹೆಚ್ಚು, 47 ಮಕ್ಕಳು 90%ಗಿಂತ ಹೆಚ್ಚು 83 ಮಕ್ಕಳು 85%ಗಿಂತ ಹೆಚ್ಚು 190 ಮಕ್ಕಳು ಶೇ 60ಕ್ಕಿಂತ ಹೆಚ್ಚು 33 ಮಕ್ಕಳು ಶೇ 50ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.
ಕನ್ನಡ 125ಕ್ಕೆ 125 ಅಂಕಗಳನ್ನು 12 ಮಕ್ಕಳು, ಹಿಂದಿಯಲ್ಲಿ 28 ಮಕ್ಕಳು, ಗಣಿತದಲ್ಲಿ 1, ಸಮಾಜದಲ್ಲಿ 4 ಮಕ್ಕಳು 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ. ಅಂಧ ವಿದ್ಯಾರ್ಥಿನಿ ಯುಕ್ತಿ ಪಿ. 593 ಅಂಕಗಳನ್ನು, ವಿಕಲಾಂಗ ವಿದ್ಯಾರ್ಥಿ ಗೋವರ್ಧನ ನಾಯ್ಕ ಎಂಬ ವಿದ್ಯಾರ್ಥಿ 372 ಅಂಕಗಳನ್ನು ಪಡೆದು ಉತ್ತೀರ್ಣರಾಗಿರುವುದು ಈ ಬಾರಿ ವಿಶೇಷ.
ಇದನ್ನೂಓದಿ:ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ಮೈಸೂರು ಜಿಲ್ಲೆ: ಉಪನಿರ್ದೇಶಕರು ಹೇಳಿದ್ದೇನು? - SSLC exam result