ಮಂಗಳೂರು: ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ (ಕೆ.ಎಸ್.ಡಿ.ಸಿ) ಅಧೀನದಲ್ಲಿ ಬರುವ ಅಂತಾರಾಷ್ಟ್ರೀಯ ವಲಸಿಗರ ಕೇಂದ್ರ ಮುಖಾಂತರ ಗಲ್ಫ್ (ಯ.ಎ.ಇ.) ದೇಶದಲ್ಲಿ ಹಲವು ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ :ಸ್ಟೀಲ್ ಫಿಕ್ಸರ್, ಮೇಸ್ತ್ರಿ, ಕಾರ್ಪೆಂಟರ್, ಅಲ್ಯುಮಿನಿಯಂ ಫ್ಯಾಬ್ರಿಕೆಟರ್, ಫರ್ನಿಚರ್ ಕಾರ್ಪೆಂಟರ್, ಫರ್ನಿಚರ್ ಪೈಂಟರ್, ಪ್ಲಂಬರ್, ಎಸಿ ಟೆಕ್ನಿಷಿಯನ್, ಡಕ್ಟ್ ಮ್ಯಾನ್, ಹೆಲ್ಪರ್.
ವಸತಿ ಸೌಲಭ್ಯ ಮತ್ತು ಕೆಲಸ ಮಾಡುವ ಸ್ಥಳಕ್ಕೆ ಸಾರಿಗೆ ವ್ಯವಸ್ಥೆ ಒದಗಿಸಲಾಗುತ್ತದೆ. ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿರಬೇಕು. ಜುಲೈ 20ರಂದು ಬೆಂಗಳೂರಿನಲ್ಲಿ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡೇಟಾವನ್ನು ಇಮೇಲ್ ವಿಳಾಸ hr.imck@gmail.com ಗೆ ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ರಾಷ್ಟ್ರೀಯ ವಲಸಿಗರ ಕೇಂದ್ರ, ದೂರವಾಣಿ ಸಂಖ್ಯೆ 9606492213, 9606492214 ಸಂಪರ್ಕಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಓದಿ:JoSAA ಕೌನ್ಸೆಲಿಂಗ್ 2024: 24443 ನೇ ರ‍್ಯಾಂಕ್ ವಿದ್ಯಾರ್ಥಿ ಧಾರವಾಡ ಐಐಟಿಗೆ ಪ್ರವೇಶ - FOURTH ROUND OF SEAT ALLOCATION